Don't Miss!
- News
ಭಾರತಕ್ಕೆ ಕರೆತಂದ 8 ಚೀತಾ ಪೈಕಿ ಕಿಡ್ನಿ ಸಮಸ್ಯೆಗೆ ತುತ್ತಾದ ಹೆಣ್ಣು ಚೀತಾ, ವೈದ್ಯರ ತಂಡ ಹೇಳಿದ್ದೇನು?
- Sports
ವಿರಾಟ್ ಕೊಹ್ಲಿಗಿಂತ ತಾನು ನಂ.1 ಎಂದಿದ್ದ ಖುರ್ರಂ ಮಂಝೂರ್ ಹೇಳಿಕೆಗೆ ಪಾಕ್ನ ಮಾಜಿ ಕ್ರಿಕೆಟಿಗನಿಂದಲೇ ಟೀಕೆ
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Technology
Samsung Galaxy: ಕೇವಲ 44 ರೂ. ಗಳ ಇಎಮ್ಐನಲ್ಲಿ ಖರೀದಿಸಿ ಗ್ಯಾಲಕ್ಸಿ A14 5G ಫೋನ್!
- Lifestyle
ಬೀಟ್ರೂಟ್ ಹೀಗೆ ಬಳಸಿದರೆ ಮುಖದ ಅಂದ ಹೆಚ್ಚುವುದು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಡಾ ವಿಷ್ಣು ಸ್ಮಾರಕ ಸ್ಥಳ ಪರಿಶೀಲನೆ ಮಾಡಿದ ವಾರ್ತಾ ಇಲಾಖೆ ಆಯುಕ್ತ
ಮೈಸೂರಿನಿಂದ ಸುಮಾರು ಆರು ಕಿಲೋ ಮೀಟರ್‌ಗಳ ದೂರದಲ್ಲಿರುವ ಹಾಲಾಳು ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ದಿವಂಗತ ನಟ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ಸ್ಥಳಕ್ಕೆ ವಾರ್ತಾ ಮತ್ತು ಪ್ರಚಾರ ಇಲಾಖೆ ಆಯುಕ್ತರಾದ ಡಾ ಪಿ.ಎಸ್. ಹರ್ಷ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇಮೇಜ್ ಗ್ಯಾಲರಿ ಮತ್ತು ಸಭಾಂಗಣದ ಕಾಮಗಾರಿ ಆರಂಭಗೊಂಡಿದ್ದು, ವಿಶ್ವ ದರ್ಜೆಯ ಸ್ಮಾರಕ ಸ್ಥಳ ಇದಾಗಬೇಕೆಂಬ ಆಶಯ ತಮ್ಮದಾಗಿದೆ, ರಾಜ್ಯ ಸರ್ಕಾರವೂ ಸಹ ಈ ನಿಟ್ಟಿನಲ್ಲಿ ಅತೀವ ಆಸಕ್ತಿ ವಹಿಸುತ್ತಿದೆ ಎಂದು ಡಾ.ಹರ್ಷ ತಿಳಿಸಿದ್ದಾರೆ.
'ಸ್ನೇಹ
ಪ್ರೀತಿಗೆ
ಸಾಕಾರ
ರೂಪ
ನಮ್ಮ
ವಿಷ್ಣುವರ್ಧನ್':
ಸುಮಲತಾ
ಅಂಬರೀಶ್
ಸುಮಾರು 11 ಕೋಟಿ ರೂಗಳ ಯೋಜನೆ ಇದಾಗಿದ್ದು, ಐದು ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಷ್ಣು ಸ್ಮಾರಕವನ್ನು ಅತ್ಯಂತ ಕ್ಷಿಪ್ರವಾಗಿ ಹಾಗೂ ಉತ್ಕೃಷ್ಟವಾಗಿ ನಾಡಿಗೆ ನೀಡುವ ಸಂಕಲ್ಪಕ್ಕೆ ವಾರ್ತಾ ಇಲಾಖೆ ಬದ್ಧವಾಗಿದೆ ಎಂದು ಹರ್ಷ ಹೇಳಿದರು.
ಪೊಲೀಸ್ ಗೃಹ ನಿರ್ಮಾಣ ಸಂಸ್ಥೆ ಕೈಗೆತ್ತಿಕೊಂಡಿರುವ ಈ ಕಾಮಗಾರಿಯ ನಿರ್ವಹಣೆಯನ್ನು ರೇವನಿ ಪ್ರಸಾದ್ ಕನ್ಸ್ಟ್ರಕ್ಷನ್ ಕಂಪನಿ ಮಾಡುತ್ತಿದ್ದು, ಹನ್ನೊಂದು ತಿಂಗಳ ಒಳಗಾಗಿ ಕನ್ನಡ ನಾಡಿಗೆ ಸಮರ್ಪಣೆ ಮಾಡಲಿದೆ.
ವಿಷ್ಣು
ಪ್ರತಿಮೆ
ಧ್ವಂಸ:
ಸಿಂಹ
ಯಾವತ್ತಿದ್ದರೂ
ಸಿಂಹವೇ-
ವಿಷ್ಣು
ಪುತ್ರಿ
ತಿರುಗೇಟು
ಪರಿಶೀಲನೆ ವೇಳೆ ಸಹಾಯಕ ಇಂಜಿನಿಯರುಗಳಾದ ಮಂಜುನಾಥ್ ಸ್ಮಾರಕದ ರೂಪು ರೂಪು-ರೇಷೆಗಳನ್ನು ನಕ್ಷೆಯೊಂದಿಗೆ ವಿವರಿಸಿದರು. ವಾರ್ತಾ ಅಧಿಕಾರಿ ವಿಜಯಾನಂದ್ ಹಾಗೂ ಅಶೋಕ್ ಕುಮಾರ್ ಸಹ ಹಾಜರಿದ್ದರು.