For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಮದುವೆಗೂ 'ಚಾಲೆಂಜಿಂಗ್ ಸ್ಟಾರ್' ಬಿರುದಿಗೂ ಹತ್ತಿರದ ನಂಟು

  |

  2002ರಲ್ಲಿ ನಟ ದರ್ಶನ್ ಮೆಜೆಸ್ಟಿಕ್ ಚಿತ್ರದ ಮೂಲಕ ನಾಯಕನಟನಾಗಿ ಸ್ಯಾಂಡಲ್‌ವುಡ್ ಇಂಡಸ್ಟ್ರಿ ಪ್ರವೇಶಿಸಿದರು. ಚೊಚ್ಚಲ ಸಿನಿಮಾ ದೊಡ್ಡ ಯಶಸ್ಸು ಕಂಡಿತು. ಮೊದಲ ಸಿನಿಮಾದಲ್ಲಿ ದಾಸ ಎಂಬ ಪಾತ್ರ ಮಾಡಿದ್ದ ದರ್ಶನ್‌ಗೆ ಅಭಿಮಾನಿಗಳು ಪ್ರೀತಿಯಿಂದ ದಾಸ ಎಂದು ಕರೆಯಲು ಆರಂಭಿಸಿದರು. ದರ್ಶನ್‌ಗೆ ಈಗಲೂ ಈ ಹೆಸರು ಬಹಳ ಇಷ್ಟ.

  ತಮ್ಮ ಹೆಸರು ಬಳಸುವ ಪ್ರತಿ ಸಂದರ್ಭದಲ್ಲಿ ನಿಮ್ಮ ಪ್ರೀತಿಯ 'ದಾಸ ದರ್ಶನ್' ಎಂದು ಬರೆಯುತ್ತಾರೆ. ಹಾಗಾದ್ರೆ, ದಾಸ ದರ್ಶನ್‌ಗೆ ಚಾಲೆಂಜಿಂಗ್ ಸ್ಟಾರ್ ಪಟ್ಟ ಸಿಕ್ಕಿದ್ದು ಹೇಗೆ? ಈ ಟೈಟಲ್ ಕೊಟ್ಟಿದ್ದು ಯಾರು? ಶೀರ್ಷಿಕೆ ಮತ್ತು ದರ್ಶನ್ ಅವರ ಮದುವೆಗೂ ಏನ್ ಸಂಬಂಧ ಎಂಬ ಆಸಕ್ತಿಕರ ವಿಷಯಗಳು ಇಲ್ಲಿದೆ. ಮುಂದೆ ಓದಿ...

  'ಚಾಲೆಂಜಿಂಗ್ ಹೀರೋ' ಬಿರುದು

  'ಚಾಲೆಂಜಿಂಗ್ ಹೀರೋ' ಬಿರುದು

  ದರ್ಶನ್‌ಗೆ ಚಾಲೆಂಜಿಂಗ್ ಸ್ಟಾರ್ ಬಿರುದು ಸಿಕ್ಕಿ ಇಂದಿಗೆ 18 ವರ್ಷ ಕಳೆದಿದೆ. ಹದಿನೆಂಟು ವರ್ಷದ ಹಿಂದೆ ಅಂದ್ರೆ 2003 ಮೇ 23 ರಂದು ಮೈಸೂರಿನ ಹುಣಸೂರಿನ ಬಳಿಯಿರುವ ಹುಟ್ಕಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ದರ್ಶನ್‌ಗೆ ಈ ಬಿರುದು ನೀಡಿ ಗೌರವಿಸಲಾಗಿತ್ತು.

  ಡಿ ಬಾಸ್ ದರ್ಶನ್ 'ಚಾಲೆಂಜಿಂಗ್ ಸ್ಟಾರ್' ಆಗಿ 17 ವರ್ಷಡಿ ಬಾಸ್ ದರ್ಶನ್ 'ಚಾಲೆಂಜಿಂಗ್ ಸ್ಟಾರ್' ಆಗಿ 17 ವರ್ಷ

  ಈ ಟೈಟಲ್ ಕೊಟ್ಟಿದ್ದು ಯಾರು?

  ಈ ಟೈಟಲ್ ಕೊಟ್ಟಿದ್ದು ಯಾರು?

  ದರ್ಶನ್ ಆಪ್ತ, ಅಭಿಮಾನಿ ಹುಟ್ಕಳ್ಳಿಯ ದೇಶಿ ಗೌಡರು ದಾಸ ದರ್ಶನ್‌ಗೆ 'ಚಾಲೆಂಜಿಂಗ್ ಹೀರೋ' ಎಂಬ ಬಿರುದು ನೀಡಿದ್ದರು. ಅಂದು ನಡೆದ ಸಮಾರಂಭದಲ್ಲಿ ದರ್ಶನ್ ಸಹೋದರ ದಿನಕರ್ ತೂಗುದೀಪ, ತಾಯಿ ಮೀನಾ, ಪತ್ನಿ ವಿಜಯಲಕ್ಷ್ಮಿ ಸಹ ಭಾಗಿಯಾಗಿದ್ದರು. ಆರಂಭದಲ್ಲಿ ಈ ಬಿರುದು ಕೊಟ್ಟಾಗ 'ಚಾಲೆಂಜಿಂಗ್ ಹೀರೋ' ಅಂತಾನೆ ಇತ್ತು. ದಿನಕಳೆದಂತೆ 'ಚಾಲೆಂಜಿಂಗ್ ಸ್ಟಾರ್' ಆಗಿ ಬದಲಾಯಿತು.

  ಆಗಷ್ಟೇ ಮದುವೆ ಆಗಿದ್ದ ದರ್ಶನ್

  ಆಗಷ್ಟೇ ಮದುವೆ ಆಗಿದ್ದ ದರ್ಶನ್

  ಚಾಲೆಂಜಿಂಗ್ ಹೀರೋ ಬಿರುದು ಸಿಗುವುದಕ್ಕೂ ನಾಲ್ಕು ದಿನದ ಹಿಂದೆಯಷ್ಟೆ ದರ್ಶನ್ ವಿವಾಹ ಜರುಗಿತ್ತು. ದರ್ಶನ್ ಮತ್ತು ವಿಜಯಲಕ್ಷ್ಮಿ ವಿವಾಹ ಮೇ 19, 2003ರಲ್ಲಿ ನಡೆದಿತ್ತು. ಮದುವೆ ಆದ ಕೆಲವೇ ದಿನಗಳಲ್ಲಿ ದರ್ಶನ್‌ಗೆ ಚಾಲೆಂಜಿಂಗ್ ಪಟ್ಟಕ್ಕೇರಿದ್ದರು.

  ದರ್ಶನ್ ದಂಪತಿಯ ವಿವಾಹ ವಾರ್ಷಿಕೋತ್ಸವ: ಹೇಗಿದೆ ನೋಡಿ ಡಿ ಬಾಸ್ ಮದುವೆ ಆಮಂತ್ರಣ ಪತ್ರಿಕೆ?ದರ್ಶನ್ ದಂಪತಿಯ ವಿವಾಹ ವಾರ್ಷಿಕೋತ್ಸವ: ಹೇಗಿದೆ ನೋಡಿ ಡಿ ಬಾಸ್ ಮದುವೆ ಆಮಂತ್ರಣ ಪತ್ರಿಕೆ?

  18ನೇ ವಿವಾಹ ವಾರ್ಷಿಕೋತ್ಸವ

  18ನೇ ವಿವಾಹ ವಾರ್ಷಿಕೋತ್ಸವ

  ಚಾಲೆಂಜಿಂಗ್ ಸ್ಟಾರ್ ಬಿರುದಿನ ಜೊತೆಗೆ ನಟ ದರ್ಶನ್ ಮತ್ತು ವಿಜಯಲಕ್ಷ್ಮಿ ದಾಂಪತ್ಯಕ್ಕೆ 18ನೇ ವರ್ಷದ ಸಂಭ್ರಮ. ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಇವರಿಬ್ಬರ ವಿವಾಹ ಜರುಗಿತ್ತು. ಹಾಗಾಗಿ, ಡಿ ಬಾಸ್ ದಂಪತಿಯ ಮದುವೆ ಹಾಗು ಚಾಲೆಂಜಿಂಗ್ ಸ್ಟಾರ್ ಬಿರುದಿಗೆ ಬಹಳ ಹತ್ತಿರದ ನಂಟಿದೆ.

  Corona ರೋಗಿಗಳ ಉಸಿರಿಗಾಗಿ ಉಸಿರು ತಂಡಕ್ಕೆ ಗಜ ಬಲ ತಂದ D Boss | Filmibeat Kannada
  ಎಷ್ಟೇ ಬಿರುದು ಸಿಕ್ಕರೂ 'ಚಾಲೆಂಜಿಂಗ್ ಸ್ಟಾರ್' ಶಾಶ್ವತ

  ಎಷ್ಟೇ ಬಿರುದು ಸಿಕ್ಕರೂ 'ಚಾಲೆಂಜಿಂಗ್ ಸ್ಟಾರ್' ಶಾಶ್ವತ

  ದಾಸ ದರ್ಶನ್ ಚಿತ್ರರಂಗಕ್ಕೆ ಬಂದು ಎರಡು ದಶಕ ಆಗಿದೆ. ಈ ಸುದೀರ್ಘ ಪಯಣದಲ್ಲಿ ಅವರ ಅಭಿಮಾನಿಗಳು ಹಲವು ಬಿರುದುಗಳನ್ನು ನೀಡಿದ್ದಾರೆ. ಬಾಕ್ಸ್ ಆಫೀಸ್ ಸುಲ್ತಾನ್, ಡಿ ಬಾಸ್, ಶರವೀರ ಶತಸೋದರರಾಗ್ರಜ, Monarch of sandalwood, ಕರುನಾಡ ಒಡೆಯ, ಶತಕೋಟಿ ಸರದಾರ ಹೀಗೆ ಹಲವು ಬಿರುದು ಸಿಕ್ಕಿದೆ. ಆದರೆ, ಚಾಲೆಂಜಿಂಗ್ ಸ್ಟಾರ್ ಎನ್ನುವುದು ದರ್ಶನ್ ಪಾಲಿಗೆ ಶಾಶ್ವತ.

  English summary
  Challenging star Title completes 18 years. Who gave this title to Actor Darshan? here is the Interesting story behind this title.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X