»   » ಶಂಕರ-ನಿರಂತರ: ಶಂಕ್ರಣ್ಣನಿಂದ ನಾವು ಕಲಿಯಬೇಕಾದದ್ದು ಏನು?

ಶಂಕರ-ನಿರಂತರ: ಶಂಕ್ರಣ್ಣನಿಂದ ನಾವು ಕಲಿಯಬೇಕಾದದ್ದು ಏನು?

Posted By:
Subscribe to Filmibeat Kannada
ಶಂಕರ್ ನಾಗ್ ಹುಟ್ಟುಹಬ್ಬದ ವಿಶೇಷ : ಕೆಲವು ಕೊತೂಹಲಕಾರಿ ಸಂಗತಿಗಳು | Filmibeat Kannada

ನಟ ಶಂಕರ್ ನಾಗ್ ಬದುಕ್ಕಿದ್ದು ಬರಿ 35 ವರ್ಷಗಳು. ಚಿತ್ರರಂಗದಲ್ಲಿ ಇದ್ದಿದ್ದು ಕೇವಲ 13 ವರ್ಷಗಳು. ಆದರೆ ಅವರು ಸಾಧಿಸಿದ್ದು ಮಾತ್ರ ನೂರಾರು ವರ್ಷಕ್ಕೆ ಆಗುವಷ್ಟು.

ಬರಿ ಒಬ್ಬ ಸಿನಿಮಾ ನಟನಾಗಿ ತಾನಾಯ್ತು ತನ್ನ ಪಾಡಾಯ್ತು ಅಂತ ಇದಿದ್ದರೆ ಶಂಕರ್ ನಾಗ್ ಕೂಡ ಮೂರು ಮತ್ತೊಬ್ಬ ಹೀರೋಗಳ ಸಾಲಿಗೆ ಸೇರುತ್ತಿದ್ದರೇನೋ. ಆದ್ರೆ, ಅವರು ತಮ್ಮ ಆಲೋಚನೆಗಳ ಮೂಲಕ ಸಿನಿಮಾ ಪರದೆಯಿಂದ ಆಚೆಗೂ ಬಂದು ಜನರ ಮನಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.

ಚಿತ್ರಗಳು: ಶಂಕರ್ ನಾಗ್ ಅವರ ಅಪರೂಪದ ಕ್ಷಣಗಳು

ಶಂಕರ್ ನಾಗ್ ಇಂದಿಗೂ ಪ್ರಸ್ತುತ. ಅವರ ಜನ್ಮದಿನದ ವಿಶೇಷವಾಗಿ ಅವರಿಂದ ಇಂದಿನ ಯುವ ಜನತೆ ಕಲಿಯಬೇಕಾದ ಕೆಲ ಅಂಶಗಳ ಪಟ್ಟಿ ಮುಂದಿದೆ ಓದಿ...

ಸಮಯ ಪ್ರಜ್ಞೆ

ಶಂಕರ್ ನಾಗ್ ಎಂದು ಸುಮ್ಮನೆ ಟೈಂ ವೆಸ್ಟ್ ಮಾಡಿದವರಲ್ಲ. ಟೈಂ ಪಾಸ್ ಮಾಡುತ್ತಿರಲಿಲ್ಲ. ಅದೇ ಸಮಯವನ್ನು ಸರಿಯಾಗಿ ಬಳಕೆ ಮಾಡುತ್ತಿದ್ದರು. ಎಲ್ಲರಿಗೂ ಇದ್ದ ಹಾಗೆ ಶಂಕರ್ ನಾಗ್ ಅವರಿಗೂ ಇದ್ದದ್ದು 24 ಗಂಟೆಗಳೇ. ಆದರೆ ಅದರಲ್ಲಿಯೇ ಅವರು ಇಂತಹ ಸಾಧನೆ ಮಾಡಿದರು.

ಕಾಯಕವೇ ಕೈಲಾಸ

ಯಾವಾಗಲು ಕೆಲಸ..ಕೆಲಸ...ಅಂತ ಇದ್ದರು ಶಂಕರ್ ನಾಗ್. ಬಸವಣ್ಣನವರ ಮಾತಿನಂತೆ ಕಾಯಕದಲ್ಲಿಯೇ ಕೈಲಾಸ ಎಂದು ನಂಬಿದವರು ಅವರು. ಮೊದಲು ಕೆಲಸ, ಆಮೇಲೆ ಬೇರೆ ಎನ್ನುತ್ತಿದ್ದರು ಶಂಕರ್ ನಾಗ್.

ಬಂಡ ಧೈರ್ಯ

ಶಂಕರ್ ನಾಗ್ ಅವರಿಗೆ 'ಏನನ್ನೂ ಬೇಕಾದರು ಮಾಡಬಲ್ಲೆ' ಎನ್ನುವ ಧೈರ್ಯ ಇತ್ತು. ಅದಕ್ಕೆ ಒಂದು ಉದಾಹಾರಣೆ 'ಒಂದು ಮುತ್ತಿನ ಕಥೆ' ಚಿತ್ರದ ಅಂಡರ್ ವಾಟರ್ ಶೂಟಿಂಗ್. ಶಂಕರ್ ನಾಗ್ ಯಾವುದಕ್ಕೂ ಹೆದರಿದವರಲ್ಲ. ಏಳು ಬೀಳು ಏನೇ ಇದ್ದರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.

ಹೊಸ ಆಲೋಚನೆ

ನಂದಿ ಬೆಟ್ಟಕ್ಕೆ ರೋಪ್ ಕಟ್ಟಬೇಕು, ಬೆಂಗಳೂರಿಗೆ ಮೆಟ್ರೋ ಬರಬೇಕು, ಕಂಟ್ರಿ ಕ್ಲಬ್ ಮಾಡಬೇಕು, ಹೀಗೆ ಹೊಸ ಹೊಸ ಚಿಂತನೆ ಶಂಕರ್ ನಾಗ್ ತಲೆಯಲ್ಲಿ ಇತ್ತು. ಯಾರಿಗೆ ಆಗಲಿ ಹೊಸ ಆಲೋಚನೆ ಇರಬೇಕು. ಅದು ಇದ್ದಾಗಲೇ ಮನುಷ್ಯ ಜೀವಂತ ಇದ್ದಾನೆ ಎನಿಸುತ್ತದೆ.

ಅಪರೂಪದ ಚಿತ್ರಕರ್ಮಿ ಮಿ. ಪರ್ಫೆಕ್ಟ್ ಶಂಕರ್

ವೇಗ ಅಂದರೆ ಶಂಕರ್ ನಾಗ್

ಯಾವುದೇ ಕೆಲಸ ಆದರೂ ಶಂಕರ್ ನಾಗ್ ಇತರರಿಗಿಂತ ಬೇಗ ಮಾಡುತ್ತಿದ್ದರು. ಶಂಕರ್ ನಾಗ್ ಅಂದರೆ ವೇಗ, ವೇಗ ಅಂದರೆ ಶಂಕರ್ ನಾಗ್ ಎನ್ನುವ ಮಾತಿತ್ತು.

'ಶಂಕರಣ್ಣ'ನ ಬಗ್ಗೆ ನೀವು ಕೇಳರಿಯದ ಸಂಗತಿಗಳು

ಡೆಡಿಕೇಶನ್

ಶಂಕರ್ ನಾಗ್ ಸಿನಿಮಾ, ನಾಟಕ, ತಮ್ಮ ಕೆಲಸದ ಮೇಲೆ ತೋರುತ್ತಿದ್ದ ಡೆಡಿಕೇಶನ್ ಅದ್ಭುತ. ಕೆಲಸಕ್ಕೆ ಕುಳಿತರೆ ಹಗಲು ರಾತ್ರಿ ಅಂತ ನೋಡುತ್ತಿರಲಿಲ್ಲ. ''ಸತ್ತ ಮೇಲೆ ಮಲಗುವುದು ಇದ್ದೇ ಇದೆ. ಎದ್ದಿದ್ದಾಗ ಏನಾದ್ರೂ ಸಾಧಿಸು'' ಎಂದು ಹೇಳಿದ್ದರು ಶಂಕ್ರಣ್ಣ.

ರಾತ್ರೋರಾತ್ರಿ ಶಂಕರ್ ನೆನೆದು ಗದ್ಗದಿತರಾಗಿದ್ದ ಅನಂತ್ ನಾಗ್.!

ಇಂದಿಗೂ ಪ್ರಸ್ತುತ

ಶಂಕರ್ ನಾಗ್ ಇಂದಿಗೂ ಪ್ರಸ್ತುತ. ಇಂದಿನ ಯುವಕರಿಗೆ ಅವರಿಗಿಂತ ದೊಡ್ಡ ರೋಲ್ ಮಾಡೆಲ್ ಬೇಕಿಲ್ಲ.

English summary
Interesting facts about Actor Shankar Nag.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada