twitter
    For Quick Alerts
    ALLOW NOTIFICATIONS  
    For Daily Alerts

    ಶಿವಮೊಗ್ಗದ ಅರಸಾಳು ರೈಲು ನಿಲ್ದಾಣಕ್ಕೆ 'ಮಾಲ್ಗುಡಿ' ಹೆಸರು, ಸ್ಥಳಿಯರಿಂದ ವಿರೋಧ

    |

    ಶಂಕರ್ ನಾಗ್ ನಿರ್ದೇಶನದಲ್ಲಿ ಬಂದ ಸೂಪರ್ ಹಿಟ್ ಧಾರಾವಾಹಿ 'ಮಾಲ್ಗುಡಿ ಡೇಸ್' ಈಗ ಒಂದು ರೈಲ್ವೆ ನಿಲ್ದಾಣದ ಹೆಸರಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಅರಸಾಳು ಗ್ರಾಮದ ರೈಲು ನಿಲ್ದಾಣಕ್ಕೆ 'ಮಾಲ್ಗುಡಿ ರೈಲ್ವೆ ನಿಲ್ದಾಣ' ಎಂದು ಹೆಸರಿಡಲು ರೈಲ್ವೆ ಇಲಾಖೆ ನಿರ್ಧಾರ ಮಾಡಿದೆ.

    ಖ್ಯಾತ ಸಾಹಿತಿ ಆರ್‌ ಕೆ ನಾರಾಯಣ್‌ ಅವರ ಸಣ್ಣ ಕಥೆಗಳ ಸಂಕಲನವನ್ನು 'ಮಾಲ್ಗುಡಿ ಡೇಸ್' ಎಂಬ ಧಾರಾವಾಹಿಯಾಗಿ ಶಂಕರ್ ನಾಗ್ ಮಾಡಿದ್ದರು. ಈ ಧಾರಾವಾಹಿಯ ಚಿತ್ರೀಕರಣ ಶಿವಮೊಗ್ಗ ಜಿಲ್ಲೆಯಲ್ಲಿ ಆಗಿತ್ತು. ಅರಸಾಳು ರೈಲು ನಿಲ್ದಾಣದಲ್ಲಿ ಧಾರಾವಾಹಿ ಕೆಲವು ಭಾಗದ ಶೂಟಿಂಗ್ ನಡೆದಿತ್ತು.

    ''ಮಾಲ್ಗುಡಿ ಡೇಸ್' ಕನ್ನಡಕ್ಕೆ ಡಬ್ ಆಗಿ ಬರಲಿ' ಅಭಿಯಾನಕ್ಕೆ ನಿಮ್ಮ ಬೆಂಬಲ ಇದ್ಯಾ.? ''ಮಾಲ್ಗುಡಿ ಡೇಸ್' ಕನ್ನಡಕ್ಕೆ ಡಬ್ ಆಗಿ ಬರಲಿ' ಅಭಿಯಾನಕ್ಕೆ ನಿಮ್ಮ ಬೆಂಬಲ ಇದ್ಯಾ.?

    ಈ ಕಾರಣದಿಂದ ರೈಲ್ವೆ ಇಲಾಖೆ ಅರಸಾಳು ರೈಲು ನಿಲ್ದಾಣವನ್ನು ಮಾಲ್ಗುಡಿ ಎಂಬ ಹೆಸರಿನಲ್ಲಿ ಕರೆಯುವ ನಿರ್ಧಾರಕ್ಕೆ ಬಂದಿದೆ. ಆದರೆ, ಈ ವಿಚಾರವಾಗಿ ಸ್ಥಳಿಯರು ವಿರೋಧ ಮಾಡಿದ್ದಾರೆ. ಐತಿಹಾಸಿಕ ಹಿನ್ನಲೆ ಇರುವ ತಮ್ಮ ಊರಿನ ರೈಲು ನಿಲ್ದಾಣಕ್ಕೆ ಮಾಲ್ಗುಡಿ ಹೆಸರು ಬೇಡ ಎಂದಿದ್ದಾರೆ.

    Indian Railways has decided to rename Arasalu railway station as Malgudi railway station

    'ಅರಸಾಳು ಮಾಲ್ಗುಡಿ' ರೈಲು ನಿಲ್ದಾಣ ಎಂಬ ಹೆಸರು ಇದ್ದರೂ ಪರವಾಗಿಲ್ಲ ಆದರೆ, ಅರಸಾಳು ಎಂಬ ಹೆಸರಿನ ಬದಲಿಗೆ ಮಾಲ್ಗುಡಿ ಹೆಸರು ಬರುವುದು ಗ್ರಾಮ ಜನರಿಗೆ ಬೇಸರ ತಂದಿದೆ. ಇದೇ ಗ್ರಾಮದಲ್ಲಿ ಮಾಲ್ಗುಡಿ ಮ್ಯೂಸಿಯಂ ಸಹ ಮಾಡಲಾಗುತ್ತಿದೆ.

    ಅಂದಹಾಗೆ, ಅರಸಾಳು ರೈಲು ನಿಲ್ದಾಣ ಶಿವಮೊಗ್ಗ ಮತ್ತು ಸಾಗರದ ನಡುವಿನ ರೈಲು ನಿಲ್ದಾಣವಾಗಿದೆ.

    English summary
    Indian Railways has decided to rename Shivamogga district's Arasalu railway station as Malgudi railway station.
    Tuesday, March 5, 2019, 16:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X