»   » ಬರ್ತಡೇಗೆ ಸಂತಸದ ಗಾಳಿಪಟ ಹಾರಿಸ್ತಿದ್ದಾರೆ ಭಾವನಾ

ಬರ್ತಡೇಗೆ ಸಂತಸದ ಗಾಳಿಪಟ ಹಾರಿಸ್ತಿದ್ದಾರೆ ಭಾವನಾ

By: ಜೀವನರಸಿಕ
Subscribe to Filmibeat Kannada

ದುಂಡುಮುಖದ ಚೆಲುವೆ ಶಿವಮೊಗ್ಗದ ಶಿಖಾ ಭಾವನಾರಾವ್ ಗೆ ಇವತ್ತು (ಮೇ.6) ಬರ್ತಡೇ ಸಂಭ್ರಮ. 27ನೇ ವರ್ಷಕ್ಕೆ ಕಾಲಿಡ್ತಾ ಇರೋ ಭಾವನಾಗೆ ಈ ವರ್ಷ ಸಕ್ಸಸ್ ಫುಲ್ ವರ್ಷವಾಗುತ್ತೆ ಅನ್ನೋ ಹೋಪ್ ಇದೆ. ಶಿವಮೊಗ್ಗದ ತೀರ್ಥಹಳ್ಳಿಯ ಈ ಚೆಲುವೆ ಮೊದಲು ಕಾಣಿಸಿಕೊಂಡ ಸಿನಿಮಾ 'ಗಾಳಿಪಟ'ದಲ್ಲೇ ಚಿತ್ರಪ್ರೇಮಿಗಳ ಮನಗೆದ್ದ ಬ್ಯೂಟಿ.

ಭಾವನಾ ಸಿನಿಲೋಕಕ್ಕೆ ಎಂಟ್ರಿಕೊಟ್ಟಿದ್ದೇ ಆಕಸ್ಮಿಕವಾಗಿ. ಮನೆಯಲ್ಲಿ ಮುದ್ದಿನಮಗಳಾಗಿದ್ದ ಭಾವನಾರಾವ್ ಅವರು ಯೋಗರಾಜ ಭಟ್ಟರ ಮುಂದೆ ಬಂದಾಗ 'ಗಾಳಿಪಟ'ದ ಹೀರೋಯಿನ್ನಾಗಿ ಅವರನ್ನ ಸೆಲೆಕ್ಟ್ ಮಾಡಿದ್ರು. ಆಗ ಆಕ್ಟಿಂಗನ್ನ ಸೀರಿಯಸ್ಸಾಗಿ ತೆಗೆದುಕೊಳ್ಳದ ಈ ಚೆಲುವೆ ಗಾಳಿಪಟ ಸಿನಿಮಾ ಗೆದ್ದ ನಂತರ ಅಲ್ಲಿ ತನ್ನ ಅಭಿನಯವನ್ನ ಎಲ್ಲರೂ ಮೆಚ್ಚಿಕೊಂಡ ನಂತರ ನಟನೆಯಲ್ಲಿ ಮಿಂಚಬೇಕು ಅಂತ ನಿರ್ಧಾರ ಮಾಡಿದ್ರು. [ಕಾಕ್ಸ್ ಟೌನ್ ಸ್ಮಶಾನದಲ್ಲಿ ಭಾವನಾ ಐಟಂ ನಂಬರ್]

2013 ಭಾವನಾರಿಗೆ ಲಕ್ಕಿ ಈಯರ್ ಅಲ್ಲ. 2013ರ ವರ್ಷ ಒಂದೂ ಒಳ್ಳೆಯ ಸಿನಿಮಾಗಳು ಬರಲಿಲ್ಲ. ಆದ್ರೆ 2014ರಲ್ಲಿ ಹೊಸ ಹೊಸ ಪರ್ಫಾಮೆನ್ಸ್ ಮೂಲಕ ಸ್ಯಾಂಡಲ್ ವುಡ್ ಸಿನಿಮಾದಲ್ಲಿ ಮಿಂಚು ಹರಿಸೋಕೆ ಭಾವನಾ ರೆಡಿಯಾಗಿದ್ದಾರೆ. ಈ ವರ್ಷ ಇರೋ ಭಾವನಾ ಸಿನಿಮಾಗಳ ಜೊತೆ ರಾಗಿಮುದ್ದೆ ಪ್ರೇಮಿಯ ಕೆಲವೊಂದು ಇಂಟರೆಸ್ಟಿಂಗ್ ಸಂಗತಿಗಳನ್ನು ನೋಡ್ಕೊಂಡ್ ಬರೋಣ.

ಭಾವನಾಗೆ ರಾಗಿಮುದ್ದೆ ಸೊಪ್ಪಿನ ಸಾರು ಇಷ್ಟ

ಸ್ಮಾರ್ತ ಬ್ರಾಹ್ಮಣರ ಹುಡುಗಿ ಭಾವನಾಗೆ ಅದ್ಹೇಗೆ ಮುದ್ದೆ ಸೊಪ್ಪಿನ ಸಾರು ಇಷ್ಟವಾಗುತ್ತೋ ಗೊತ್ತಿಲ್ಲ. ಯಾಕಂದ್ರೆ ಬ್ರಾಹ್ಮಣರ ಮನೆಗಳಲ್ಲಿ ಸಹಜವಾಗಿ ಹುಳಿ ಸಾರು, ನೀರು ಅದು ಇದೂ ಅಂತ ಮಾಡ್ತಾರೆ ಅಷ್ಟೆ. ಆದ್ರೆ ಭಾವನಾ ಮುದ್ದೆ ಪ್ರೇಮಿ.

ಸಖತ್ ತುಂಟಿ ಈ ಗಾಳಿಪಟದ ಬೆಡಗಿ

ಮನೆಯಲ್ಲಿ ಭಾವನಾ ತುಂಬಾನೇ ತುಂಟಿಯಂತೆ. ಅಪ್ಪ ಅಮ್ಮ ಮಗಳು ಹೇಳಿದಂತೆ ಕೇಳಬೇಕಂತೆ. ಯಾಕಂದ್ರೆ ಭಾವನಾ ಮನೆಯ ಮುದ್ದಿನ ಮಗಳು. ಶಾಲೆ ಕಾಲೇಜಲ್ಲೂ ಭಾವನಾ ನಾಟಿ ಲಡ್ಕಿಯಂತೆ.

ಆಕ್ಟಿಂಗ್ ಗಿಂತ ಡಾನ್ಸ್ ಇಷ್ಟ

ಭಾವನಾ ಪ್ರತಿನಿತ್ಯ ಒಂದಷ್ಟು ಸಮಯ ಡಾನ್ಸ್ ಮಾಡೋದನ್ನ ತಪ್ಪಿಸಿಕೊಳ್ಳೋದಿಲ್ಲ. ಡಾನ್ಸ್ ನಲ್ಲಿ ವಿದ್ವತ್ ಗ್ರೇಡನ್ನೂ ಪಡ್ಕೊಂಡಿರೋ ಭಾವನಾ ಪ್ರೀ ಸಿಕ್ಕಿದಾಗಲೆಲ್ಲ ಡಾನ್ಸ್ ಕಲೀತಾರೆ.

ಫಿಟ್ ಅಂಡ್ ಫೈನ್ ಭಾವನಾ

ಮೊದಲೆಲ್ಲ ಭಾವನಾ ಫುಲ್ ವೀಕ್ ಇದ್ರು. ಇಷ್ಟು ತೆಳ್ಳಗಿದ್ರೆ ಚೆನ್ನಾಗಿ ಕಾಣಲ್ಲ ಅನ್ನೋ ಮಾತಿತ್ತು. ಆದ್ರೆ ಈಗ ಹಾಗಿಲ್ಲ ಭಾವನಾ ಈಗ ಫಿಟ್ ಅಂಡ್ ಫೈನ್, ಸ್ವಲ್ಪ ದಪ್ಪ ಆಗಿದ್ದಾರೆ.

ಬಹುಪರಾಕ್ ಅಂತಿದೆ ಸಿನಿಪರಪಂಚ

ಬಹುಪರಾಕ್ ಚಿತ್ರದಲ್ಲೊಂದು ಸಣ್ಣ ಪಾತ್ರದ ಜೊತೆ ಭರ್ಜರಿ ಡಾನ್ಸ್ ಮಾಡಿದ್ದಾರೆ ಭಾವನಾ. ಬಹುಪರಾಕ್ ನಂತರ ಪರಪಂಚ ಸಿನಿಮಾದಲ್ಲೂ ಒಂದು ಪಾತ್ರ ಮಾಡಿರೋ ಭಾವನಾ ಒಳ್ಳೆಯ ಪಾತ್ರಗಳು ಸಿಕ್ತಿರೋ ಖುಷಿಯಲ್ಲಿದ್ದಾರೆ.

ಗುಲಾಬಿ ಸ್ಟ್ರೀಟ್ ನಲ್ಲಿ ಭಾವನಾ ವಾಕ್

ಭಾವನಾ ಇತ್ತೀಚೆಗೆ ಪಾತ್ರಗಳ ಆಯ್ಕೆಯಲ್ಲಿ ಚೂಸಿ ಆಗಿದ್ದಾರಂತೆ. ತನ್ನ ಪ್ರತಿಭೆಯನ್ನ ಒರೆಗೆ ಹಚ್ಚುವ ಪಾತ್ರಗಳನ್ನ ಮಾಡೋ ನಿರ್ಧಾರ ಮಾಡಿದ್ದಾರೆ. ವೇಶ್ಯೆಯ ಕಥೆಯನ್ನ ಹೇಳೋ ಗುಲಾಬಿ ಸ್ಟ್ರೀಟ್ ಅಂತಹದ್ದೇ ಚಿತ್ರವಂತೆ.

ಹ್ಯಾಪಿ ಬರ್ತಡೇ ಭಾವನಾ

ಈ ಟ್ಯಾಲೆಂಟೆಡ್ ಬ್ಯೂಟಿಗೆ ನಮ್ಮ ಕಡೆಯಿಂದ ಹ್ಯಾಪಿ ಬರ್ತಡೇ. ಭಾವನಾ ಬರುವ ವರ್ಷಗಳಲ್ಲಿ ಭರ್ಜರಿ ಸಿನಿಮಾಗಳನ್ನ ಮಾಡ್ಲಿ ಅನ್ನೋದು ನಮ್ಮ ಆಶಯ.

English summary
Interesting facts about Kannada actress Bhavana Rao. She made her debut in the Kannada multi starrer Gaalipata (2008) winning critical acclaim for her performance. She likes Karnataka favorite food Ragi Ball-Soppina Saaru combination.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada