»   » ಉಪೇಂದ್ರ ನಿರ್ದೇಶನದ 'ಶ್' ಚಿತ್ರಕ್ಕೂ 'ಮತ್ತೆ ಶ್'ಗೂ ಏನು ಸಂಬಂಧ?

ಉಪೇಂದ್ರ ನಿರ್ದೇಶನದ 'ಶ್' ಚಿತ್ರಕ್ಕೂ 'ಮತ್ತೆ ಶ್'ಗೂ ಏನು ಸಂಬಂಧ?

Posted By:
Subscribe to Filmibeat Kannada

'ಶ್' ಅಂತ ಶೀರ್ಷಿಕೆ ಇಟ್ಟು, ಸ್ಯಾಂಡಲ್ ವುಡ್ ನಲ್ಲಿ ಹೊಸ ಪ್ರಯೋಗ ಮಾಡಿದ ರಿಯಲ್ ಸ್ಟಾರ್ ಉಪೇಂದ್ರ ಯಶಸ್ವಿ ಆದರು. 1993ರಲ್ಲಿ ತೆರೆಕಂಡ ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾ 'ಶ್' ಗಲ್ಲಪೆಟ್ಟಿಗೆಯಲ್ಲಿ ಸಖತ್ ಕಲೆಕ್ಷನ್ ಮಾಡಿದ್ದು ಅಷ್ಟೇ ಸತ್ಯ.

ಈಗ ಅದೇ ಚಿತ್ರವನ್ನ ನೆನಪಿಸುವಂತೆ ಮತ್ತೊಂದು ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಆ ಚಿತ್ರವೇ 'ಮತ್ತೆ ಶ್'. [ನಿಮ್ಮೆಲ್ಲರ ಎದೆ ನಡುಗಿಸಲು ಬರಲಿದೆ 'ಮತ್ತೆ ಶ್'.!]

is-there-any-similarity-between-kannada-movie-matte-shh-and-upendra-s-shh

ಅಷ್ಟಕ್ಕೂ ಈ ಚಿತ್ರಕ್ಕೆ 'ಮತ್ತೆ ಶ್' ಅಂತ ಶೀರ್ಷಿಕೆ ಇಡಲು ಒಂದು ಕಾರಣವಿದೆ. ಅದೇನಪ್ಪಾ ಅಂದ್ರೆ, 'ಮತ್ತೆ ಶ್' ಚಿತ್ರದ ನಿರ್ದೇಶಕ ವೆಸ್ಲೆ ಬ್ರೌನ್, ಉಪೇಂದ್ರ ರವರ ಅಪ್ಪಟ ಅಭಿಮಾನಿ.

is-there-any-similarity-between-kannada-movie-matte-shh-and-upendra-s-shh

ಉಪೇಂದ್ರ ನಿರ್ದೇಶನದ 'ಶ್' ಬಿಡುಗಡೆ ಆದಾಗ ವೆಸ್ಲೆ ಬ್ರೌನ್ ಇನ್ನೂ ಆಟವಾಡುವ ಪುಟ್ಟ ಬಾಲಕ. ಆಗಲೇ 'ಶ್' ಅಂತಹ ಸಿನಿಮಾ ಮಾಡಬೇಕು ಅಂತ ಕನಸು ಕಂಡಿದ್ದ ವೆಸ್ಲೆ ಬ್ರೌನ್, ಇದೀಗ ತಮ್ಮ ಕನಸನ್ನ ನನಸು ಮಾಡಿಕೊಂಡಿದ್ದಾರೆ.

is-there-any-similarity-between-kannada-movie-matte-shh-and-upendra-s-shh

ಇನ್ನೂ ಇಂಟ್ರೆಸ್ಟಿಂಗ್ ಅಂದ್ರೆ, 'ಶ್' ಚಿತ್ರಕ್ಕೂ 'ಮತ್ತೆ ಶ್' ಚಿತ್ರಕ್ಕೂ ಕೆಲ ಸಾಮ್ಯತೆಗಳಿವೆ. ಒಂದು ಚಿತ್ರತಂಡ ಶೂಟಿಂಗ್ ಗೆ ಅಂತ ಭೂತ ಬಂಗಲೆಗೆ ಹೋದಾಗ, ಅಲ್ಲಿ ನಡೆಯುವ ಎದೆ ನಡುಗಿಸುವ ಘಟನೆಗಳೇ ಈ ಚಿತ್ರ. 'ಶ್' ಚಿತ್ರದ ಕಥೆಯೂ ಬಹುತೇಕ ಹೀಗೆ ಇದ್ದರಿಂದ ಈ ಚಿತ್ರಕ್ಕೆ 'ಮತ್ತೆ ಶ್' ಅಂತ ಟೈಟಲ್ ಇಡಲಾಗಿದೆ.

is-there-any-similarity-between-kannada-movie-matte-shh-and-upendra-s-shh

ಚಿತ್ರದಲ್ಲಿ ನಟ ವಿಜಯ್ ಚೆಂಡೂರ್, ಶ್ರುತಿ ಹೀರಾ, ರಚಿತ್, ರಾಹುಲ್ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ. 'ಎಸ್.ಆರ್.ಟಾಕೀಸ್' ಲಾಂಛನದಡಿಯಲ್ಲಿ ದಯಾನಂದ್ ಮಠ್ಪತಿ ಚಿತ್ರ ನಿರ್ಮಿಸಿದ್ದಾರೆ. ಸದ್ಯದಲ್ಲೇ 'ಮತ್ತೆ ಶ್' ತೆರೆಗೆ ಬರಲಿದೆ.

English summary
Is there any similarity between Real Star Upendra directorial Kannada Movie 'Shh' and Kannada Actor Vijay Chandoor starrer 'Matte Shh'? Read the article to know the answer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada