For Quick Alerts
  ALLOW NOTIFICATIONS  
  For Daily Alerts

  ಯಶ್-ರಾಧಿಕಾ ಪಂಡಿತ್ ಚಿತ್ರದ ಟೈಟಲ್ ಮತ್ತೆ ಬದಲಾಯಿತೆ?

  By Suneetha
  |

  ಕೆ.ಮಂಜು ನಿರ್ಮಾಣದಲ್ಲಿ ಮೂಡಿಬರುತ್ತಿರುವ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಒಂದಾಗಿ ಕಾಣಿಸಿಕೊಳ್ಳಲಿರುವ ಹೊಸ ಸಿನಿಮಾಕ್ಕೆ 'ಗಾಂಧಿ ಕ್ಲಾಸ್' ಅಂತ ಹೆಸರಿಡಲಾಗಿದೆ ಎಂದು ಈ ಮೊದಲು ಸುದ್ದಿಯಾಗಿತ್ತು.

  ಆದರೆ ಸಿನಿಮಾದ ಹೆಸರು 'ಗಾಂಧಿ ಕ್ಲಾಸ್' ಅಲ್ಲ ಸುಮಾರು 4 ರಿಂದ 5 ಹೆಸರುಗಳನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಚಿತ್ರಕ್ಕೆ ಟೈಟಲ್ ಯಾವುದು ಎಂದು ಇನ್ನೂ ನಿರ್ಧರಿಸಿಲ್ಲ ಎಂದು ನಿರ್ಮಾಪಕ ಕೆ.ಮಂಜು ಅವರು ಸ್ಪಷ್ಟನೆ ನೀಡಿದ್ದರು.[ಯಶ್-ರಾಧಿಕಾ ಅವರ ಹೊಸ ಚಿತ್ರದ ಹೆಸರೇನು ಗೊತ್ತಾ?]

  ಇದೀಗ ಚಿತ್ರ ತಂಡದಿಂದ ಹೊರ ಬಂದಿರುವ ಹೊಸ ವಿಚಾರ ಏನಪ್ಪಾ ಅಂದ್ರೆ, ಚಿತ್ರಕ್ಕೆ 'ಮಾಂಜಾ' ಎಂದು ಹೆಸರಿಡಲು ನಿರ್ಮಾಪಕ ಕೆ.ಮಂಜು ಅವರ ಸ್ನೇಹಿತರು ಒಬ್ಬರು ಸಲಹೆ ನೀಡಿದ್ದಾರಂತೆ.

  ಆದರೆ ಪಕ್ಕಾ ಅಂತ ಇನ್ನೂ ಚಿತ್ರದ ಹೆಸರು ನಿರ್ಧಾರವಾಗಿಲ್ಲ, ಆದರೆ ಎಲ್ಲರೂ ಟೈಟಲ್ ಬಗ್ಗೆ ಯಾಕಿಷ್ಟು ಉತ್ಸಾಹ ತೋರುತ್ತಾರೆ ಎಂಬುದು ನನಗೆ ಅಚ್ಚರಿಯ ವಿಷಯ ಎಂದು ನಿರ್ಮಾಪಕ ಮಂಜು ತಿಳಿಸಿದ್ದಾರೆ.[ಯಶ್ ಸಿನಿಮಾದಿಂದ 'ಡೆಡ್ಲಿ' ಆದಿತ್ಯ ಔಟ್ ಆಗಿದ್ದೇಕೆ?]

  ಚಿತ್ರಕ್ಕೆ 'ಕೇಸ್ ನಂಬರ್ 18/9' ಚಿತ್ರದ ಖ್ಯಾತಿಯ ನಿರ್ದೇಶಕ ಮಹೇಶ್ ರಾವ್ ಅವರು ಆಕ್ಷನ್-ಕಟ್ ಹೇಳಲಿದ್ದಾರೆ. ಈಗಾಗಲೇ ಚಿತ್ರದ ಪ್ರೀ ಪ್ರೊಡಕ್ಷನ್ ಹಂತದ ಕೆಲಸದಲ್ಲಿರುವ ಚಿತ್ರತಂಡ ಫೆಬ್ರವರಿ 25 ರಿಂದ ಚಿತ್ರೀಕರಣ ಆರಂಭಿಸಲು ನಿರ್ಧರಿಸಿದೆ.

  ನಿರ್ಮಾಪಕ ಕೆ.ಮಂಜು ನಿರ್ಮಾಣದ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಸ್ಲೈಡ್ಸ್ ಕ್ಲಿಕ್ ಮಾಡಿ...

  ಡೈಲಾಗ್ ಕಿಂಗ್ ಸಾಯಿಕುಮಾರ್

  ಡೈಲಾಗ್ ಕಿಂಗ್ ಸಾಯಿಕುಮಾರ್

  'ರಂಗಿತರಂಗ' ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಗಮನ ಸೆಳೆಯುವುದರ ಜೊತೆಗೆ ಮೆಚ್ಚುಗೆ ಪಡೆದಿರುವ ಡೈಲಾಗ್ ಕಿಂಗ್ ಸಾಯಿಕುಮಾರ್ ಅವರು ಕೆ.ಮಂಜು ನಿರ್ಮಾಣದ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಚಿತ್ರದಲ್ಲಿ ಸಾಯಿಕುಮಾರ್ ಅವರು ನಟಿ ರಾಧಿಕಾ ಪಂಡಿತ್ ಅವರ ತಂದೆಯ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಪಾತ್ರ ಸಾಯಿಕುಮಾರ್ ಅವರ ಸಿನಿ ಜೀವನದಲ್ಲಿ ಒಂದು ಆಕರ್ಷಕ ಪಾತ್ರವಂತೆ.

  ಬಹಳ ಇನ್ನೋಸೆಂಟ್ ಪಾತ್ರದಲ್ಲಿ ಯಶ್

  ಬಹಳ ಇನ್ನೋಸೆಂಟ್ ಪಾತ್ರದಲ್ಲಿ ಯಶ್

  'ಮಾಸ್ಟರ್ ಪೀಸ್' ಸಿನಿಮಾದಲ್ಲಿ ಬಿಲ್ಡಪ್ ರಾಜಾ, 'ರಾಜಾಹುಲಿ'ಯಲ್ಲಿ ಗೆಳೆಯರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧನಾಗುವ ಪಾತ್ರದಲ್ಲಿದ್ದ ಮಿಂಚಿದ್ದ ಯಶ್ ಅವರು ಈ ಸಿನಿಮಾದಲ್ಲಿ ಮಾತ್ರ ಬಹಳ ಮುಗ್ದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  ಆದಿತ್ಯ ಜಾಗಕ್ಕೆ ಇನ್ನೂ ಆಯ್ಕೆ ಆಗಿಲ್ಲ

  ಆದಿತ್ಯ ಜಾಗಕ್ಕೆ ಇನ್ನೂ ಆಯ್ಕೆ ಆಗಿಲ್ಲ

  ಈ ಮೊದಲು ಈ ಸಿನಿಮಾದಲ್ಲಿ ನಟ ಆದಿತ್ಯ ಅವರು ಯಶ್ ಜೊತೆ ಕಾಣಿಸಿಕೊಳ್ಳುತ್ತಾರೆ ಎಂದು ಸುದ್ದಿಯಾಗಿ, ತದನಂತರ ಅವರು ಆ ಜಾಗದಿಂದ ತೆರವಾಗಿದ್ದರು. ಇದೀಗ ಆ ಜಾಗಕ್ಕೆ ಸೂಕ್ತ ವ್ಯಕ್ತಿಯ ಹುಡುಕಾಟವನ್ನು ಚಿತ್ರತಂಡ ಮುಂದುವರಿಸಿದೆ.

  ಯಶ್-ರಾಧಿಕಾ ಪಂಡಿತ್ ಜೋಡಿ

  ಯಶ್-ರಾಧಿಕಾ ಪಂಡಿತ್ ಜೋಡಿ

  'ಮೊಗ್ಗಿನ ಮನಸು', 'ಡ್ರಾಮಾ', 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಮುಂತಾದ ಸಿನಿಮಾಗಳಲ್ಲಿ ಮೋಡಿ ಮಾಡಿದ್ದ ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ಜೋಡಿಯ ಮೋಡಿ ಈ ಸಿನಿಮಾದಲ್ಲಿ ಮತ್ತೆ ಮುಂದುವರಿಯಲಿದೆ.[ಮತ್ತೆ ಮೋಡಿ ಮಾಡಲಿರುವ 'ಮಿ.ಅಂಡ್ ಮಿಸಸ್' ರಾಮಾಚಾರಿ ಜೋಡಿ]

  ಫೆಬ್ರವರಿಯಿಂದ ಶೂಟಿಂಗ್

  ಫೆಬ್ರವರಿಯಿಂದ ಶೂಟಿಂಗ್

  ಈಗಾಗಲೇ ನಿರ್ಮಾಪಕ ಕೆ.ಮಂಜು ಮತ್ತು ಚಿತ್ರತಂಡದವರು ಚಿತ್ರದ ಪ್ರಿ ಪ್ರೊಡಕ್ಷನ್ಸ್ ಕೆಲಸದಲ್ಲಿ ಬ್ಯುಸಿಯಾಗಿದ್ದು, ಫೆಬ್ರವರಿ 25 ರಿಂದ ಚಿತ್ರದ ಶೂಟಿಂಗ್ ಆರಂಭಗೊಳಿಸಲಿದೆ.

  English summary
  Rocking Star Yash's upcoming movie going on floors this month (February). The latest reports say that, Yash and Producer K Manju will be again collaborating in 2016 and the movie has been titled as 'Maanja'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X