»   » ಮದುವೆ ನಿಕ್ಕಿ ಆಯ್ತು: ನಟಿ ಅಮೂಲ್ಯ 'ಮುಗುಳ್ನಗೆ' ಬಿಟ್ಟಾಯ್ತು.!

ಮದುವೆ ನಿಕ್ಕಿ ಆಯ್ತು: ನಟಿ ಅಮೂಲ್ಯ 'ಮುಗುಳ್ನಗೆ' ಬಿಟ್ಟಾಯ್ತು.!

Posted By:
Subscribe to Filmibeat Kannada

ಕೇವಲ ಹತ್ತು ದಿನಗಳ ಹಿಂದೆಯಷ್ಟೇ.. ಅಂದ್ರೆ ಮಾರ್ಚ್ 6 ರಂದು ಸ್ಯಾಂಡಲ್ ವುಡ್ ನ 'ಬೇಬಿ ಡಾಲ್' ಅಮೂಲ್ಯ ರವರ ನಿಶ್ಚಿತಾರ್ಥ ರಾಜರಾಜೇಶ್ವರಿ ನಗರದ ಮಾಜಿ ಕಾರ್ಪೋರೇಟರ್ ಮಗ ಜಗದೀಶ್ ರವರೊಂದಿಗೆ ಅದ್ಧೂರಿಯಾಗಿ ನೆರವೇರಿತ್ತು.

ಇನ್ನು ಕೆಲವೇ ದಿನಗಳಲ್ಲಿ ಅಮೂಲ್ಯ-ಜಗದೀಶ್ ವಿವಾಹ ನಡೆಯಲಿದೆ. ಹೀಗಿರುವಾಗಲೇ, ಗೋಲ್ಡನ್ ಸ್ಟಾರ್ ಗಣೇಶ್ ರವರ ಜೊತೆ ಒಪ್ಪಿಕೊಂಡಿದ್ದ 'ಮುಗುಳ್ನಗೆ' ಚಿತ್ರದ ನಾಯಕಿ ಸ್ಥಾನದಿಂದ ಅಮೂಲ್ಯ ಕೆಳಗಿಳಿಯುವಂತಾಗಿದೆ.!

'ಮುಗುಳ್ನಗೆ' ಚಿತ್ರದ ನಾಯಕಿ ಬದಲಾದರು.!

ನಟಿ ಅಮೂಲ್ಯ ರವರಿಗೆ ಕಂಕಣ ಭಾಗ್ಯ ಕೂಡಿ ಬಂದ ಬೆನ್ನಲ್ಲೇ 'ಮುಗುಳ್ನಗೆ' ಚಿತ್ರದ ತಾರಾಬಳಗದಲ್ಲಿ ಕೊಂಚ ಬದಲಾವಣೆ ಮಾಡಿದ್ದಾರೆ ನಿರ್ದೇಶಕ ಯೋಗರಾಜ್ ಭಟ್. [ಗಣೇಶ್ ಹಾಗೂ ಶಿಲ್ಪಾ ಗಣೇಶ್ ಗೆ 'ಥ್ಯಾಂಕ್ಸ್' ಹೇಳಿದ ನಟಿ ಅಮೂಲ್ಯ]

ಅಮೂಲ್ಯ ಜಾಗಕ್ಕೆ ಅಪೂರ್ವ ಬಂದರು.!

'ಮುಗುಳ್ನಗೆ' ಚಿತ್ರದ ನಾಯಕಿ ಸ್ಥಾನಕ್ಕೆ ನಟಿ ಅಮೂಲ್ಯ ಬದಲು 'ಸಿದ್ದಾರ್ಥ' ಬೆಡಗಿ ಅಪೂರ್ವ ಅರೋರ ಆಯ್ಕೆ ಆಗಿದ್ದಾರೆ.[ಮದುವೆ ನಂತರ ನಟನೆಗೆ ಗುಡ್ ಬೈ ಹೇಳ್ತಾರಾ ನಟಿ ಅಮೂಲ್ಯ.?]

'ಮುಗುಳ್ನಗೆ' ಚಿತ್ರದಿಂದ ಅಮೂಲ್ಯ ಔಟ್ ಆಗಲು ಕಾರಣವೇನು.?

ನಟಿ ಅಮೂಲ್ಯ ರವರ ಮದುವೆ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯಲಿದೆ. ವಿವಾಹಕ್ಕೆ ಬೆರಳೆಣಿಕೆಯ ದಿನಗಳು ಬಾಕಿ ಉಳಿದಿರುವಾಗ 'ಮುಗುಳ್ನಗೆ' ಚಿತ್ರಕ್ಕಾಗಿ ಇಪ್ಪತ್ತೈದು ದಿನಗಳ ಕಾಲ್ ಶೀಟ್ ನೀಡುವುದು ಅಮೂಲ್ಯಗೆ ಕೊಂಚ ಕಷ್ಟವಾಗಿದೆ. ಅಮೂಲ್ಯ ರವರ ಪರಿಸ್ಥಿತಿ ಅರಿತ 'ಮುಗುಳ್ನಗೆ' ಚಿತ್ರತಂಡ ಈಗ ಅಪೂರ್ವ ಅರೋರ ರವರಿಗೆ ಬುಲಾವ್ ನೀಡಿದ್ದಾರೆ. [ನಟಿ ಅಮೂಲ್ಯಗೆ ಕೂಡಿ ಬಂತು ಕಂಕಣ ಭಾಗ್ಯ: ಹುಡುಗ ಯಾರು.?]

ಹಾಗಂತ 'ಮುಗುಳ್ನಗೆ' ಚಿತ್ರದಲ್ಲಿ ಅಮೂಲ್ಯ ಇಲ್ಲ ಅಂತಿಲ್ಲ.!

ಇಪ್ಪತ್ತೈದು ದಿನಗಳ ಕಾಲ್ ಶೀಟ್ ನೀಡಲಿಲ್ಲ ಅಂತ 'ಮುಗುಳ್ನಗೆ' ಚಿತ್ರದಿಂದ ಅಮೂಲ್ಯ ರವರನ್ನ ಸಂಪೂರ್ಣವಾಗಿ ಹೊರಗಿಟ್ಟಿಲ್ಲ. 'ಮುಗುಳ್ನಗೆ' ಚಿತ್ರದಲ್ಲಿ ನಾಯಕಿ ಪಾತ್ರದ ಬದಲು ವಿಶೇಷ ಪಾತ್ರವೊಂದರಲ್ಲಿ ಅಮೂಲ್ಯ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಅಮೂಲ್ಯ ಕಾಣಿಸಿಕೊಳ್ಳುವ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ.

'ಮುಗುಳ್ನಗೆ' ಚಿತ್ರದಲ್ಲಿ ಮೂವರು ಹೀರೋಯಿನ್ ಗಳು.!

'ಮುಗುಳ್ನಗೆ' ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ರವರಿಗೆ ಮೂವರು ನಾಯಕಿಯರಾಗಿ ಆಶಿಕಾ ರಂಗನಾಥ್, ನಿಖಿತಾ ನಾರಾಯಣ್ ಹಾಗೂ ಅಮೂಲ್ಯ ಸೆಲೆಕ್ಟ್ ಆಗಿದ್ದರು. ಈಗ ಅಮೂಲ್ಯ ಬದಲು ಅಪೂರ್ವ ಅರೋರ ಬಣ್ಣ ಹಚ್ಚಲಿದ್ದಾರೆ. ಅಮೂಲ್ಯ ಕೇಮಿಯೋ ಪಾತ್ರದಲ್ಲಿ ಮಿಂಚಲಿದ್ದಾರೆ.

ಅಪೂರ್ವ ಯಾರು ಅಂತ ಗೊತ್ತು ತಾನೆ.?

ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ಅಭಿನಯದ ಚೊಚ್ಚಲ ಚಿತ್ರ 'ಸಿದ್ದಾರ್ಥ'ದಲ್ಲಿ ಮಿಂಚಿದ್ದು ಇದೇ 'ಅಪೂರ್ವ'. 'ಸಿದ್ದಾರ್ಥ' ನಂತರ 'ಮುಗುಳ್ನಗೆ' ಚಿತ್ರದಲ್ಲಿ ನಟಿಸಲು ಅಪೂರ್ವ ಗ್ರೀನ್ ಸಿಗ್ನಲ್ ನೀಡಿದ್ದಾರೆ.

English summary
Kannada Actress Amulya, who was to play one of the leads in Ganesh starrer 'Mugulu Nage', will now be replaced by Actress Apoorva Arora.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada