Don't Miss!
- News
ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್ಗಳು
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿಕ್ರಾಂತ್ ರೋಣ: ಸುದೀಪ್‌ರದ್ದು ದ್ವಿಪಾತ್ರವಾ? ಪಾರ್ಟ್ 2 ಬರುತ್ತಾ? ನಾಯಕಿ ಇಲ್ಲವಾ?
'ಕೆಜಿಎಫ್ 2' ಬಳಿಕ ಭಾರಿ ನಿರಿಕ್ಷೆ ಇಟ್ಟುಕೊಂಡಿದ್ದ ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾ ಇಂದು ಬಿಡುಗಡೆ ಆಗಿದೆ. ಮೊದಲ ಶೋ ಮುಗಿದಿದ್ದು, ಸಿನಿಮಾದ ಬಗ್ಗೆ ಒಳ್ಳೆಯ ವಿಮರ್ಶೆಗಳು ವ್ಯಕ್ತವಾಗುತ್ತಿವೆ.
2021ರಲ್ಲೇ ಬಿಡುಗಡೆ ಆಗಬೇಕಿದ್ದ 'ವಿಕ್ರಾಂತ್ ರೋಣ' ಸಿನಿಮಾ ಬಹಳ ತಡವಾಗಿ ಈಗ ಬಿಡುಗಡೆ ಆಗಿದೆ. ಚಿತ್ರಕತೆಯನ್ನು ಬಹಳ ತಿದ್ದಿದ ಬಳಿಕ ಸಿನಿಮಾ ಮಾಡಿದ್ದಾಗಿ, ಚಿತ್ರೀಕರಣದ ಪ್ರತಿ ಹಂತದಲ್ಲಿಯೂ ಪ್ರೊಡಕ್ಷನ್ ಸ್ಕೇಲ್ ಹೆಚ್ಚಿಸಿಕೊಳ್ಳುತ್ತಲೇ ಸಾಗಿದ್ದಾಗಿಯೂ ನಿರ್ದೇಶಕ ಅನುಪ್ ಭಂಡಾರಿ ಈಗಾಗಲೇ ಹೇಳಿದ್ದಾರೆ.
ಬಿಡುಗಡೆ
ದಿನವೇ
'ಕೆಜಿಎಫ್-2'
ಆ
ದಾಖಲೆ
ಉಡೀಸ್
ಮಾಡಿದ
'ರೋಣ'
ಈ ಸಿನಿಮಾ ಬಿಡುಗಡೆ ಆಗುವ ಮುನ್ನ ಸಿನಿಮಾದ ಬಗ್ಗೆ, ಸಿನಿಮಾದ ಕತೆ, ಸುದೀಪ್‌ರ ಪಾತ್ರದ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದವು. ಅದರಲ್ಲಿಯೂ ಚಿತ್ರತಂಡ ಬಿಡುಗಡೆ ಮಾಡಿದ್ದ ಟೀಸರ್, ಟ್ರೈಲರ್‌ಗಳ ಬಳಿಕ ಹಲವು ಅನುಮಾನಗಳು ಸಿನಿಮಾದ ಬಗ್ಗೆ ಎದ್ದಿದ್ದವು.
ಈ ಸಿನಿಮಾ ಅನುಪ್ ಭಂಡಾರಿಯ ಮೊದಲ ಸಿನಿಮಾ 'ರಂಗಿತರಂಗ' ಸಿನಿಮಾದ ಮುಂದಿನ ಭಾಗವಂತೆ, ಸಿನಿಮಾದಲ್ಲಿ ಸುದೀಪ್‌ರದ್ದು ದ್ವಿಪಾತ್ರವಂತೆ, ಸುದೀಪ್ ಈ ಸಿನಿಮಾದಲ್ಲಿ ದೆವ್ವದ ಪಾತ್ರದಲ್ಲಿ ನಟಿಸಿದ್ದಾರೆ, 'ವಿಕ್ರಾಂತ್ ರೋಣ' ಸಿನಿಮಾದ ಎರಡನೇ ಭಾಗವೂ ಬರುತ್ತಿದೆಯಂತೆ ಹೀಗೆ ಹಲವು ಅನುಮಾನಗಳು ಸಿನಿಮಾದ ಬಗ್ಗೆ ಎದ್ದಿತ್ತು. ಇದೀಗ ಸಿನಿಮಾ ಬಿಡುಗಡೆ ಆಗಿದ್ದು ಎಲ್ಲ ಅನುಮಾನಗಳಿಗೂ ಉತ್ತರ ಸಿಕ್ಕಿದೆ.

'ರಂಗಿತರಂಗ' ಸಿನಿಮಾದ ಮುಂದಿನ ಭಾಗವೇ 'ವಿಕ್ರಾಂತ್ ರೋಣ'?
'ರಂಗಿತರಂಗ' ಸಿನಿಮಾದ ಮುಂದಿನ ಭಾಗ 'ವಿಕ್ರಾಂತ್ ರೋಣ' ಸಿನಿಮಾವೇ? ಎಂಬುದಕ್ಕೆ ಸ್ಪಷ್ಟ ಉತ್ತರ ಅಲ್ಲ. 'ರಂಗಿತರಂಗ' ಸಿನಿಮಾದ ಕತೆಗೂ 'ವಿಕ್ರಾಂತ್ ರೋಣ' ಸಿನಿಮಾದ ಕತೆಗೂ ನೇರ ಸಂಬಂಧ ಇಲ್ಲ. ಆದರೆ 'ವಿಕ್ರಾಂತ್ ರೋಣ' ಸಿನಿಮಾ ನಡೆಯುವುದು 'ರಂಗಿತರಂಗ' ಸಿನಿಮಾದ ಕತೆ ನಡೆದ ಅದೇ ಕಮರೊಟ್ಟು ಗ್ರಾಮದಲ್ಲಿ. 'ರಂಗಿತರಂಗ' ಸಿನಿಮಾದ ಮುಂದಿನ ಭಾಗ ಈ ಸಿನಿಮಾ ಅಲ್ಲದೇ ಹೋದರು ಎರಡು ಸಿನಿಮಾಗಳ ಕತೆಯಲ್ಲಿ ಅಲ್ಲಲ್ಲಿ ತುಸು ಸಾಮ್ಯತೆ ಇದೆ ಎಂದು ಪ್ರೇಕ್ಷಕನಿಗೆ ಅನಿಸದೇ ಇರದು.

ಸುದೀಪ್‌ರದ್ದು ದ್ವಿಪಾತ್ರವಾ? ಸುದೀಪ್ ದೆವ್ವವಾ?
ಸಿನಿಮಾದ ಬಗ್ಗೆ ಇದ್ದ ಮತ್ತೊಂದು ಅನುಮಾನವೆಂದರೆ ಸುದೀಪ್‌ರದ್ದು ದ್ವಿಪಾತ್ರವಾ? ಅಥವಾ ಸುದೀಪ್ ಈ ಸಿನಿಮಾದಲ್ಲಿ ದೆವ್ವಾ ಎಂಬುದು. ಸಿನಿಮಾದ ಟೀಸರ್‌ಗಳಲ್ಲಿ ಸುದೀಪ್ ಅನ್ನು ಡೆವಿಲ್‌ಗೆ ಹೋಲಿಸಲಾಗಿದೆ ಆದ್ದರಿಂದ ಈ ಅನುಮಾನ ಸಹಜ. ಸಿನಿಮಾದಲ್ಲಿ ಸುದೀಪ್ ಡೆವಿಲ್ ಎಂಬುದು ನಿಜ. ಆದರೆ ದೆವ್ವವಾ ಎಂದರೆ ಅಲ್ಲ. ಇನ್ನು ಸುದೀಪ್‌ರದ್ದು ಈ ಸಿನಿಮಾದಲ್ಲಿ ದ್ವಿಪಾತ್ರವಾ? ಎಂಬ ಪ್ರಶ್ನೆಗೆ ಉತ್ತರವನ್ನು ಚಿತ್ರಮಂದಿರದಲ್ಲೇ ಕಂಡುಕೊಳ್ಳಿ. ಎಲ್ಲವನ್ನೂ ಇಲ್ಲೇ ಹೇಳಿಬಿಟ್ಟರೆ ಹೇಗೆ?

ಸಿನಿಮಾದಲ್ಲಿ ನಾಯಕಿಯರೇ ಇಲ್ಲವೆ?
ಈ ಸಿನಿಮಾದಲ್ಲಿ ನಾಯಕಿಯರಿಲ್ಲ ಎಂದು ಸಹ ಸುದ್ದಿಯಾಗಿತ್ತು. ಆದರೆ ಅದು ಸುಳ್ಳು ಸುದ್ದಿ. ಸಿನಿಮಾದಲ್ಲಿ ನೀತಾ ಅಶೋಕ್ ಎಂಬ ಸುಂದರವಾಗಿ ನಟಿ ಇದ್ದಾರೆ. ಅವರು ಸಿನಿಮಾದ ನಾಯಕಿಯೇ ಹೌದು. ಅಸಲಿಗೆ ಸಿನಿಮಾದಲ್ಲಿ ಇನ್ನೊಬ್ಬ ನಾಯಕಿ ಇದ್ದಾರೆ. ಬಹಳ ಸುಂದರವಾಗಿ ಅವರು ಕಾಣಿಸಿಕೊಂಡಿದ್ದಾರೆ ಅದೂ ಸುದೀಪ್ ಜೊತೆಗೆ. ಆದರೆ ಆ ನಾಯಕಿ ಯಾರು ಎಂಬುದನ್ನು ಚಿತ್ರತಂಡ ಗುಟ್ಟಾಗಿ ಇಟ್ಟಿದೆ. ಆ ಗುಟ್ಟು ಚಿತ್ರಮಂದಿರದಲ್ಲಿಯೇ ರಟ್ಟಾಗಬೇಕಾದ್ದರಿಂದ ಸಿನಿಮಾ ನೋಡಿಯೇ ನಾಯಕಿ ಯಾರೆಂಬುದನ್ನು ತಿಳಿದುಕೊಂಡರೆ ಉತ್ತಮ. ಅಂದಹಾಗೆ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಜಾಕ್ವೆಲಿನ್ ಫರ್ನಾಂಡೀಸ್ ಸಹ ಇದ್ದಾರೆ.

ಸಿನಿಮಾದ ಮುಂದಿನ ಭಾಗ ಬರಲಿದೆಯಾ?
ಈಗ ಸಿನಿಮಾಗಳದ್ದು ಫಸ್ಟ್ ಪಾರ್ಟ್ ಸೆಕೆಂಡ್ ಪಾರ್ಟ್‌ಗಳ ಕಾಲ. 'ಬಾಹುಬಲಿ' ಇಂದ ಆರಂಭವಾಗಿ ಹಲವು ಹಿಟ್ ಸಿನಿಮಾಗಳು ಎರಡೆರಡು ಪಾರ್ಟ್‌ನಲ್ಲಿ ಬಿಡುಗಡೆ ಆಗುತ್ತಿವೆ. 'ವಿಕ್ರಾಂತ್ ರೋಣ' ಸಿನಿಮಾ ಸಹ ಎರಡು ಪಾರ್ಟ್‌ನಲ್ಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಈ ಬಗ್ಗೆ ಸಿನಿಮಾದಲ್ಲಿ ಯಾವುದೇ ಕ್ಲೂ ಇಲ್ಲ. ಸಿನಿಮಾದ ಹೇಳಲಾಗಿರುವ ಕತೆ ಇದೇ ಸಿನಿಮಾದಲ್ಲಿ ಸ್ಪಷ್ಟವಾಗಿ ಅಂತ್ಯವಾಗಿದೆ. ಸಿನಿಮಾದ ನಾಯಕ ಯಾವ 'ಲೂಸ್ ಎಂಡ್' ಅನ್ನೂ ಉಳಿಸಿಲ್ಲವಾದ್ದರಿಂದ ಸಿನಿಮಾದ ಎರಡನೇ ಭಾಗ ಬರುವುದು ಅನುಮಾನ. ಆದರೆ ಇದೇ ನಿರ್ದೇಶಕ-ನಾಯಕ ಜೋಡಿ 'ಬಿಲ್ಲಾ ರಂಗ ಭಾಷಾ' ಸಿನಿಮಾವನ್ನು ಒಟ್ಟಿಗೆ ಮಾಡಲಿದ್ದಾರೆ.