»   » ಅಧಿಕಪ್ರಸಂಗ ಚಿತ್ರರಂಗವನ್ನ ದಾರಿತಪ್ಪಿಸುತ್ತಿದೆ - ಜಗ್ಗೇಶ್

ಅಧಿಕಪ್ರಸಂಗ ಚಿತ್ರರಂಗವನ್ನ ದಾರಿತಪ್ಪಿಸುತ್ತಿದೆ - ಜಗ್ಗೇಶ್

Posted By:
Subscribe to Filmibeat Kannada

ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ನಿರ್ಮಾಪಕರು ಅಪಮಾನ ಮಾಡಿದ್ದಾರೆ. ನಿರ್ಮಾಪಕರ ಸಂಘ ಅಂಥ ಪ್ರೊಡ್ಯೂಸರ್ ಗಳನ್ನ ಸಸ್ಪೆಂಡ್ ಮಾಡುವವರೆಗೂ ಯಾವುದೇ ಪರಿಹಾರ ಸಾಧ್ಯ ಇಲ್ಲ ಅಂತ ಕಲಾವಿದರ ಸಂಘ ನಿರ್ಧಾರ ಕೈಗೊಂಡಿದೆ.

ಕಳೆದ ಭಾನುವಾರ ವಾಣಿಜ್ಯ ಮಂಡಳಿಯಲ್ಲಿ ನಡೆದ ಕಲಾವಿದರ ಸಭೆಯಲ್ಲಿ ನಿರ್ಮಾಪಕರು ಕೊಂಚ ತಾಳ್ಮೆ ವಹಿಸಿದ್ದರೆ, ಸಮಸ್ಯೆ ಇತ್ಯರ್ಥವಾಗುತ್ತಿತ್ತೇನೋ, ಗೊತ್ತಿಲ್ಲ. ಆದ್ರೆ, ಅಂಬರೀಶ್ ವಿರುದ್ಧ ಧಿಕ್ಕಾರ ಕೂಗಿ ಕೆಲ ನಿರ್ಮಾಪಕರು ಇದೀಗ ಸಮಸ್ಯೆಯ ಸುಳಿಗೆ ಸಿಲುಕಿಕೊಂಡಿದ್ದಾರೆ. [ರೆಬೆಲ್ ಸ್ಟಾರ್ ಅಂಬರೀಶ್ ತಂಟೆಗೆ ಬಂದ್ರೆ...ಹುಷಾರ್..!]

jaggesh

ಅಂಬಿಗೆ ಅವಮಾನ ಮಾಡಿದ ನಿರ್ಮಾಪಕರ ಮೇಲೆ ನವರಸ ನಾಯಕ ಜಗ್ಗೇಶ್ ಕೂಡ ಸಿಡಿಮಿಡಿಗೊಂಡಿದ್ದಾರೆ. ಮೊದಲು ನಿರ್ಮಾಪಕರ ಸಮಸ್ಯೆಗಳಿಗೆ ಸ್ಪಂದಿಸಿ, ಪ್ರೊಡ್ಯೂಸರ್ಸ್ ಪರ ನಿಂತಿದ್ದ ಜಗ್ಗೇಶ್ ಈಗ 'ನಿರ್ಮಾಪಕರ ಅಧಿಕಪ್ರಸಂಗ'ತನದ ಬಗ್ಗೆ ಬೇಸರಗೊಂಡಿದ್ದಾರೆ.

ಈ ಕುರಿತು ಜಗ್ಗೇಶ್ ಮಾಡಿರುವ ಟ್ವೀಟ್ ಇಲ್ಲಿದೆ. 'ಹಿರಿಯರಿಗೆ ಗೌರವ' ನೀಡುವುದು ಎಷ್ಟು ಮುಖ್ಯ ಅನ್ನೋದನ್ನ ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ ಜಗ್ಗೇಶ್. ಹಾಗೆ, 'ಆತುರಗಾರನಿಗೆ ಬುದ್ಧಿ ಮಟ್ಟ' ಅಂತ ನಿರ್ಮಾಪಕರಿಗೆ ತಮ್ಮ ಮಾತಿನ ಮೂಲಕ ಜಗ್ಗೇಶ್ ಚಾಟಿ ಬೀಸಿದ್ದಾರೆ.

ಈ ಹಿಂದೆ ನಿರ್ಮಾಪಕರ ಪರ ನಿಂತಿದ್ದ ಜಗ್ಗೇಶ್, ಈಗ ಆಗಿರುವ ಬೆಳವಣಿಗೆಯನ್ನ ಖಂಡಿಸಿದ್ದಾರೆ. ಮುಂದೆ ಜಗ್ಗೇಶ್ ನಿಲುವು ಏನು? ಅವರ ಬೆಂಬಲ ಯಾರ ಕಡೆ ಅನ್ನುವುದು ಸದ್ಯಕ್ಕೆ ಪ್ರಶ್ನೆಯಾಗಿದೆ.

English summary
Kannada Actor Jaggesh has taken his twitter account to react on those Producers who had insulted Ambareesh during the Meeting in KFCC on June 7th. Take a look at Jaggesh tweets.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada