»   » ಪ್ರಿಯಾಮಣಿ 'ಧ್ವಜ' ಚಿತ್ರಕ್ಕೂ ರಮ್ಯಾ ಜೀವನ ಚರಿತ್ರೆಗೂ ಸಂಬಂಧ ಇದ್ಯಾ.?

ಪ್ರಿಯಾಮಣಿ 'ಧ್ವಜ' ಚಿತ್ರಕ್ಕೂ ರಮ್ಯಾ ಜೀವನ ಚರಿತ್ರೆಗೂ ಸಂಬಂಧ ಇದ್ಯಾ.?

Posted By:
Subscribe to Filmibeat Kannada
ಪ್ರಿಯಾಮಣಿಯವರ ಧ್ವಜ ಸಿನಿಮಾ ರಮ್ಯಾ ಜೀವನದ ಆಧಾರಿತ ಸಿನಿಮಾ ಹೌದಾ? | FIlmibeat Kannada

'ಸ್ಯಾಂಡಲ್ ವುಡ್ ಕ್ವೀನ್' ಆಗಿ, ಗಾಂಧಿನಗರದ 'ಪದ್ಮಾವತಿ' ಆಗಿ ಮೆರೆದ ನಟಿ ಕಮ್ ರಾಜಕಾರಣಿ ರಮ್ಯಾ ಜೀವನಚರಿತ್ರೆ ಆಧಾರಿತ ಸಿನಿಮಾ ಸೆಟ್ಟೇರಲಿದೆ ಎಂಬ ಸುದ್ದಿ ಕೆಲವೇ ಕೆಲವು ದಿನಗಳ ಹಿಂದೆ ಚಂದನವನದಲ್ಲಿ ಹರಿದಾಡಿತ್ತು.

ಈಗ ನೋಡಿದ್ರೆ, ರಮ್ಯಾ ಅವರ ಲೈಫ್ ಸ್ಟೋರಿ ಆಧರಿಸಿಯೇ 'ಧ್ವಜ' ಸಿನಿಮಾ ತಯಾರಾಗಿದೆ ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ.

ಹೇಳಿ ಕೇಳಿ 'ಧ್ವಜ' ರಾಜಕೀಯಕ್ಕೆ ಸಂಬಂಧಿಸಿದ ಸಿನಿಮಾ. ಚಿತ್ರದಲ್ಲಿ ನಾಯಕಿ ಪ್ರಿಯಾಮಣಿ ರಾಜಕಾರಣಿಯಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ, ಇದು ರಮ್ಯಾ ಜೀವನಕ್ಕೆ ಸಂಬಂಧಿಸಿದ ಸಿನಿಮಾ ಇರಬಹುದಾ ಎಂಬ ಗುಮಾನಿ ಮೂಡಿದೆ. ಆದ್ರೆ, ವಾಸ್ತವ ಏನಪ್ಪಾ ಅಂದ್ರೆ....

ಡೌಟ್ ಶುರು ಆಗಲು ಕಾರಣ ಏನು.?

'ಧ್ವಜ' ಚಿತ್ರದಲ್ಲಿ ರಾಜಕಾರಣಿ ಆಗಿ ಅಭಿನಯಿಸುತ್ತಿರುವ ಪ್ರಿಯಾಮಣಿ ಪಾತ್ರದ ಹೆಸರು ರಮ್ಯಾ ಅಂತ. ಹೀಗಾಗಿ, 'ಧ್ವಜ' ಸಿನಿಮಾ ರಮ್ಯಾ ಜೀವನಾಧಾರಿತ ಚಿತ್ರ ಎಂದು ಎಲ್ಲೆಡೆ ಸುದ್ದಿ ಆಗುತ್ತಿದೆ.

ಮದುವೆ ನಂತರ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಪ್ರಿಯಾಮಣಿ

ಸತ್ಯ ಅದಲ್ಲ.!

'ಧ್ವಜ' ರಾಜಕೀಯಕ್ಕೆ ಸಂಬಂಧಿಸಿದ ಸಿನಿಮಾ ಆಗಿದ್ದರೂ, ರಮ್ಯಾ ಗೂ ಸಿನಿಮಾಗೂ ಯಾವುದೇ ಸಂಬಂಧ ಇಲ್ಲ. ಈ ಚಿತ್ರಕ್ಕೆ ರಮ್ಯಾ ಸ್ಫೂರ್ತಿ ಅಲ್ಲ ಎಂದು ಚಿತ್ರತಂಡ ಸ್ಪಷ್ಟ ಪಡಿಸಿದೆ.

ರೀಮೇಕ್ ಸಿನಿಮಾ

'ಧ್ವಜ'... ತಮಿಳಿನ 'ಕೋಡಿ' ಚಿತ್ರದ ರೀಮೇಕ್. ಅಲ್ಲಿನ ಧನುಷ್ ಮತ್ತು ತ್ರಿಷಾ ಅಭಿನಯಿಸಿದ್ದ ಪಾತ್ರವನ್ನ ಇಲ್ಲಿ ರವಿ ಮತ್ತು ಪ್ರಿಯಾಮಣಿ ನಿರ್ವಹಿಸಿದ್ದಾರೆ ಅಷ್ಟೇ.

ಕಾಕತಾಳೀಯ ಅಷ್ಟೇ

ರಾಜಕೀಯಕ್ಕೆ ಸಂಬಂಧಿಸಿದ ಚಿತ್ರ ಇದಾಗಿರುವುದರಿಂದ, ನಾಯಕಿ ಪಾತ್ರಕ್ಕೆ ರಮ್ಯಾ ಹೆಸರು ಇರಲಿ ಎಂದು ನಿರ್ದೇಶಕ ಅಶೋಕ್ ಕಶ್ಯಪ್ ಸೂಚಿಸಿದ್ದರಂತೆ. ಅಷ್ಟು ಬಿಟ್ಟರೆ 'ಪದ್ಮಾವತಿ' ರಮ್ಯಾಗೂ 'ಧ್ವಜ'ಕ್ಕೂ ಯಾವುದೇ ಸಂಬಂಧ ಇಲ್ಲ ಅಂತಾರೆ ನಟಿ ಪ್ರಿಯಾಮಣಿ.

ಸದ್ಯದಲ್ಲೇ ತೆರೆಗೆ ಬರಲಿದೆ

ಅಲ್ಲಿಗೆ, 'ಧ್ವಜ' ಸಿನಿಮಾ ರಮ್ಯಾ ಜೀವನಾಧಾರಿತ ಚಿತ್ರ ಅಲ್ಲ ಎಂಬುದು ಸ್ಪಷ್ಟ ಆಯ್ತು. 'ಕೋಡಿ' ರೀಮೇಕ್ ಆಗಿದ್ದರೂ, ಕನ್ನಡ ನೆಲಕ್ಕೆ ಹೊಂದಾಣಿಕೆ ಆಗುವಂತೆ ಚಿತ್ರೀಕರಣ ಮುಗಿಸಿರುವ 'ಧ್ವಜ' ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ.

English summary
Is Priyamani starrer Kannada Cinema 'Dhwaja' based on EX MP, Congress Politician Ramya's real life.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada