»   » ಶಿವಣ್ಣನ 'ಸಂಯುಕ್ತ'ಕ್ಕೂ ಹಾರರ್ 'ಸಂಯುಕ್ತ 2' ಗೂ ಸಂಬಂಧ ಇದ್ಯಾ

ಶಿವಣ್ಣನ 'ಸಂಯುಕ್ತ'ಕ್ಕೂ ಹಾರರ್ 'ಸಂಯುಕ್ತ 2' ಗೂ ಸಂಬಂಧ ಇದ್ಯಾ

Posted By:
Subscribe to Filmibeat Kannada

ಸತತ ಸೋಲಿನಿಂದ ಕಂಗೆಟ್ಟಿರುವ ನಟ ಚೇತನ್ ಚಂದ್ರ ಅವರು ಇದೀಗ 'ಸಂಯುಕ್ತ 2' ಎಂಬ ಹಾರರ್-ಥ್ರಿಲ್ಲರ್ ಸಿನಿಮಾ ಮೂಲಕ ಮತ್ತೆ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಗಾಂಧಿನಗರಕ್ಕೆ ವಾಪಸಾಗಿದ್ದಾರೆ.

ನಟ ಚೇತನ್ ಚಂದ್ರ ಕಾಣಿಸಿಕೊಳ್ಳಲಿರುವ 'ಸಂಯುಕ್ತ 2' ಚಿತ್ರಕ್ಕೆ ಇತ್ತೀಚೆಗಷ್ಟೇ ಮಹಾಲಕ್ಷ್ಮಿ ಲೇಔಟ್ ನ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮೂಹೂರ್ತ ನೆರವೇರಿತ್ತು. ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕ್ಲಾಪ್ ಮಾಡಿದ್ದರು.[ಹಾರರ್ ಚಿತ್ರಕ್ಕೆ ದರ್ಶನ್ ಕ್ಲಾಪ್ ಮಾಡಿದ್ರು]

Is there any connection between 'Samyuktha' and 'Samyuktha 2'

ಅಂದಹಾಗೆ ಹೊಸ 'ಸಂಯುಕ್ತ 2' ಚಿತ್ರಕ್ಕೂ ಸೆಂಚುರಿ ಸ್ಟಾರ್ ಶಿವಣ್ಣ ಅವರ 1988ರ 'ಸಂಯುಕ್ತ' ಚಿತ್ರಕ್ಕೂ ಏನಾದ್ರೂ ಸಂಬಂಧ ಇದೆಯಾ ಅಂತ ನಿರ್ದೇಶಕರನ್ನು ಕೇಳಿದರೆ ಖಂಡಿತ ಇಲ್ಲಾ ಅನ್ನೋ ಉತ್ತರ ಬರುತ್ತದೆ.

ಹಾಗಾದರೆ ಈ ಹೆಸರೇ ಏಕೆ ಎಂದು ಕೇಳಿದರೆ ಹೊಸ ಚಿತ್ರ ಸಸ್ಪೆನ್ಸ್-ಹಾರರ್ ಸಿನಿಮಾ. ಹಾಗಾಗಿ 'ಸಂಯುಕ್ತ 2' ಅಂತ ಹೆಸರಿಡಲಾಗಿದೆ ಅಷ್ಟು ಬಿಟ್ಟರೆ ಬೇರೆ ಏನು ಕಾರಣ ಇಲ್ಲ ಎಂದು ನಿರ್ದೇಶಕ ಅಭಿರಾಮ್ ಅವರು ನುಡಿಯುತ್ತಾರೆ.[ದರ್ಶನ್ ಅವರಿಗೆ ಚೇತನ್ ಚಂದ್ರ 'ಥ್ಯಾಂಕ್ಸ್' ಅಂದಿದ್ದೇಕೆ]

Is there any connection between 'Samyuktha' and 'Samyuktha 2'

ನವ ನಿರ್ದೇಶಕ ಅಭಿರಾಮ್ ಎನ್ನುವವರು ತಾವೇ ಕಥೆ-ಚಿತ್ರಕಥೆಯನ್ನು ಬರೆದು ನಿರ್ದೇಶನ ಮಾಡುತ್ತಿರುವ 'ಸಂಯುಕ್ತ 2 ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟ ಚೇತನ್ ಚಂದ್ರ ಮತ್ತು ನಟಿ ನೇಹಾ ಪಾಟೀಲ್ ಅವರು ನಾಯಕ-ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನುಳಿದಂತೆ ನವ ನಟ ಪ್ರಭು ಸೂರ್ಯ, ಸಂಜಯ್, ಬಿಂದು, ಪ್ರಿಯಾಂಕ ಮಲ್ನಾಡ್, ನಟಿ ರಶ್ಮಿಕಾ ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ. ನಿರ್ಮಾಪಕ ಚಿಕ್ಕೋಡಿ ಸಂಜಯ್ ಅವರು ಬಂಡವಾಳ ಹೂಡುತ್ತಿದ್ದು, ಕೆ.ವಿ ರವಿಚಂದ್ರ ಅವರು ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.

English summary
Is there any connection between Shivanna's 'Samyuktha' and Chethan Chandra's Kannada Movie 'Samyuktha 2'. Here is the Clarification.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada