»   » ಗಾಂಧಿನಗರಕ್ಕೆ ಬಂದಿಳಿದ ಇರಾನಿ ಬ್ಯೂಟಿ ಇಲಾಮ್

ಗಾಂಧಿನಗರಕ್ಕೆ ಬಂದಿಳಿದ ಇರಾನಿ ಬ್ಯೂಟಿ ಇಲಾಮ್

Posted By:
Subscribe to Filmibeat Kannada
Ilaam Mirza
ಗಾಂಧಿನಗರಕ್ಕೆ ಹಲವಾರು ತಾರೆಗಳು ದೇಶವಿದೇಶಗಳಿಂದ ಆಮದಾಗುತ್ತಿದ್ದಾರೆ. ಈ ಪಟ್ಟಿಯಲ್ಲಿ ಪಾಕಿಸ್ತಾನಿ ಹಾಟ್ ತಾರೆ ವೀಣಾ ಮಲಿಕ್, ಶ್ರೀಲಂಕಾದ ಸುಂದರಿ ಅರುಣಿ ರಾಜ್ಯಪಕ್ಷ ಈಗಾಗಲೆ ಸೇರ್ಪಡೆಯಾಗಿದ್ದಾರೆ. ಈಗ ಹೊಸದಾಗಿ ಇರಾನಿ ಬ್ಯೂಟಿ ಇಲಾಮ್ ಮಿರ್ಜಾ ಆಗಮಿಸುತ್ತಿದ್ದಾರೆ.

ಡಿ ಕೇಶವ ನಿರ್ಮಿಸಲಿರುವ ಎರಡು ಚಿತ್ರಗಳಿಗೆ ಈ ಸುಂದರಿ ಬುಕ್ ಆಗಿದ್ದಾರೆ. ರಾಕೇಶ್ ಎಂಬುವವರು ಇದೇ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಚಿತ್ರವಿದು. ಈ ಎರಡೂ ಚಿತ್ರಗಳಿಗೆ ಇನ್ನೂ ಹೆಸರಿಟ್ಟಿಲ್ಲ.

ಇಲಾಮ್ ಮಿರ್ಜಾ ಹುಟ್ಟಿದ್ದು ಇರಾನ್ ನಲ್ಲಾದರೂ ಬೆಳೆದದ್ದು ದುಬೈನಲ್ಲಿ. ವಿದ್ಯಾಭ್ಯಾಸ ಮುಗಿಸಿದ್ದು ಭಾರತದಲ್ಲಿ. ಚಿತ್ರರಂಗಕ್ಕೆ ಅಡಿಯಿಡುವುದಕ್ಕೂ ಮುನ್ನ ಅಂತರಾಷ್ಟ್ರೀಯ ಮಟ್ಟದಲ್ಲಿ ರಂಗ ಪ್ರವೇಶ ಮಾಡಬೇಕು ಎಂದುಕೊಂಡಿದ್ದರಂತೆ.

ಮೆಕ್ಸಿಕನ್ ಹಾಗೂ ಯೋರೋಪಿಯನ್ ರಂಗಭೂಮಿಯಲ್ಲೂ ಈಕೆ ತರಬೇತಿ ಪಡೆದಿದ್ದಾರಂತೆ. ಕಲೆಯ ಜೊತೆಗೆ ಫ್ಯಾಷನ್ ಡಿಸೈನ್ ನಲ್ಲೂ ಆಸಕ್ತಿ ಇದೆ ಎನ್ನುತ್ತಾರೆ ಇಲಾಮ್. ನನಗೆ ಮಾತೃಭಾಷೆ ಬಿಟ್ಟು ಇನ್ನೊಂದು ಭಾಷೆ ಗೊತ್ತಿಲ್ಲ ಎನ್ನುತ್ತಾರೆ ಇಲಾಮ್. ಇನ್ನು ಈಕೆಯ ಪಾಲಿಗೆ ಕನ್ನಡ ಕಬ್ಬಿಣದ ಕಡಲೆಯೇ!

ಈಗಷ್ಟೇ ಇಂಗ್ಲಿಷ್ ಕಲಿಯುತ್ತಿದ್ದಾರಂತೆ. ಇದರಿಂದ ಅಷ್ಟೋ ಇಷ್ಟೋ ಮಾತನಾಡಬಹುದು ಎಂಬುದು ಈಕೆಯ ಉದ್ದೇಶ. ಎರಡು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ ಬಳಿಕ ಒಂದಷ್ಟು ಕನ್ನಡದ ಅ ಆ ಇ ಈ ಕಲಿತರೆ ಅಷ್ಟೇ ಸಾಕು. ಗಾಂಧಿನಗರದಿಂದ ಬಾಲಿವುಡ್ ಗೆ ಹಾರುವ ಕನಸು ನನ್ನದು ಎಂದು ಈಕೆ ಇಂಗ್ಲಿಷ್ ದೈನಿಕ 'ಟೈಮ್ಸ್ ಆಫ್ ಇಂಡಿಯಾ' ಜೊತೆ ಮನಬಿಚ್ಚಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)

English summary
Iranian beauty Ilaam Mirza steps into Kannada filmdom. She has signed a two-film deal under D Keshav Films. The first one will be directed by debutant director Rakesh says The Times of India.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada