»   » 'ಶೃಂಗಾರ' ತಾರೆ ಲಕ್ಷ್ಮಿ ರೈ ಕುರಿತ ಕೆಲವು ಸಂಗತಿಗಳು

'ಶೃಂಗಾರ' ತಾರೆ ಲಕ್ಷ್ಮಿ ರೈ ಕುರಿತ ಕೆಲವು ಸಂಗತಿಗಳು

Posted By:
Subscribe to Filmibeat Kannada

ಆಗಾಗ ಗಾಸಿಪ್ ಸುದ್ದಿಗಳಿಗೆ ಸಿಲುಕುತ್ತಿರುವ ತಾರೆಗಳಲ್ಲಿ 'ಮಿಸ್ ಬೆಳಗಾವಿ' ಖ್ಯಾತಿಯ ಲಕ್ಷ್ಮಿ ರೈ ಸಹ ಒಬ್ಬರು. ಕ್ರಿಕೆಟಿಗರಾದ ಶ್ರೀಶಾಂತ್ ಹಾಗೂ ಮಹೇಂದ್ರ ಸಿಂಗ್ ಧೋನಿ ಅವರ ಜೊತೆಗೆ ಸಂಬಂಧ ಕಲ್ಪಿಸಿ ಏನೇನೋ ಸುದ್ದಿಗಳು ಹರಿದಾಡಿದ್ದವು.

ಈ ಘಟನೆಗಳಿಂದ ಲಕ್ಷ್ಮಿ ರೈ ಸಾಕಷ್ಟು ಹೈರಾಣಾಗಿ ಕಡೆಗೆ ಆ ರೀತಿಯ ಗಾಸಿಪ್ ಗಳಿಗೆ ಉತ್ತರಿಸುವುದನ್ನೇ ಕೈ ಬಿಟ್ಟಿದ್ದರು. ಇಂದು (ಮೇ.5) ಲಕ್ಷ್ಮಿ ರೈಗೆ ಜನುಮ ದಿನದ ಸಂಭ್ರಮ. ಅವರ ಪ್ರಾಯ ಒಂದು ವರ್ಷ ವಯಸ್ಸು ಹೆಚ್ಚಾಗಿದೆ. ಮೂರು ಹತ್ತುಗಳನ್ನು ದಾಟಿಯಾಗಿದೆ. ವೃತ್ತಿ ಜೀವನದಲ್ಲೂ ಸಾಕಷ್ಟು ಎತ್ತರಕ್ಕೆ ಏರಿದ್ದಾರೆ ಲಕ್ಷ್ಮಿ ರೈ. [ಜಿಮ್ ಟ್ರೈನರ್ ಜತೆ ಲಕ್ಷ್ಮಿ ರೈ ಸ್ನೇಹಾನಾ ಪ್ರೀತಿನಾ?]

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹೊಸ ಚಿತ್ರ 'ಶೃಂಗಾರ' ಮೂಲಕ ಅವರು ಮತ್ತೆ ಕನ್ನಡಕ್ಕೆ ಅಡಿಯಿಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅವರ ಬಗ್ಗೆ ಅಷ್ಟಾಗಿ ಗೊತ್ತಿಲ್ಲದ ಕೆಲವು ಸಂಗತಿಗಳನ್ನು ಸ್ಲೈಡ್ ನಲ್ಲಿ ನೋಡೋಣ ಬನ್ನಿ...

ಲಕ್ಷ್ಮಿ ರೈ ಪೆಟ್ ನೇಮ್ ಏನು ಗೊತ್ತಾ?

ಸಾಮಾನ್ಯವಾಗಿ ಎಲ್ಲಾ ತಾರೆಗಳಿಗೂ ಪೆಟ್ ನೇಮ್ ಇದ್ದೇ ಇರುತ್ತದೆ. ಅದೇ ರೀತಿ ಲಕ್ಷ್ಮಿ ರೈ ಅವರ ಪೆಟ್ ನೇಮ್ ಕೃಷ್ಣ.

ಎರಡು ಸಲ ಮಿಸ್ ಬೆಳಗಾವಿ ಕಿರೀಟ

ಲಕ್ಷ್ಮಿ ರೈ ಅವರಿಗೆ ಸತತ ಎರಡು ಬಾರಿ 'ಮಿಸ್ ಬೆಳಗಾವಿ' ಸ್ಪರ್ಧೆಯಲ್ಲಿ ಗೆದ್ದು ಬೀಗಿದ್ದರು. ಅದು 2003 ಹಾಗೂ 2004ರಲ್ಲಿ ಅವರು ಈ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಎಂಟನೇ ವರ್ಷಕ್ಕೆ ಬಣ್ಣ ಹಚ್ಚಿದ ತಾರೆ

ತನ್ನ ಎಂಟನೇ ವರ್ಷಕ್ಕೆ ಬಣ್ಣ ಹಚ್ಚಿದ ತಾರೆ ಲಕ್ಷ್ಮಿ ರೈ. ಬಾಲ ನಟಿಯಾಗಿ ಅಡಿಯಿಟ್ಟ ಲಕ್ಷ್ಮಿ ರೈ ಅವರು ಬೆಳಗಾವಿಯಲ್ಲಿ ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು.

ಲಕ್ಷ್ಮಿ ರೈ ಪೋಷಕರ ಕೆಲಸ ಏನು?

ಲಕ್ಷ್ಮಿ ರೈ ಅವರ ತಂದೆ ರಾಮ್ ರೈ ಬಿಜಿನೆಸ್ ಮ್ಯಾನ್ ಆದರೆ ತಾಯಿ ಮಂಜುಳ ಅವರು ಗೃಹಿಣಿ. ಇಬ್ಬರು ಸಹೋದರಿಯರಾದ ರೇಷ್ಮಾ ಮತ್ತು ಅಶ್ವಿನಿ ಅವರು ಚಿತ್ರರಂಗದಲ್ಲಿ ತೊಡಗಿಕೊಂಡಿಲ್ಲ.

ಲಕ್ಷ್ಮಿ ರೈ ಹುಟ್ಟಿದ್ದು ಬೆಂಗಳೂರಲ್ಲಿ!

ಸಾಮಾನ್ಯವಾಗಿ ಎಲ್ಲರೂ ತಿಳಿದಂತೆ ಲಕ್ಷ್ಮಿ ರೈ ಹುಟ್ಟಿದ್ದು ಬೆಳಗಾವಿಯಲ್ಲಿ ಅಲ್ಲ. ಹುಟ್ಟಿದ್ದು ಬೆಂಗಳೂರಲ್ಲಿ ಆದರೆ ಬೆಳೆದದ್ದು ಬೆಳಗಾವಿಯಲ್ಲಿ.

ತೆರೆಯ ಮೇಲೆ ನಾನು ಸೆಕ್ಸಿ ಆದರೆ ಅಶ್ಲೀಲ ಅಲ್ಲ

ತೆರೆಯ ಮೇಲೆ ನಾನು ಸೆಕ್ಸಿ ಬೆಡಗಿ, ಆದರೆ ಎಂದೂ ಅಶ್ಲೀಲವಾಗಿ ಕಾಣಿಸಿಕೊಳ್ಳಲ್ಲ ಎನ್ನುವ ಲಕ್ಷ್ಮಿ ರೈ, ಚಿತ್ರರಂಗಕ್ಕೆ ಅಡಿಯಿಡುವವರು ತಾವು ಹಾಕಿಕೊಂಡ ಗೆರೆಯನ್ನು ದಾಟದಂತೆ ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ.

ಸೆಟ್ಸ್ ನಲ್ಲಿದ್ದಾಗ ನಾನು ಕೇವಲ ನಟಿಯಷ್ಟೇ

ಸೆಟ್ಸ್ ನಲ್ಲಿದ್ದಾಗ ನಾನು ಕೇವಲ ನಟಿಯಷ್ಟೇ ಲಕ್ಷ್ಮಿ ರೈ ಅಲ್ಲ. ಅದು ಕಿಸ್ಸಿಂಗ್ ಸೀನ್ ಆಗಬಹುದು ಅಥವಾ ಯಾವುದೇ ಪಾತ್ರವಾಗಬಹುದು ನನ್ನನ್ನು ನಾನು ಮರೆಯುತ್ತೇನೆ, ಪಾತ್ರದಲ್ಲಿ ಲೀನವಾಗುತ್ತೇನೆ ಅಂತಾರೆ.

ನಟಿಯಾಗಬೇಕು ಎಂದು ಕನಸು ಕಂಡವಳಲ್ಲ

ನಾನು ನಟಿಯಾಗಬೇಕು ಎಂದು ಕನಸು ಕಂಡವಳಲ್ಲ. ಶಾಲಾ ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ತೊಡಗಿಕೊಳ್ಳುತ್ತಿದೆ. ಅದೇ ನನ್ನನ್ನು ಇಂದು ಈ ಸ್ಥಾನಕ್ಕೆ ತಂದು ನಿಲ್ಲಿಸಲು ಕಾರಣವಾಯಿತು ಎನ್ನುತ್ತಾರೆ ಲಕ್ಷ್ಮಿ.

ನಂಬರ್ ಒನ್ ಪಟ್ಟಕ್ಕೆ ಏರಬೇಕೆಂಬ ಆಸೆ

ಯಾವುದೂ ಅಂದುಕೊಂಡಷ್ಟು ಸುಲಭ ಅಲ್ಲ. ಆದರೆ ನಾನು ಯಾವುದೇ ಚಿತ್ರರಂಗದಲ್ಲಿರಲ್ಲಿ ನಂಬರ್ ಒನ್ ಸ್ಥಾನಕ್ಕೇರಬೇಕೆಂದು ಬಯಸುತ್ತಿರುತ್ತೇನೆ. ಹಾಗಾಗಿ ಅಳೆದು ತೂಗಿ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ.

ನನ್ನ ತಂದೆ ನನ್ನನ್ನು ಕೃಷ್ಣ ಎಂದು ಕರೆಯುತ್ತಾರೆ ಯಾಕೆ?

ಇಬ್ಬರು ಹೆಣ್ಣು ಮಕ್ಕಳಾದ ಮೇಲೆ ಮೂರನೆಯದು ಗಂಡು ಮಗು ಬಯಸಿದ್ದರು ನಮ್ಮ ತಂದೆತಾಯಿ. ಅದರೆ ನಾನು ಹುಟ್ಟಿದೆ. ಹಾಗಾಗಿ ಅವರು ನನ್ನನ್ನು ಕೃಷ್ಣ ಎಂದು ಕರೆಯುತ್ತಾರೆ ಎನ್ನುತ್ತಾರೆ ಲಕ್ಷ್ಮಿ ರೈ.

English summary
Kannada actress Lakshmi Rai celebrating her birthday on 5th May. Here is the unknown facts about Lakshmi Rai. The actress now acting in 'Sringara' with Crazy Star Ravichandran.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada