»   » ಬ್ರಾಹ್ಮಣರ ಅವಹೇಳನ; ಕಾನೂನು ತೊಡಕಿನಲ್ಲಿ ನಟ

ಬ್ರಾಹ್ಮಣರ ಅವಹೇಳನ; ಕಾನೂನು ತೊಡಕಿನಲ್ಲಿ ನಟ

By: ಅನಂತರಾಮು, ಹೈದರಾಬಾದ್
Subscribe to Filmibeat Kannada
A still from Dhenikaina Ready
ಈಗಾಗಲೆ ತೆರೆಕಂಡು ಯಶಸ್ಚಿಯಾಗಿ ಪ್ರದರ್ಶನ ಕಾಣುತ್ತಿರುವ ತೆಲುಗಿನ 'ದೇನಿಕೈನಾ ರೆಡಿ' ಚಿತ್ರದ ವಿರುದ್ಧ ಬ್ರಾಹ್ಮಣ ಸಮುದಾಯ ಸಿಡಿದೆದ್ದಿದೆ. ಚಿತ್ರದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿರುವ ಸಂಘಟನೆ, ಚಿತ್ರದ ನಿರ್ಮಾಪಕ ಮೋಹನ್ ಬಾಬು ವಿರುದ್ಧ ಕೇಸು ದಾಖಲಿಸಿದೆ.

ಆದರೆ ಮೋಹನ್ ಬಾಬು ಮಾತ್ರ ತಮ್ಮ ಚಿತ್ರದಲ್ಲಿ ಯಾವುದೇ ಸಮುದಾಯಕ್ಕೆ ಅವಹೇಳನ ಮಾಡಿಲ್ಲ. ಬ್ರಾಹ್ಮಣ ಸಮುದಾಯವನ್ನು ತಾವು ಗೌರವಿಸುತ್ತೇವೆ. ಚಿತ್ರದಲ್ಲಿ ಅವರಿಗೆ ಯಾವುದೇ ರೀತಿ ಅವಹೇಳನ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಚಿತ್ರದಲ್ಲಿ ತಮಗೆ ಅವಹೇಳನ ಮಾಡಲಾಗಿದೆ ಎಂದು ಬ್ರಾಹ್ಮಣ ಸಮುದಾಯ ಕೋರ್ಟ್ ಮೆಟ್ಟಿಲೇರಿತ್ತು. ಈ ಸಂಬಂಧ ಕೋರ್ಟ್ ಆದೇಶದಂತೆ ಮಲಕಜ್ ಗಿರಿ ಪೊಲೀಸರು ನಟ ಮೋಹನ್ ಬಾಬು ಹಾಗೂ ಅವರ ಪುತ್ರ ಮಂಜು ವಿಷ್ಣು ಹಾಗೂ ತೆಲುಗಿನ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ವಿರುದ್ಧ ಕೇಸು ದಾಖಲಿಕೊಂಡಿದ್ದಾರೆ.

ಮೋಹನ್ ಬಾಬು ನಿರ್ಮಿಸಿರುವ ಈ ಚಿತ್ರದಲ್ಲಿ ನಾಯಕ ನಟನಾಗಿ ಅವರ ಪುತ್ರ ಮಂಜು ವಿಷ್ಣುವರ್ಧನ್ ಅಭಿನಯಿಸಿದ್ದಾರೆ. ಈ ಚಿತ್ರದ ಆಡಿಯೋ ಸಿಡಿ ಬಿಡುಗಡೆಗಾಗಿ ಮೋಹನ್ ಬಾಬು ತಮ್ಮ ಪುತ್ರನ ಜೊತೆ ಬೆಂಗಳೂರಿಗೆ ಆಗಮಿಸಿದ್ದರು. ಈ ಆಡಿಯೋ ಬಿಡುಗಡೆ ಸಮಾರಂಭಕ್ಕೆ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಕಿಚ್ಚ ಸುದೀಪ್ ಕೂಡ ಆಗಮಿಸಿದ್ದರು.

ಚಿತ್ರದಲ್ಲಿ ಬ್ರಾಹ್ಮಣ ಸಮುದಾಯದ ಸಂಪ್ರದಾಯವನ್ನು ಅವಹೇಳನ ಮಾಡಲಾಗಿದ್ದು, ಅವರ ಭಾವನೆಗಳಿಗೆ ನೋವುಂಟು ಮಾಡಲಾಗಿದೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಲಾಗಿತ್ತು. ಈ ಸಂಬಂಧ ಕೋರ್ಟ್ ಪೊಲೀಸರಿಗೆ ತನಿಖೆಗೆ ಆದೇಶಿಸಿದ್ದು ಕೇಸು ದಾಖಲಿಸಿಕೊಳ್ಳುವಂತೆ ಸೂಚಿಸಿದೆ.

ವಿವಿಧ ಬ್ರಾಹ್ಮಣ ಸಂಘಟನೆಗಳು ನಟ ಮೋಹನ್ ಬಾಬು ಅವರ ಹೈದರಾಬಾದಿನ ಫಿಲಂ ನಗರ್ ನಲ್ಲಿರುವ ನಿವಾಸದ ಮುಂದೆ ಪ್ರತಿಭಟನೆ ನಡೆಸಿದವು. 'ದೇನಿಕೈನಾ ರೆಡಿ' ಚಿತ್ರವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದವು.

ಚಿತ್ರದಲ್ಲಿ ಬ್ರಾಹ್ಮಣ ಸಮುದಾಯದ ಪುರೋಹಿತರನ್ನು ತಮಾಷೆಯಾಗಿ, ಲೇವಡಿ ಮಾಡಿ ತೋರಿಸಲಾಗಿದೆ. ಮೋಹನ್ ಬಾಬು ಅವರು ಬ್ರಾಹ್ಮಣರ ಕ್ಷಮೆಯಾಚಿಸಬೇಕು. ಚಿತ್ರದಲ್ಲಿನ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆಯಬೇಕು ಎಂದು ಆಗ್ರಹಿಸಿದೆ. (ಪಿಟಿಐ)

English summary
A case was filed tonight against Telugu actor-turned-producer Mohan Babu and three others for allegedly insulting the Brahmin community in his latest movie Dhenikaina Ready. However, Mohan Babu asserted there was nothing in the film that insulted Brahmins or any other community.
Please Wait while comments are loading...