»   » ಮಾಲಾಶ್ರೀ ಆಪಾದನೆಗಳಿಗೆ ಉತ್ತರಿಸಲು ಕೆ.ಮಂಜು ಸಿದ್ಧ.!

ಮಾಲಾಶ್ರೀ ಆಪಾದನೆಗಳಿಗೆ ಉತ್ತರಿಸಲು ಕೆ.ಮಂಜು ಸಿದ್ಧ.!

Posted By:
Subscribe to Filmibeat Kannada

''ನಿಮ್ಮ ಪರ್ಫಾಮೆನ್ಸ್ ಚೆನ್ನಾಗಿಲ್ಲ ಎಂಬ ಕಾರಣಕ್ಕೆ ನಿರ್ಮಾಪಕ ಕೆ.ಮಂಜು ಸಿಟ್ಟಾಗಿ 'ಉಪ್ಪು ಹುಳಿ ಖಾರ' ಚಿತ್ರವನ್ನು ನಿಲ್ಲಿಸುವಂತೆ ಹೇಳಿದ್ದಾರೆ. ಸದ್ಯಕ್ಕೆ ನಾನು ಅಸಹಾಯಕ. ನಿಮಗೆ ಕೊಟ್ಟಿರುವ ಅಡ್ವಾನ್ಸ್ ಹಣವನ್ನು ವಾಪಸ್ ನೀಡಿ'' ಎಂದು ನಟಿ ಮಾಲಾಶ್ರೀಗೆ ನೃತ್ಯ ಸಂಯೋಜಕ ಹಾಗೂ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಕಳುಹಿಸಿರುವ 'ವಾಟ್ಸ್ ಆಪ್' ಮೆಸೇಜ್ ಈಗ ಗಾಂಧಿನಗರದಲ್ಲಿ ಕೋಲಾಹಲ ಎಬ್ಬಿಸಿದೆ.

25 ವರ್ಷಗಳಿಂದ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ 'ಬಹು ಬೇಡಿಕೆ'ಯ ನಟಿ ಆಗಿ ಮೆರೆದ ನಟಿ ಮಾಲಾಶ್ರೀ ಪರ್ಫಾಮೆನ್ಸ್ ಬಗ್ಗೆ ಈಗ ಚಕಾರ ಎತ್ತಿರುವ ಬಗ್ಗೆ 'ಕನ್ನಡದ ಕಿರಣ್ ಬೇಡಿ' ಬೇಸರ ಮಾಡಿಕೊಂಡು ಮಾಧ್ಯಮಗಳ ಮುಂದೆ ಬಂದಿದ್ದಾರೆ. [ತುರ್ತು ಸುದ್ದಿಗೋಷ್ಠಿ ಕರೆದು ನಟಿ ಮಾಲಾಶ್ರೀ ಕಣ್ಣೀರಿಟ್ಟಿದ್ದು ಯಾಕೆ?]

ನಿನ್ನೆ ಸುದ್ದಿಗೋಷ್ಠಿ ನಡೆಸಿ, ತಮಗಾದ ಅಪಮಾನವನ್ನು ಬಾಯ್ಬಿಟ್ಟ ಮಾಲಾಶ್ರೀ, ಮಾಧ್ಯಮಗಳ ಎದುರಿಗೆ ನಿರ್ಮಾಪಕ ಕೆ.ಮಂಜುಗೆ ಬೆವರಿಳಿಸಿದರು.

insult-for-malashri-k-manju-and-imran-sardhariya-to-address-pressmeet

ವಿವಾದದ ಕೇಂದ್ರಬಿಂದು ಆಗಿರುವ ನಿರ್ಮಾಪಕ ಕೆ.ಮಂಜು ಹಾಗೂ 'ಉಪ್ಪು ಹುಳಿ ಖಾರ' ಚಿತ್ರದ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಇಂದು ಸುದ್ದಿಗೋಷ್ಠಿ ಕರೆದಿದ್ದಾರೆ.

''ಇಮ್ರಾನ್ ಅವರನ್ನ ನಾನು ಕರೆಸಿದ್ದೇನೆ. ಮಧ್ಯಾಹ್ನದ ಹೊತ್ತಿಗೆ ನಾವು ಪ್ರೆಸ್ ಮೀಟ್ ಮಾಡುತ್ತೇವೆ. ಎಲ್ಲದಕ್ಕೂ ಕ್ಲಾರಿಟಿ ಕೊಡುತ್ತೇನೆ'' ಅಂತ ಮಾಧ್ಯಮಗಳಿಗೆ ನಿರ್ಮಾಪಕ ಕೆ.ಮಂಜು ತಿಳಿಸಿದ್ದಾರೆ. [ಮಾಲಾಶ್ರೀ ನಟನೆ ಬಗ್ಗೆ ಅಂಬಿ, ಶ್ರುತಿ, ಉಮಾಶ್ರೀ ಮಾಡಿದ ಕಾಮೆಂಟ್ ಏನು?]

ಇದುವರೆಗೂ ನಟಿ ಮಾಲಾಶ್ರೀ ಅವರ ಮಾತುಗಳನ್ನ ಕೇಳಿದ್ರಿ, ಇದೀಗ ಸುದ್ದಿಗೋಷ್ಠಿ ನಡೆಸಿ ಇಮ್ರಾನ್ ಸರ್ದಾರಿಯಾ ಹಾಗೂ ಕೆ.ಮಂಜು ಬೇರೇನು ಹೇಳುತ್ತಾರೋ, ಅದು ಎಲ್ಲಿಯವರೆಗೂ ಹೋಗುತ್ತೋ, ನೋಡೋಣ....

English summary
Kannada Actress Malashri has been insulted in the sets of Kannada Movie 'Uppu Huli Khara' by Director Imran Sardhariya and Producer K.Manju. In order to clarify, Producer K.Manju and Director Imran Sardhariya have decided to address the press today.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada