»   » 'ತಾರಕ್'ಗೆ ತಾತನಾಗಲು ದೇವರಾಜ್ ವಿಧಿಸಿದ್ದ ಷರತ್ತು ಏನು?

'ತಾರಕ್'ಗೆ ತಾತನಾಗಲು ದೇವರಾಜ್ ವಿಧಿಸಿದ್ದ ಷರತ್ತು ಏನು?

Posted By:
Subscribe to Filmibeat Kannada
Tarak | Intersting Fact About Devraj In Tarak Movie | Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿರುವ 'ತಾರಕ್' ಸಿನಿಮಾ ಇದೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಟ್ರೈಲರ್ ಬಿಡುಗಡೆಯಾಗಿದ್ದು, ಅಭಿಮಾನಿಗಳ ಕುತೂಹಲವನ್ನ ಹೆಚ್ಚಿಸಿದೆ.

'ತಾರಕ್' ಸಿನಿಮಾ ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಕಥೆಯಾಗಿದ್ದು, ತಾತ ಮತ್ತು ಮೊಮ್ಮಗನ ಜುಗಲ್ ಬಂದಿಯಿಂದ ಕೂಡಿದೆ. ಅಂದ್ಹಾಗೆ, ದರ್ಶನ್ ಗೆ ಈ ಚಿತ್ರದಲ್ಲಿ ತಾತನಾಗಿ ಕಾಣಿಸಿಕೊಂಡಿರುವುದು ಡೈನಾಮಿಕ್ ಹೀರೋ ದೇವರಾಜ್.

ದೇವರಾಜ್ ಅವರು 'ತಾರಕ್'ನಿಗೆ ತಾತನಾಗಲು ಒಪ್ಪಿಕೊಳ್ಳಲು ಒಂದು ಕಂಡೀಷನ್ ಹಾಕಿದ್ದರಂತೆ. ಈ ಕಂಡೀಷನ್ ನಲ್ಲಿ ಚಿತ್ರತಂಡ ಪಾಸ್ ಆದ ನಂತರವೇ ಸಿನಿಮಾಗೆ ಸಹಿ ಮಾಡಿದರಂತೆ. ಹಾಗಿದ್ರೆ, ಏನು ಆ ಕಂಡೀಷನ್? ಮುಂದೆ ಓದಿ....

'ದೇವರಾಜ್'ರನ್ನ ಒಪ್ಪಿಸುವುದು ಸವಾಲಾಗಿತ್ತು

ಇತ್ತೀಚಿನ ದಿನಗಳಲ್ಲಿ ದೇವರಾಜ್ ಅವರು ಅಣ್ಣ, ಅಪ್ಪ, ಪೊಲೀಸ್ ಹೀಗೆ ಒಂದಕ್ಕಿಂತ ಒಂದು ವಿಶೇಷ ಪಾತ್ರಗಳನ್ನ ಮಾಡುತ್ತಾ ಬಂದಿದ್ದಾರೆ. ಆದ್ರೆ, ತಾತನ ಪಾತ್ರ ಒಂದು ರೀತಿಯ ಸರ್ಪ್ರೈಸ್ ಮತ್ತು ಚಾಲೆಂಜಿಂಗ್ ಆಗಿದೆ. ದೇವರಾಜ್ ಅವರನ್ನ ಈ ಪಾತ್ರಕ್ಕೆ ಅಪ್ರೋಚ್ ಮಾಡಿದ್ದು ನಿರ್ದೇಶಕರಿಗೆ ಸವಾಲಾಗಿತ್ತಂತೆ.

ಶುರುವಾಯಿತು ಚಿತ್ರಮಂದಿರದ ಮುಂದೆ 'ಡಿ ಬಾಸ್' ತಾರಕೋತ್ಸವ !

ಕಥೆ ಮತ್ತು ಪಾತ್ರ ಇಷ್ಟವಾಗಿತ್ತು.!

'ತಾರಕ್' ಚಿತ್ರದ ಕಥೆ ಮತ್ತು ಪಾತ್ರ ದೇವರಾಜ್ ಅವರಿಗೆ ತುಂಬ ಇಷ್ಟವಾಗಿತ್ತು. ಆದ್ರೆ, ತಾತನ ಪಾತ್ರದಲ್ಲಿ ಹೇಗೆ ಕಾಣಿಸಿಕೊಳ್ಳಬಹುದು ಎಂಬ ಕುತೂಹಲ ಸ್ವತಃ ದೇವರಾಜ್ ಅವರಿಗೆ ಕಾಡಿತ್ತಂತೆ.

ತುಂಬು ಕುಟುಂಬದ 'ತಾರಕ್' ಟ್ರೇಲರ್ ನೋಡಿದ್ರಾ.?

ಈ ಪಾತ್ರ ಮಾಡಲು ಕಂಡಿಷನ್ ಹಾಕಿದ್ರು

''ಚಿತ್ರದಲ್ಲಿ ತಾನು ಹೇಗೆ ಕಾಣುತ್ತೇನೆ ಎನ್ನುವುದನ್ನ ಮೇಕಪ್ ಸಮೇತ ಟೆಸ್ಟ್ ಮಾಡಬೇಕು. ಅದನ್ನು ನೋಡಿ ಅದು ಇಷ್ಟವಾದರೆ ಮಾತ್ರ ನಾನು ನಟಿಸುತ್ತೇನೆ'' ಎಂದಿದ್ದರಂತೆ.

ಗೆಟಪ್ ನೋಡಿ ಖುಷ್ ಆದ್ರು

ಆಮೇಲೆ, ದೇವರಾಜ್ ಅವರ ಪಾತ್ರದ ಸಂಪೂರ್ಣ ಲುಕ್‍ ನೋಡಿ ಸಮಾಧಾನವಾದರು. ನಂತರವಷ್ಟೇ ತಾತನಾಗಲು ದೇವರಾಜ್ ಒಪ್ಪಿಕೊಂಡರಂತೆ.

ದರ್ಶನ್ 'ತಾರಕ್'ಗೆ ಟಾಲಿವುಡ್ ಪ್ರಿನ್ಸ್ ಚಾಲೆಂಜ್.!

ಈ ವಾರ ರಿಲೀಸ್

ಪ್ರಕಾಶ್ ನಿರ್ದೇಶನ ಮಾಡಿರುವ 'ತಾರಕ್' ಚಿತ್ರದಲ್ಲಿ ಶ್ರುತಿ ಹರಿಹರನ್ ಮತ್ತು ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ದುಶ್ಯಂತ್ ನಿರ್ಮಾಣ ಮಾಡಿದ್ದಾರೆ.

English summary
Dynamic Star Devaraj agreed to do a look test before signing up for Grand Father Role in Tarak.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X