»   » ಹೌದು ಸ್ವಾಮಿ, 'ಆಟಗಾರ' ಪಕ್ಕಾ ಸ್ವಮೇಕ್ ಸಿನಿಮಾ.!

ಹೌದು ಸ್ವಾಮಿ, 'ಆಟಗಾರ' ಪಕ್ಕಾ ಸ್ವಮೇಕ್ ಸಿನಿಮಾ.!

Posted By:
Subscribe to Filmibeat Kannada

'ಪ್ರಚಂಡ ಕುಳ್ಳ' ದ್ವಾರಕೀಶ್ ನಿರ್ಮಾಣದ 49 ನೇ ಚಿತ್ರ ಹಾಗು ನಟ ಚಿರಂಜೀವಿ ಸರ್ಜಾ ಅಭಿನಯದ ಹೊಚ್ಚ ಹೊಸ ಸಿನಿಮಾ 'ಆಟಗಾರ'.

'ರುದ್ರತಾಂಡವ', 'ಚಂದ್ರಲೇಖ' ಸೇರಿದಂತೆ ಇದುವರೆಗೂ ಚಿರಂಜೀವಿ ಸರ್ಜಾ ಅಭಿನಯದ ಬಹುತೇಕ ಸಿನಿಮಾಗಳು ರೀಮೇಕ್. ಇನ್ನೂ ದ್ವಾರಕೀಶ್ ಬ್ಯಾನರ್ ನಲ್ಲೂ ಅನೇಕ ರೀಮೇಕ್ ಚಿತ್ರಗಳು ತಯಾರಾಗಿವೆ.


chiranjeevi sarja

ಹೀಗಾಗಿ 'ಆಟಗಾರ' ಚಿತ್ರ ರೀಮೇಕೋ ಅಥವಾ ಸ್ವಮೇಕೋ ಅಂತ ಕೆಲವರು ತಲೆಗೆ ಹುಳ ಬಿಟ್ಕೊಂಡಿದ್ದಾರೆ. ಡೌಟ್ ಯಾಕಪ್ಪಾ, ಕ್ಲಿಯರ್ ಮಾಡಿಕೊಳ್ಳೋಣ ಅಂತ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಚಿರಂಜೀವಿ ಸರ್ಜಾ ಅವರನ್ನ ಸಂಪರ್ಕಿಸಿತು.


ಚಿರಂಜೀವಿ ಸರ್ಜಾ ಕೊಟ್ಟ ಉತ್ತರ - ''ಆಟಗಾರ 100% ಸ್ವಮೇಕ್ ಸಿನಿಮಾ. ಪ್ರತಿ ಸೀನ್ ನಲ್ಲೂ ಕುತೂಹಲ ಹೆಚ್ಚಾಗಬೇಕು ಅನ್ನುವ ಕಾರಣಕ್ಕೆ ಬಹಳ ಕಷ್ಟ ಪಟ್ಟು ಚಿತ್ರಕಥೆಯನ್ನ ರೆಡಿ ಮಾಡಲಾಗಿದೆ. ಇದು ಔಟ್ ಅಂಡ್ ಔಟ್ ಥ್ರಿಲ್ಲರ್ ಸಿನಿಮಾ.'' ಅಂತ ಸ್ಪಷ್ಟ ಪಡಿಸಿದ್ದಾರೆ. [ಬಿಡುಗಡೆಗೂ ಮುನ್ನವೇ ಭರ್ಜರಿ ಮೊತ್ತಕ್ಕೆ 'ಆಟಗಾರ' ಮಾರಾಟ]


ಅಲ್ಲಿಗೆ, 'ಆಟಗಾರ' ಪರಭಾಷೆಯ ನಕಲು ಅನ್ನುವ ಅಪವಾದ ಸುಳ್ಳು ಅನ್ನೋದು ಪಕ್ಕಾ ಆದ್ಹಾಗೆ. 'ಆ ದಿನಗಳು' ಖ್ಯಾತಿಯ ಕೆ.ಎಂ.ಚೈತನ್ಯ ಆಕ್ಷನ್ ಕಟ್ ಹೇಳಿರುವ ಚಿರಂಜೀವಿ ಸರ್ಜಾ, ಮೇಘನಾ ರಾಜ್, ರವಿಶಂಕರ್ ಸೇರಿದಂತೆ ಸ್ಯಾಂಡಲ್ ವುಡ್ ನ 10 ತಾರೆಯರು ಮುಖ್ಯ ಭೂಮಿಕೆಯಲ್ಲಿರುವ ಸಿನಿಮಾ ಇದು.


ಇದೇ ಶುಕ್ರವಾರ, ವರಮಹಾಲಕ್ಷ್ಮಿ ಹಬ್ಬದಂದು 'ಆಟಗಾರ' ಸಿನಿಮಾ ತೆರೆ ಕಾಣುತ್ತಿದೆ. 'ಆಟಗಾರ'ನ ಆಟ ನೋಡಿ ಥ್ರಿಲ್ ಆಗಲು ನೀವು ರೆಡಿಯಾಗಿ.

English summary
Kannada Movie 'Aatagara' is not a remake film. Kannada Actor Chiranjeevi Sarja has clearly stated that 'Aatagara' is a straight subject and not remake film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada