»   » 'ಕುರುಕ್ಷೇತ್ರ' ಸಿನಿಮಾದಲ್ಲಿ ನಟಿ ರೆಜಿನಾ ನಿರ್ವಹಿಸುವ ಪಾತ್ರವೇನು.?

'ಕುರುಕ್ಷೇತ್ರ' ಸಿನಿಮಾದಲ್ಲಿ ನಟಿ ರೆಜಿನಾ ನಿರ್ವಹಿಸುವ ಪಾತ್ರವೇನು.?

Posted By:
Subscribe to Filmibeat Kannada

2010 ರಲ್ಲಿ ತೆರೆಗೆ ಬಂದ ಕೆ.ಎಂ.ಚೈತನ್ಯ ನಿರ್ದೇಶನದ 'ಸೂರ್ಯಕಾಂತಿ' ಸಿನಿಮಾದಲ್ಲಿ ಚೇತನ್ ಜೊತೆ ನಾಯಕಿ ಆಗಿ ಅಭಿನಯಿಸಿದ ರೆಜಿನಾ ನಂತರ ಪರಭಾಷೆಯ ಚಿತ್ರಗಳಲ್ಲಿಯೇ ಬಿಜಿಯಾದರು.

ಇದೀಗ ಏಳು ವರ್ಷಗಳ ನಂತರ ರೆಜಿನಾ ಮತ್ತೆ ಸ್ಯಾಂಡಲ್ ವುಡ್ ಅಂಗಳಲ್ಲಿ ಕಾಣಿಸಿಕೊಳ್ಳುವ ಸೂಚನೆ ಸಿಕ್ಕಿದೆ. 'ಕುರುಕ್ಷೇತ್ರ' ಚಿತ್ರದಲ್ಲಿ ರೆಜಿನಾ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕೊನೆಗೂ 'ಕುರುಕ್ಷೇತ್ರ' ಚಿತ್ರಕ್ಕೆ ನಾಯಕಿಯಾದ ಪರಭಾಷಾ ನಟಿ..!

ಹಾಗಾದ್ರೆ, ನಟಿ ರೆಜಿನಾ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.? ಮುಂದೆ ಓದಿರಿ...

ನಟಿ ರೆಜಿನಾ ಪಾತ್ರವೇನು.?

'ಕುರುಕ್ಷೇತ್ರ' ಚಿತ್ರದಲ್ಲಿ ನಟಿ ರೆಜಿನಾ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನ ಚಿತ್ರತಂಡ ಸಸ್ಪೆನ್ಸ್ ಆಗಿ ಇಟ್ಟಿದೆ. ಆದರೂ, ರೆಜಿನಾ ರವರದ್ದು 'ಇದೇ' ಪಾತ್ರ ಎಂದು ಕೆಲ ಪತ್ರಿಕೆಗಳು ವರದಿ ಮಾಡಿದೆ.

ಯಾವ ಪಾತ್ರ.?

ಕೆಲ ವರದಿಗಳ ಪ್ರಕಾರ, ನಟಿ ರೆಜಿನಾ 'ಕುರುಕ್ಷೇತ್ರ' ಸಿನಿಮಾದಲ್ಲಿ 'ಭಾನುಮತಿ' ಪಾತ್ರ ನಿರ್ವಹಿಸಲಿದ್ದಾರಂತೆ.

'ಮಹಾಭಾರತ'ದ ಭಾನುಮತಿ

ಶ್ರೀಕೃಷ್ಣನ ಅಪ್ಪಟ ಭಕ್ತೆ... ದುರ್ಯೋಧನ ಪತ್ನಿ 'ಭಾನುಮತಿ' ಪಾತ್ರದಲ್ಲಿ ನಟಿ ರೆಜಿನಾ ಮಿಂಚಲಿದ್ದಾರಂತೆ.

ದ್ರೌಪದಿ ಇನ್ನೂ ಸಿಕ್ಕಿಲ್ಲ.!

'ಕುರುಕ್ಷೇತ್ರ' ಚಿತ್ರದ ಪ್ರಮುಖ ಪಾತ್ರಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ದ್ರೌಪದಿ ಪಾತ್ರಕ್ಕಾಗಿ ಇನ್ನೂ ಯಾರೂ ಫೈನಲ್ ಆಗಿಲ್ಲ ಎಂದು ಹೇಳಲಾಗುತ್ತಿದೆ.

English summary
Is Regina playing Bhanumathi in 'Kurukshetra'.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada