»   » ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ 'ವಾಸ್ಕೋಡಿಗಾಮ' ಯಾರು?

ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ 'ವಾಸ್ಕೋಡಿಗಾಮ' ಯಾರು?

Posted By:
Subscribe to Filmibeat Kannada

ಪೋರ್ಚುಗೀಸ್ ನಾವಿಕ ವಾಸ್ಕೋ-ಡ-ಗಾಮ ನಿಮಗೆಲ್ಲಾ ಗೊತ್ತು. ಯುರೋಪ್ ನಿಂದ ಸಮುದ್ರ ಮಾರ್ಗವಾಗಿ ನೇರವಾಗಿ ಭಾರತ ತಲುಪಿದ ಈ ನಾವಿಕ ಸದ್ಯ ಸ್ಯಾಂಡಲ್ ವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದ್ದಾರೆ. ಅದು 'ವಾಸ್ಕೋಡಿಗಾಮ' ಚಿತ್ರದ ಮೂಲಕ.

ಹಾಗಂದ ಮಾತ್ರಕ್ಕೆ 'ವಾಸ್ಕೋಡಿಗಾಮ' ಚಿತ್ರ ವಾಸ್ಕೋ-ಡ-ಗಾಮ ಜೀವನ ಚರಿತ್ರೆಯನ್ನು ಸಾರುತ್ತಿಲ್ಲ. ಬದಲಾಗಿ ವಿದ್ಯಾರ್ಥಿಗಳ ಕಾಲೇಜ್ ಲೈಫ್ ಕುರಿತಾದ ಸಿನಿಮಾ. ನಿಜ ಹೇಳ್ಬೇಕಂದ್ರೆ ವಾಸ್ಕೋ-ಡ-ಗಾಮಗೂ, 'ವಾಸ್ಕೋಡಿಗಾಮ' ಚಿತ್ರಕ್ಕೂ ಸಂಬಂಧವೇ ಇಲ್ಲ. [ಗಾಂಧಿನಗರಕ್ಕೆ ಹೊಸ ಮಾರ್ಗದಲ್ಲಿ ಬಂದ 'ವಾಸ್ಕೋಡಿಗಾಮ']

Is Kannada Movie Vascodigama connected to Portuguese Traveller Vasco-da-gama?

ಆದರೂ ಈ ಟೈಟಲ್ ಯಾಕೆ ಅಂದ್ರೆ, ಚಿತ್ರದ ಪ್ರಮುಖ ಪಾತ್ರಧಾರಿಯ ಹೆಸರು ವಾಸು.ಡಿ.ಗಾಮನಹಳ್ಳಿ. ಈ ವಾಸು 'ವಾಸ್ಕೋಡಿಗಾಮ' ಆಗುವುದು ಹೇಗೆ ಅನ್ನೋದೇ ಚಿತ್ರದ ಹೈಲೈಟ್,

ನಿನ್ನೆಯಷ್ಟೆ 'ವಾಸ್ಕೋಡಿಗಾಮ' ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಭರ್ಜರಿ ರೆಸ್ಪಾನ್ಸ್ ಲಭ್ಯವಾಗಿದೆ. ಮೇಷ್ಟ್ರ ಪಾತ್ರದಲ್ಲಿ ಕಿಶೋರ್ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಜೊತೆ ಪಾರ್ವತಿ ನಾಯರ್ ಇದ್ದಾರೆ. ಹುಡುಗರ ಎದೆಬಡಿತಕ್ಕೆ ತಕ್ಕಂತೆ ಪೂರ್ಣಚಂದ್ರ ತೇಜಸ್ವಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. [ಕಾಲೇಜುಗಳಿಗೆ ವಾಸ್ಕೋಡಿಗಾಮನಾಗಿ ಕಿಶೋರ್ ಎಂಟ್ರಿ]

ಶಿಕ್ಷಣ ವ್ಯವಸ್ಥೆ ಬಗ್ಗೆ ರಿಸರ್ಚ್ ಮಾಡಿ ನಿರ್ದೇಶಕ ಮಧುಚಂದ್ರ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅಂತೂ ಎಲ್ಲಾ ವಿದ್ಯಾರ್ಥಿಗಳ ಬಾಯಲ್ಲಿ 'ವಾಸ್ಕೋಡಿಗಾಮ' ನಲಿದಾಡುತ್ತಿದ್ದಾನೆ. ಈ ರೀಲ್ 'ವಾಸ್ಕೋಡಿಗಾಮ'ನ ಕಥೆ ನೋಡುವುದಕ್ಕೆ ಸ್ವಲ್ಪ ದಿನ ವೇಯ್ಟ್ ಮಾಡಿ.

English summary
Kannada Actor Kishore starrer 'Vascodigama' is all set to release shortly. Most common doubt among the cine-lovers is whether the movie is connected to Portuguese Traveller Vasco-da-gama. Well, the movie is all about Vasu.D.Gamanahalli says Director Madhuchandra.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada