Don't Miss!
- News
ಕೊಟ್ಟ ಮಾತು ಮರೆತಿರುವ ಸಿದ್ದರಾಮಯ್ಯ ಅಧಿಕಾರ ದಾಹಿ: ಅಶ್ವತ್ಥ ನಾರಾಯಣ ಕಿಡಿ
- Sports
Women's Premier League : ಫೆಬ್ರವರಿ 2ನೇ ವಾರ ಆಟಗಾರರ ಹರಾಜು: ದೆಹಲಿಯಲ್ಲಿ ಹರಾಜು ಪ್ರಕ್ರಿಯೆ
- Automobiles
ಬಾಕ್ಸ್ ಆಫೀಸ್ನಲ್ಲಿ 'ಪಠಾಣ್' ಅಬ್ಬರ: ಈ ಚಿತ್ರದಲ್ಲಿ ಕಾಣಿಸಿಕೊಂಡ ಆಕರ್ಷಕ ಕಾರುಗಳಿವು...
- Finance
ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?
- Technology
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕನ್ನಡದ ಹೊಸ ಕ್ರಶ್ ಆಗ್ತಾರಾ 'ಪೈಲ್ವಾನ್' ರುಕ್ಮಿಣಿ
Recommended Video
ಕಣ್ಮಣಿಯಾಗಿ ಕಣ್ಣು ಹೊಡೆಯುತ್ತಾ ಕರ್ನಾಟಕಕ್ಕೆ ಬಂದ ಆಕಾಂಕ್ಷ ಸಿಂಗ್ ಈಗ ಅಭಿಮಾನಿಗಳ ಪ್ರೀತಿ ಪಡೆದಿದ್ದಾರೆ. ರಾಜಸ್ತಾನದ ಈ ರಾಣಿಯನ್ನು ಕನ್ನಡಿಗರು ಮೆಚ್ಚಿಕೊಂಡಿದ್ದಾರೆ.
ನಿನ್ನೆ ಬಿಡುಗಡೆಯಾದ 'ಪೈಲ್ವಾನ್' ಸಿನಿಮಾದಲ್ಲಿ, ನಾಯಕಿ ಆಕಾಂಕ್ಷ ಸಿಂಗ್ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ತೆರೆ ಮೇಲೆ ಅವರ ಕ್ಯೂಟ್ ಲುಕ್ ಹಾಗೂ ಪಾತ್ರ ನಿರ್ವಹಣೆ ತುಂಬ ಚೆನ್ನಾಗಿದೆ. ಮೊದಲ ಕನ್ನಡ ಸಿನಿಮಾದಲ್ಲಿಯೇ ಆಕಾಂಕ್ಷ ಸಿಂಗ್ ತಮ್ಮ ಪ್ರತಿಭೆಯನ್ನು ಸಾಬೀತು ಮಾಡಿದ್ದಾರೆ.
'ಪೈಲ್ವಾನ್'
ನೋಡಿ
ನಟಿ
ಆಕಾಂಕ್ಷ
ಸಿಂಗ್
ಬಗ್ಗೆ
ಅಚ್ಚರಿ
ಟ್ವೀಟ್
ಮಾಡಿದ
ಅಭಿಮಾನಿಗಳು
ಆಕಾಂಕ್ಷ ಸಿಂಗ್, ಸುದೀಪ್ ಗೆ ತಕ್ಕ ಜೋಡಿ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಒಂದು ಕಡೆ ಪ್ರೇಕ್ಷಕರು, ಮತ್ತೊಂದು ಕಡೆ ವಿಮರ್ಶಕರ ಇಬ್ಬರು ಆಕ್ಙಾಂಕ್ಷರನ್ನು ಹೊಗಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿಯೂ ಕಣ್ಮಣಿಯ ಪ್ರಭಾವ ಜೋರಾಗಿ ಸಾಗಿದೆ. ಇದನೆಲ್ಲ ನೋಡುತ್ತಿದ್ದರೆ, ಆಕಾಂಕ್ಷ ಕನ್ನಡದ ಹೊಸ ಕ್ರಶ್ ಆಗುವ ಎಲ್ಲ ಸಾಧ್ಯತೆಗಳು ಇವೆ.

ರುಕ್ಮಿಣಿ ಈಗ ಎಲ್ಲರ ಕಣ್ಮಣಿ
'ಪೈಲ್ವಾನ್' ಸಿನಿಮಾದಲ್ಲಿ ಸುದೀಪ್ ಪಾತ್ರದ ಹೆಸರು ಕೃಷ್ಣ. ಇಲ್ಲಿಯೂ ಕೃಷ್ಣನಿಗೆ ಜೋಡಿಯಾಗಿರುವುದು ರುಕ್ಮಿಣಿ. ರುಕ್ಮಿಣಿ ಪಾತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿರುವ ಈಕೆ ಈಗ ಎಲ್ಲ ಕಣ್ಮಣಿ ಆಗಿದ್ದಾರೆ. ಪ್ರೇಮಿಗಳಾಗಿ ಹಾಗೂ ಗಂಡ, ಹೆಂಡತಿಯಾಗಿ ಸುದೀಪ್ ಮತ್ತು ಆಕಾಂಕ್ಷ ಜೋಡಿ ತುಂಬ ಚೆನ್ನಾಗಿದೆ.

ಟ್ವಿಟ್ಟರ್ ನಲ್ಲಿ ಪ್ರೇಕ್ಷಕರ ಹೊಗಳಿಕೆ
ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವ ಅಂಶಗಳಲ್ಲಿ ಆಕಾಂಕ್ಷ ಸಿಂಗ್ ನಟನೆ ಕೂಡ ಒಂದು. ಸಿನಿಮಾದಲ್ಲಿ ಸಖತ್ ಕ್ಯೂಟ್ ಆಗಿ ಅವರು ಕಾಣಿಸಿಕೊಂಡಿದ್ದಾರೆ. ಚಿತ್ರ ನೋಡಿ ಇಷ್ಟಪಟ್ಟ ಅಭಿಮಾನಿಗಳು ಅವರ ಟ್ವಿಟ್ಟರ್ ಖಾತೆಯಲ್ಲಿ ಆಕಾಂಕ್ಷ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಆಕಾಂಕ್ಷ ಟ್ವಿಟ್ಟರ್ ಖಾತೆ ನೋಡಿದರೆ, ಸಾಕಷ್ಟು ಅಭಿಮಾನಿಗಳ ಪ್ರತಿಕ್ರಿಯೆ ಕಾಣಿಸುತ್ತಿದೆ.
'ಪೈಲ್ವಾನ್'
ನೋಡಿ
ವಿಮರ್ಶಕರು
ಏನ್
ಹೇಳಿದ್ರು?,
ಎಷ್ಟು
ಸ್ಟಾರ್
ಕೊಟ್ರು?

ವಿಮರ್ಶಕರಿಗೂ ಇಷ್ಟವಾದ ನಟಿ
'ಪೈಲ್ವಾನ್' ಸಿನಿಮಾ ವಿಮರ್ಶೆಗಳನ್ನು ಗಮನಿಸಿದರೆ, ಅಲ್ಲಿ ಆಕಾಂಕ್ಷ ಬಗ್ಗೆ ಒಂದೆರಡು ಸಾಲುಗಳು ಇವೆ. ಎಲ್ಲ ವಿಮರ್ಶಕರು ಆಕೆಯನ್ನು ಹೊಗಳಿದ್ದಾರೆ. ಎಲ್ಲರೂ ಕನ್ನಡಕ್ಕೆ ಬಂದ ಈ ನಟಿಯ ಬೆನ್ನು ತಟ್ಟಿದ್ದಾರೆ. ತನಗೆ ನೀಡಿದ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಆಕಾಂಕ್ಷ ವಿಮರ್ಶಕರ ಮನ ಗೆದ್ದಿದ್ದಾರೆ.

ಪ್ರತಿಭೆ ಮತ್ತು ಸೌಂದರ್ಯದ ಮಿಶ್ರಣ
ಕೆಲವು ನಟಿಯರಿಗೆ ಸೌಂದರ್ಯ ಇರುತ್ತದೆ, ಇನ್ನು ಕೆಲವು ನಟಿಯರಿಗೆ ಪ್ರತಿಭೆ ಇರುತ್ತದೆ. ಈ ಎರಡನ್ನು ಹೊಂದಿರುವ ನಟಿಯರು ಹೆಚ್ಚು ಕಾಲ ಇಂಡಸ್ಟ್ರಿಯಲ್ಲಿ ಉಳಿದುಕೊಳ್ಳುತ್ತಾರೆ. ನಟಿ ಆಕಾಂಕ್ಷ ಎರಡನೇ ಸಾಲಿಗೆ ಸೇರುವ ನಟಿ. ಸಿನಿಮಾ ಬಿಡುಗಡೆಗೆ ಮುನ್ನ ತನ್ನ ಬ್ಯೂಟಿ ಮೂಲಕ ಗಮನ ಸೆಳೆದಿದ್ದ ಈಕೆ, ಸಿನಿಮಾದಲ್ಲಿ ತನ್ನ ಪ್ರತಿಭೆಯಿಂದ ಇಷ್ಟ ಆಗುತ್ತಾರೆ.
Pailwan
Review
:
ಕ್ರೀಡಾ
ಹಿನ್ನೆಲೆಯ
ಭಾವನಾತ್ಮಕ
ಸಿನಿಮಾ

ಕನ್ನಡದಲ್ಲಿ ಇನ್ನಷ್ಟು ಅವಕಾಶಗಳು ಸಿಗಲಿ
ಆಕಾಂಕ್ಷ ಸಿಂಗ್ ರನ್ನು ಮೆಚ್ಚಿಕೊಂಡ ಅಭಿಮಾನಿಗಳು ಆಕೆಗೆ ಇನ್ನಷ್ಟು ಅವಕಾಶಗಳು ಸಿಗಲಿ ಎಂದು ಶುಭ ಹಾರೈಸುತ್ತಿದ್ದಾರೆ. ಈ ನಟಿ ಕನ್ನಡಲ್ಲಿಯೇ ಉಳಿದುಕೊಳ್ಳಲಿ ಎನ್ನುವುದು ಅನೇಕರ ಆಸೆಯಾಗಿದೆ. ಆಕಾಂಕ್ಷ ಮೇಲಿನ ಅಭಿಮಾನಿಗಳ ಪ್ರೀತಿ ಹೀಗೆ ಮುಂದುವರೆದರೆ, ಆಕೆ ಕನ್ನಡದ ಕ್ರಶ್ ಆಗೇ ಆಗುತ್ತಾರೆ.