For Quick Alerts
  ALLOW NOTIFICATIONS  
  For Daily Alerts

  ಕನ್ನಡ ಚಿತ್ರರಂಗದ ಬ್ರಿಲಿಯನ್ಸ್‌ಗೆ ತಲೆ ಬಾಗಿದ 'ಮೇಜರ್' ಅಡಿವಿ ಶೇಷ್!

  |

  ಕನ್ನಡ ಚಿತ್ರರಂಗದ ಗತವೈಭವ ಮರುಕಳಿಸಿದಂತಿದೆ. ಹೌದು, ಸಾಲು ಸಾಲು ಹಿಟ್ ಹಾಗೂ ಒಳ್ಳೆಯ ಕಂಟೆಂಟ್ ಇರುವ ಚಿತ್ರಗಳನ್ನು ಮಾಡುತ್ತಿರುವ ಕನ್ನಡ ಚಿತ್ರರಂಗ ಕಂಟೆಂಟ್ ವಿಚಾರ ಮಾತ್ರವಲ್ಲದೇ ಬಾಕ್ಸ್ ಆಫೀಸ್‌ನಲ್ಲೂ ಸಹ ಅಬ್ಬರಿಸಿದೆ. ಇತ್ತೀಚೆಗೆ ತೆರೆಕಂಡ ಗರುಡ ಗಮನ ವೃಷಭ ವಾಹನ, ಕೆಜಿಎಫ್ ಚಾಪ್ಟರ್ 2, ಜೇಮ್ಸ್, 777 ಚಾರ್ಲಿ ಹಾಗೂ ವಿಕ್ರಾಂತ್ ರೋಣ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿವೆ.

  ಅದರಲ್ಲಿಯೂ ವಿಶೇಷವಾಗಿ ಕೆಜಿಎಫ್ ಚಾಪ್ಟರ್ 2 ದೇಶಾದ್ಯಂತ ಅಬ್ಬರಿಸಿದ ರೀತಿಗೆ ಸಿನಿ ಪ್ರೇಮಿಗಳು ತಲೆ ಬಾಗಿದ್ದಾರೆ. ಇನ್ನು ಇತ್ತೀಚೆಗಷ್ಟೆ ಬಿಡುಗಡೆಗೊಂಡು ಅಬ್ಬರದ ಪ್ರದರ್ಶನ ಕಾಣುತ್ತಿರುವ ಕಾಂತಾರ ಚಿತ್ರ ಕೂಡ ದಾಖಲೆ ಮೇಲೆ ದಾಖಲೆ ಬರೆದು ಸಿನಿ ಪ್ರೇಕ್ಷಕನಿಂದ ಫುಲ್ ಮಾರ್ಕ್ಸ್ ಗಿಟ್ಟಿಸಿಕೊಂಡಿದೆ. ಹೀಗೆ ಈ ಚಿತ್ರಗಳು ಬಿಡುಗಡೆಗೊಂಡ ನಂತರ ಕನ್ನಡ ಚಿತ್ರರಂಗದ ಬಗ್ಗೆ ಕಳಪೆಯಾಗಿ ಮಾತನಾಡುತ್ತಿದ್ದ ಅದೆಷ್ಟೋ ಪರ ಭಾಷಾ ಸಿನಿ ಪ್ರೇಮಿಗಳು ಕನ್ನಡ ಚಿತ್ರರಂಗ ಬದಲಾಗಿದೆ, ಸ್ಯಾಂಡಲ್‌ವುಡ್ ಈಸ್ ಶೈನಿಂಗ್ ಎನ್ನುತ್ತಿದ್ದಾರೆ.

  ಕೇವಲ ಬೇರೆ ಭಾಷೆಯ ಸಿನಿ ಪ್ರೇಮಿಗಳು ಮಾತ್ರವಲ್ಲದೇ ಪರ ಭಾಷೆಯ ಸ್ಟಾರ್ ನಟರೂ ಸಹ ಕನ್ನಡ ಚಿತ್ರರಂಗವನ್ನು ಹೊಗಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಒಳ್ಳೊಳ್ಳೆ ಚಿತ್ರಗಳು ಬರ್ತಿವೆ, ಕನ್ನಡ ಚಿತ್ರರಂಗ ಸದ್ದು ಮಾಡ್ತಿದೆ ಎಂದಿದ್ದಾರೆ. ನಿನ್ನೆಯಷ್ಟೇ ( ಅಕ್ಟೋಬರ್ 9 ) ಬೆಂಗಳೂರಿನಲ್ಲಿ ನಡೆದ ಸೌತ್ ಫಿಲ್ಮ್‌ಫೇರ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ತೆಲುಗಿನ ನ್ಯಾಚುರಲ್ ಸ್ಟಾರ್ ನಾನಿ ಏನ್ ಸಿನಿಮಾಗಳನ್ನು ತೆಗೆಯುತ್ತಿದ್ದಾರೆ ಕನ್ನಡದಲ್ಲಿ ಈ ಮಧ್ಯ, ಕನ್ನಡ ಸಿನಿಮಾ ಬಗ್ಗೆ ಇಂಡಿಯಾ ಪೂರ್ತಿ ಮಾತನಾಡಿಕೊಳ್ತಿದೆ, ಎಲ್ಲಿ ಹೋದರೂ ಸಹ ಈ ವರ್ಷ ಕನ್ನಡ ಚಿತ್ರಗಳ ಬಗ್ಗೆ ಮಾತನಾಡ್ತಿದ್ದಾರೆ ಎಂಬುದು ಹೆಮ್ಮೆಯಾಗ್ತಿದೆ. ಪಕ್ಕದ ರಾಜ್ಯ ಮಾತ್ರ ಅಲ್ಲ ನಮ್ಮನ್ನೂ ಕೂಡ ಹೊಡೆದುಹಾಕಿ ಮುಂದೆ ಹೋಗಿದ್ದಾರೆ ಎಂದು ಮಾತನಾಡಿಕೊಳ್ತಾ ಇದ್ದಾರೆ' ಎಂದು ಹೊಗಳಿದರು.

  ಹೀಗೆ ನಾನಿ ಕನ್ನಡ ಚಿತ್ರರಂಗದ ಕುರಿತು ಮಾತನಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇನ್ನು ನಾನಿ ಮಾತ್ರವಲ್ಲದೆ ತೆಲುಗಿನ ಮತ್ತೊಬ್ಬ ಭರವಸೆಯ ನಟ, ಹೆಚ್ಚಾಗಿ ಕಂಟೆಂಟ್‌ಗೆ ಒತ್ತು ಕೊಡುವಂತಹ ಕಲಾವಿದ, ಇತ್ತೀಚೆಗಷ್ಟೆ ಮೇಜರ್ ಚಿತ್ರದ ಮೂಲಕ ಸದ್ದು ಮಾಡಿದ್ದ ಅಡಿವಿ ಶೇಷ್ ಕೂಡ ಕನ್ನಡ ಚಿತ್ರಂಗದ ಬಗ್ಗೆ ಟ್ವೀಟ್ ಮಾಡಿ ಹಾಡಿ ಹೊಗಳಿದ್ದಾರೆ. 'ಇತ್ತೀಚಿಗಿನ ದಿನಗಳಲ್ಲಿನ ಕನ್ನಡ ಚಿತ್ರಗಳಲ್ಲಿನ ಬ್ರಿಲಿಯನ್ಸ್‌ನಿಂದ ನಿಜಕ್ಕೂ ಸ್ಫೂರ್ತಿಗೊಳಗಾಗಿದ್ದೇನೆ' ಎಂದು ನಾನಿ ಟ್ವೀಟ್ ಮಾಡಿದ್ದಾರೆ.

  English summary
  Inspired by brilliance in Kannada cinemas in recent days says Adivi Sesh. Read on
  Monday, October 10, 2022, 20:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X