For Quick Alerts
  ALLOW NOTIFICATIONS  
  For Daily Alerts

  ಸೆಹ್ವಾಗ್ ಬಾಯಲ್ಲಿ ಬಂದ ಆರುಮುಘ ಡೈಲಾಗ್ ಕೇಳಿ

  By Naveen
  |
  Kannada Chalanachitra cup 2018 : ಕನ್ನಡಲ್ಲಿ ಖಡಕ್ ಡೈಲಾಗ್ ಹೊಡೆದ ಸೆಹ್ವಾಗ್ | Filmibeat Kannada

  ಕನ್ನಡ ಚಲನಚಿತ್ರ ಕಪ್ (ಕೆಸಿಸಿ) ಉದ್ಗಾಟನೆ ಸಮಾರಂಭ ಕಳೆದ ಶನಿವಾರ ಅದ್ದೂರಿಯಾಗಿ ನಡೆದಿದೆ. ಕಾರ್ಯಕ್ರಮದಲ್ಲಿ ವಿಶ್ವ ಕ್ರಿಕೆಟ್ ದಿಗ್ಗಜರಾದ ಸೆಹ್ವಾಗ್, ತಿಲಕರತ್ನೆ ದಿಲ್ಶನ್, ಹರ್ಷಲ್ ಗಿಬ್ಸ್, ಲ್ಯಾನ್ಸ್ ಕ್ಲೂಸ್ನರ್, ಒವೈಸ್ ಶಾ ಭಾಗಿಯಾಗಿದ್ದರು. ಕನ್ನಡ ಚಿತ್ರರಂಗದ ಸ್ಟಾರ್ ಗಳು ಸಹ ಹಾಜರಿದ್ದರು.

  ವಿಶೇಷ ಅಂದರೆ, ಕಾರ್ಯಕ್ರಮದಲ್ಲಿ ಸೆಹ್ವಾಗ್ 'ಕೆಂಪೇಗೌಡ' ಚಿತ್ರದ ಡೈಲಾಗ್ ಹೇಳಿದ್ದಾರೆ. ಆರುಮುಘ ರವಿಶಂಕರ್ ಅವರ ಜನಪ್ರಿಯ ಡೈಲಾಗ್ ಈಗ ಸೆಹ್ವಾಗ್ ಬಾಯಲ್ಲಿ ಕೂಡ ಬಂದಿದೆ. ಕೆಸಿಸಿ ಉದ್ಗಾಟನೆ ಸಮಾರಂಭದ ನಿರೂಪಣೆ ಮಾಡುತ್ತಿದ್ದ ಸೃಜನ್ ಲೋಕೇಶ್ ಸೆಹ್ವಾಗ್ ಗೆ ಚಾಲೆಂಜ್ ಹಾಕಿದರು.

  ಅಂತರಾಷ್ಟ್ರೀಯ ಕ್ರಿಕೆಟರ್ಸ್ ಜೊತೆ ಕರ್ನಾಟಕ ಚಲನಚಿತ್ರ ಕಪ್ ಅಂತರಾಷ್ಟ್ರೀಯ ಕ್ರಿಕೆಟರ್ಸ್ ಜೊತೆ ಕರ್ನಾಟಕ ಚಲನಚಿತ್ರ ಕಪ್

  ಕನ್ನಡ ಚಲನಚಿತ್ರ ಕಪ್ ಎಂದ ಮೇಲೆ ಕನ್ನಡ ಡೈಲಾಗ್ ಹೇಳಬೇಕು ಎಂದ ಸೃಜನ್ ಸೆಹ್ವಾಗ್ ಅವರಿಗೆ ಡೈಲಾಗ್ ಹೇಳಿಕೊಟ್ಟರು. ಆರುಮುಘ ಡೈಲಾಗ್ ಅನ್ನು ಕ್ರಿಕೆಟ್ ಶೈಲಿಯಲ್ಲಿ ಸೆಹ್ವಾಗ್ ಹೇಳಿದರು. ''ಇದು ವಿರೇಂದ್ರ ಸೆಹ್ವಾಗ್ ಕೋಟೆ ಕಣೋ...'' ಎಂದು ಖಡಕ್ ಡೈಲಾಗ್ ಹೊಡೆದರು ಸೆಹ್ವಾಗ್.

  ಅಂದಹಾಗೆ, ಕನ್ನಡ ಚಲನಚಿತ್ರ ಕಪ್ ಎರಡನೇ ಸೀಸನ್ ಇದಾಗಿದೆ. ಈ ಬಾರಿಯ ಟೂರ್ನಿಯಲ್ಲಿ ಶಿವರಾಜ್ ಕುಮಾರ್, ಉಪೇಂದ್ರ, ಗಣೇಶ್, ಯಶ್ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ. ಸಪ್ಟೆಂಬರ್ 8 ಮತ್ತು 9 ರಂದು ಪಂದ್ಯಗಳು ನಡೆಯಲಿದೆ. ಒಟ್ಟು ಆರು ಪಂದ್ಯಗಳು ಇರಲಿದ್ದು, ಫೈನಲ್ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

  English summary
  Indian cricket player Virender Sehwag said kannada movie 'Kempegowda' dialogue in KCC season 2 (Kannada Chalanachitra Cup) cricket tourney inauguration.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X