For Quick Alerts
  ALLOW NOTIFICATIONS  
  For Daily Alerts

  ಅಪ್ಪು ಅಂತಿಮ ದರ್ಶನಕ್ಕೆ ಗೈರಾದರ ರಾಧಿಕಾ ಪಂಡಿತ್?: ಇಲ್ಲಿದೆ ನಿಜಾಂಶ

  |

  ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನ್ನಡದ ಹೆಮ್ಮೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇನ್ನಿಲ್ಲ ಎನ್ನುವ ವಿಚಾರವನ್ನು ಇನ್ನೂ ಕೂಡ ಯಾರು ಅರಗಿಸಿಕೊಳ್ಳಲು ಆಗುತ್ತಿಲ್ಲ. ಇನ್ನು ಅಪ್ಪು ಅಗಲಿಕೆಯ ಬಳಿಕ ಲಕ್ಷಾಂತರ ಮಂದಿ ಅಪ್ಪು ಅವರ ಅಂತಿಮ ದರ್ಶನ ಪಡೆದಿದ್ದಾರೆ. ಸಾಕಷ್ಟು ಮಂದಿ ಸಾಮಾಜಿಕ ಜಾಲ ತಾಣದಲ್ಲಿ ಅಪ್ಪು ಬಗ್ಗೆ ಭಾವುಕ ನುಡಿಗಳನ್ನು ಬರೆದುಕೊಂಡಿದ್ದಾರೆ. ಆದರೆ ನಟಿ ರಾಧಿಕಾ ಪಂಡಿತ್ ಇಂದು ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಪೋಸ್ಟ್‌ ಹಂಚಿಕೊಂಡದ್ದಾರೆ. ಇದೇ ಅಪ್ಪು ಅಭಿಮಾನಿಗಳು ಸೇರಿದಂತೆ, ಸಾಕಷ್ಟು ಜನರ ಕಣ್ಣು ಕೆಂಪಾಗುವಂತೆ ಮಾಡಿದೆ.

  ನಟಿ ರಾಧಿಕಾ ಪಂಡಿತ್‌ ಪೋಸ್ಟ್‌ ಹಾಕುತ್ತಾ ಇದ್ದಂತೆಯೇ ಟೀಕೆ ಮತ್ತು ಪ್ರಶ್ನೆಗಳ ಸುರಿ ಮಳೆ ಆರಂಭ ಆಗಿದೆ. ನೀವು ಯಾಕೆ ಪುನೀತ್‌ ರಾಜ್‌ಕುಮಾರ್‌ ಅವರ ಅಂತಿಮ ದರ್ಶನ ಪಡೆದಿಲ್ಲ?. ಕೊನೆಯ ಬಾರಿಗೆ ಅಪ್ಪು ಅವರನ್ನು ನೋಡಲು ಬಂದಿಲ್ಲ ಯಾಕೆ? 12 ದಿನಗಳ ಬಳಿಕ ಈಗ ಪೋಸ್ಟ್ ಹಂಚಿಕೊಳ್ಳುತ್ತಾ ಇದ್ದೀರಾ, ನಿಮಗೆ ಈ ವಿಚಾರ ಗೊತ್ತಿಲ್ಲವಾ?. ಬೇರೆ ಚಿತ್ರ ರಂಗದ ಹಲವು ಗಣ್ಯರು ಪುನೀತ್‌ ರಾಜ್‌ಕುಮಾರ್‌ ದರ್ಶನ ಪಡೆದಿದ್ದಾರೆ. ನಿಮಗೆ ಯಾಕೆ ಆಗಿಲ್ಲ ಎನ್ನುವ ಪ್ರಶ್ನೆಗಳು ರಾಧಿಕಾ ಪಂಡಿತ್‌ ಅವರಿಗೆ ಎದುರಾಗಿವೆ. ಇದಕ್ಕೆ ರಾಧಿಕಾ ಪಂಡಿತ್ ಪ್ರತಿಕ್ರಿಯೆ ನೀಡಿದ್ದಾರೆ. "ನಾನು ಅಂತಿಮ ದರ್ಶನ ಪಡೆದೆನೋ ಅಲ್ಲವಾ ಎನ್ನುವುದು ಅವರ ಕುಟುಂಬಕ್ಕೆ ಗೊತ್ತು. ನನಗೆ ಗೊತ್ತು. ಅಂದು ಮಾಧ್ಯಮದ ಮುಂದೆ ಬಂದು ಮಾಡುವ ಶಕ್ತಿ ನನಗೆ ಇರಲಿಲ್ಲ. ಮಾಧ್ಯಮದಲ್ಲಿ ಕಾಣಿಸಿಕೊಳ್ಳದೆ ಇರುವುದು ದೊಡ್ಡ ತಪ್ಪು ಎಂದು ನಾನು ಭಾವಿಸುವುದಿಲ್ಲ' ಎಂದು ಬರೆದುಕೊಂಡಿದ್ದಾರೆ.

  ಅಕ್ಟೋಬರ್ 29ರಂದೇ ಅಪ್ಪು ಅಂತಿಮ ದರ್ಶನ ಪಡೆದ ರಾಧಿಕಾ ಪಂಡಿತ್!

  ನಟಿ ರಾಧಿಕಾ ಪಂಡಿತ್‌ ಪುನೀತ್‌ ರಾಜ್‌ಕುಮಾರ್‌ ಅವರ ಮನೆಗೆ ಭೇಟಿಯನ್ನೂ ನೀಡಿದ್ದಾರೆ. ಪುನೀತ್‌ ರಾಜ್‌ಕುಮಾರ್ ಅವರ ಅಂತಿಮ ದರ್ಶನವನ್ನು ಪಡೆದು ಅಪ್ಪುಗೆ ನಮನ ಸಲ್ಲಿಸಿದ್ದಾರೆ. ಅಕ್ಟೋಬರ್ 29ರಂದು ಆಸ್ಪತ್ರೆಯಂದ ಪುನೀತ್‌ ರಾಜ್‌ಕುಮಾರ್ ಪಾರ್ಥೀವ ಶರೀರ ಮನೆಗೆ ಬಂದಾಗ ರಾಧಿಕಾ ಪಂಡಿತ್‌ ಅಪ್ಪು ಅವರ ಮನೆಯಲ್ಲಿ ಇದ್ದರು. ಅಂದು ಅಪ್ಪು ಪಾರ್ಥೀವ ಶರೀರದ ಮುಂದೆ ರಾಧಿಕಾ ಪಂಡಿತ್‌ ಕೂಡ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಗಂಟೆಗಳ ಕಾಲ ಅಪ್ಪು ಕುಟುಂಬದ ಜೊತೆಗೆ ರಾಧಿಕಾ ಸಮಯ ಕಳೆದಿದ್ದಾರೆ. ಅಷ್ಟೇ ಅಲ್ಲಾ ಯಶ್‌ ಅವರ ಸಹೋದರಿ ಪುನೀತ್‌ ರಾಜ್‌ಕುಮಾರ್ ಅವರ ಅಭಿಮಾನಿ. ಅವರೂ ಕೂಡ ಅಪ್ಪು ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ್ದಾರೆ. ಅಪ್ಪು ಪಾರ್ಥೀವ ಶರೀರವನ್ನು ಕಂಠೀರವ ಸ್ಟೇಡಿಯಂಗೆ ರವಾನೆ ಮಾಡುವಾಗ ರಾಧಿಕಾ ಪಂಡಿತ್‌ ಅಲ್ಲಿಂದ ಹೊರಟಿದ್ದಾರೆ. ಇದು ಅಂದು ನಡೆದಿರುವುದು.

  ಒಟ್ಟಾರೆ ರಾಧಿಕಾ ಪಂಡಿತ್ ಅಪ್ಪು ಅಂತಿಮ ದರ್ಶನ ಪಡೆದಿಲ್ಲ ಎನ್ನುವುದು ಸುಳ್ಳು. ನಿಜ ಗೊತ್ತಿರದವರು ರಾಧಿಕಾ ಪಂಡಿತ್‌ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ರಾಧಿಕಾ ಪಂಡಿತ್ ಅಪ್ಪು ಮನೆಗೆ ಭೇಟಿ ಮಾಡಿರುವುದು ಎಲ್ಲೂ ವರದಿ ಆಗಿಲ್ಲ. ಜೊತೆಗೆ ಮಾಧ್ಯಮಗಳ ಕ್ಯಾಮೆರಾಗಳಲ್ಲಿ ರಾಧಿಕಾ ಪಂಡಿತ್ ಕಾಣಿಸಿ ಕೊಂಡಿಲ್ಲ. ಹಾಗಾಗಿ ರಾಧಿಕಾ ಪಂಡಿತ್‌ ಪುನೀತ್‌ ರಾಜ್‌ಕುಮಾರ್‌ ಅವರ ಅಂತಿಮ ದರ್ಶನ ಪಡೆದಿಲ್ಲ ಎನ್ನುವ ವದಂತಿ ಹಬ್ಬಿದೆ.

  ದೊಡ್ಮನೆ ಹುಡುಗ ಮತ್ತು ಹುಡುಗರು ಸಿನಿಮಾದಲ್ಲಿ ಪುನೀತ್‌ ರಾಜ್‌ಕುಮಾರ್‌ ಜೊತೆಗೆ ರಾಧಿಕಾ ಪಂಡಿತ್‌ ತೆರೆ ಹಂಚಿಕೊಂಡಿದ್ದಾರೆ. ಈ ಎರಡೂ ಸಿನಿಮಾಗಳಲ್ಲಿ ಈ ಜೋಡಿಯನ್ನು ಪ್ರೇಕ್ಷಕ ಬಳಗ ಮೆಚ್ಚಿ ಕೊಂಡಿದೆ. ಇನ್ನೂ ರಾಧಿಕಾ ಮತ್ತು ಯಶ್ ಮದುವೆ, ಸೀಮಂತ ಸೇರಿದಂತೆ ಹಲವು ಕುಟುಂಬ ಕಾರ್ಯಕ್ರಮಗಳಲ್ಲಿ ಅಪ್ಪು ಭಾಗಿ ಆಗಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಮತ್ತು ಯಶ್‌-ರಾಧಿಕಾ ಕುಟುಂಬದ ನಡುವಿನ ಬಾಂಧವ್ಯ ಚೆನ್ನಾಗಿಯೇ ಇದೆ. ಎಲ್ಲರಂತೆ ಯಶ್‌ ರಾಧಿಕಾಗೂ ಅಪ್ಪು ಅಂದರೆ ಅತಿ ಅಚ್ಚು ಮೆಚ್ಚು.

  Is Actress Radhika Pandit Not Pay Her Condolences To Puneeth Rajkumar: Know More

  ಅಷ್ಟಕ್ಕೂ ಅಂದು ಸಾಕಷ್ಟು ಮಂದಿ ಅಪ್ಪು ಅಂತಿಮ ದರ್ಶನ ಪಡೆದು ಕೊಂಡಿದ್ದಾರೆ, ಹಾಗಂತ ಪ್ರತೀ ಒಬ್ಬರು ಮಾಧ್ಯಮದ ಮುಂದೆ ಬಂದು ಮಾತನಾಡಿಲ್ಲ. ಹಾಗೇ ಅಂತಿಮ ದರ್ಶನದ ಬಳಿಕ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಳ್ಳಲೇ ಬೇಕು ಎಂದೇನು ಇಲ್ಲ. ಪುನೀತ್‌ ರಾಜ್‌ಕುಮಾರ್‌ ಇಲ್ಲವಾಗಿ 12 ದಿನಗಳು ಕಳೆದಿವೆ. ಕುಟುಂಬಸ್ಥರು ಹನ್ನೊಂದನೇ ದಿನದ ಕಾರ್ಯವನ್ನು ಮುಗಿಸಿ 12ನೇ ದಿನಕ್ಕೆ ಅಭಿಮಾನಿಗಳಿಗೆ ಅನ್ನ ಸಂತರ್ಪಣೆಯನ್ನು ಮಾಡಿದ್ದಾರೆ.

  English summary
  Puneeth Rajkumar Fans upset With Radhika Pandit Post About Puneeth Rajkumar

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X