ಡ್ರಗ್ಸ್ ಪ್ರಕರಣ: ಇಂದ್ರಜಿತ್ ಲಂಕೇಶ್ ಗೆ ಮತ್ತೆ ಬುಲಾವ್ ನೀಡಿದ ಸಿಸಿಬಿ
ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಗೆ ಸಿಸಿಬಿ ಪೊಲೀಸರು ಮತ್ತೆ ಸಮನ್ಸ್ ನೀಡಿದ್ದಾರೆ.
Recommended Video
ಈ ಹಿಂದೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಿಸಿಬಿ ಪೊಲೀಸರ ವಿಚಾರಣೆ ಎದುರಿಸಿದ್ದರು. ಡ್ರಗ್ಸ್ ಪ್ರಕರಣದ ಆರಂಭದಲ್ಲಿ ತಮಗೆ ಸ್ಯಾಂಡಲ್‌ವುಡ್‌ನಲ್ಲಿ ಯಾರಿಗೆ ಮಾದಕ ದ್ರವ್ಯ ವ್ಯಸನವಿದೆ ಎಂಬುದು ಗೊತ್ತಿದೆ. ಅವರ ಪಟ್ಟಿ ನೀಡುತ್ತೇನೆ ಎಂದಿದ್ದರು ಇಂದ್ರಜಿತ್ ಲಂಕೇಶ್, ಹೀಗಾಗಿ ಇಂದ್ರಜಿತ್ ಲಂಕೇಶ್ ಅವರನ್ನು ಸಿಸಿಬಿ ವಿಚಾರಣೆ ನಡೆಸಿತ್ತು. ಇದೀಗ ಮತ್ತೆ ವಿಚಾರಣೆಗೆ ಕರೆದಿದೆ.
ಡ್ರಗ್ಸ್ ಪ್ರಕರಣದ ಮುಖ್ಯ ಆರೋಪಿಗಳಲ್ಲಿ ಇಬ್ಬರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿಗೆ ಜಾಮೀನು ದೊರೆತ ನಂತರ ಈಗ ಮತ್ತೆ ಇಂದ್ರಜಿತ್ ಲಂಕೇಶ್‌ಗೆ ಸಮನ್ಸ್ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಕೆಲವು ದಿನಗಳ ಹಿಂದೆ ತಮ್ಮ ಸಿನಿಮಾ 'ಶಕೀಲಾ'ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಇಂದ್ರಜಿತ್ ಲಂಕೇಶ್, ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ತನಿಖೆ ತಮಗೆ ತೃಪ್ತಿ ತಂದಿಲ್ಲ ಎಂದಿದ್ದರು. ಕೇವಲ ನಟಿಯರನ್ನಷ್ಟೆ ಟಾರ್ಗೆಟ್ ಮಾಡಲಾಗಿದೆ. ಡ್ರಗ್ಸ್ ಚಟವುಳ್ಳ ನಟರನ್ನು ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದರು ಇಂದ್ರಜಿತ್ ಲಂಕೇಶ್.
ಇದೀಗ ಇದೇ ವಿಷಯಕ್ಕೆ ಕುರಿತಂತೆ ಪ್ರಶ್ನೆ ಮಾಡಲು ಇಂದ್ರಜಿತ್ ಲಂಕೇಶ್ ಅವರನ್ನು ಸಿಸಿಬಿ ವಿಚಾರಣೆಗೆ ಕರೆದಿದೆ ಎನ್ನಲಾಗುತ್ತಿದೆ. ಜನವರಿ 28 ರ ಬೆಳಿಗ್ಗೆ 11 ಗಂಟೆಗೆ ತಾವು ಸಿಸಿಬಿ ಕಚೇರಿಗೆ ಹಾಜರಾಗುವುದಾಗಿ ಇಂದ್ರಜಿತ್ ಲಂಕೇಶ್ ತಿಳಿಸಿದ್ದಾರೆ.
ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ನಟಿ ರಾಗಿಣಿ ದ್ವಿವೇದಿ ಅವರಿಗೆ ಜಾಮೀನು ದೊರೆತಿದೆ. ನಟಿ ಸಂಜನಾ ಗಲ್ರಾನಿ ಅವರಿಗೂ ಜಾಮೀನು ದೊರೆತಿದೆ.


Click it and Unblock the Notifications











