For Quick Alerts
  ALLOW NOTIFICATIONS  
  For Daily Alerts

  ರೇವಂತ್- ಮೋಹನಾ ಪ್ರೀತಿ ಹಾಡು ಇತ್ಯಾದಿ: 'ಗೂಗ್ಲಿ' ಫ್ಲೇವರ್ 'ರೇಮೊ' ಟ್ರೈಲರ್ ಸೂಪರ್!

  |

  ಪವನ್ ಒಡೆಯರ್ ನಿರ್ದೇಶನದ 'ರೇಮೊ' ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಸದ್ಯ ಈ ಯೂತ್‌ಫುಲ್ ಮ್ಯೂಸಿಕಲ್ ಎಂಟರ್‌ಟೈನರ್‌ ಸಿನಿಮಾ ಟ್ರೈಲರ್ ಆಗಿ ಸದ್ದು ಮಾಡ್ತಿದೆ. ರೇವಂತ್ ಹಾಗೂ ಮೋಹನಾ ಆಗಿ ಲೀಡ್ ರೋಲ್‌ಗಳಲ್ಲಿ ಇಶಾನ್, ಆಶಿಕಾ ರಂಗನಾಥ್ ಗಮನ ಸೆಳೆದಿದ್ದಾರೆ. ಮೊದಲ ನೋಟದಲ್ಲೇ ಟ್ರೈಲರ್ ಸಿನಿರಸಿಕರಿಗೆ ಇಷ್ಟವಾಗಿದ್ದು, ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿಸಿದೆ.

  ಬಹಳ ಹಿಂದೆ ಶುರುವಾಗಿದ್ದ 'ರೇಮೊ' ಸಿನಿಮಾ ಕಾರಣಾಂತರಗಳಿಂದ ರಿಲೀಸ್ ಆಗುವುದು ತಡವಾಗುತ್ತಾ ಬಂದಿತ್ತು. 'ದಿ ವಿಲನ್' ಸಿನಿಮಾ ನಂತರ ಸಿ. ಆರ್ ಮನೋಹರ್ ಬಹಳ ಅದ್ಧೂರಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಮ್ಯೂಸಿಕ್ ಮತ್ತೊಂದು ಹೈಲೆಟ್ ಎನಿಸಿಕೊಂಡಿದೆ. ಬೆಂಗಳೂರು, ಹೈದರಾಬಾದ್, ಥಾಯ್ಲೆಂಡ್, ಸಿಂಗಾಪುರ, ಮಲೇಷಿಯಾ ಸೇರಿದಂತೆ ಅದ್ಭುತ ಲೊಕೇಶನ್‌ಗಳಲ್ಲಿ ಚಿತ್ರವನ್ನು ಸೆರೆ ಹಿಡಿಯಲಾಗಿದೆ. ಬೆಂಗಳೂರು 1.50 ಕೋಟಿ ರೂ. ಬಜೆಟ್‌ನಲ್ಲಿ ಅದ್ಭುತ ಸೆಟ್ ನಿರ್ಮಿಸಿ ಚಿತ್ರದ ಬಹುತೇಕ ಸನ್ನಿವೇಶಗಳನ್ನು ಸೆರೆಹಿಡಿಯಲಾಗಿದೆ.

  ಬಾಲಿವುಡ್ ಅಂಗಳಕ್ಕೆ ಜಿಗಿದ ಪವನ್ ಒಡೆಯರ್: ಸದ್ದಿಲ್ಲದೇ ಸೆಟ್ಟೇರಿದೆ ಕಾಮಿಡಿ ಎಂಟರ್‌ಟೈನರ್ 'ನೋಟರಿ'ಬಾಲಿವುಡ್ ಅಂಗಳಕ್ಕೆ ಜಿಗಿದ ಪವನ್ ಒಡೆಯರ್: ಸದ್ದಿಲ್ಲದೇ ಸೆಟ್ಟೇರಿದೆ ಕಾಮಿಡಿ ಎಂಟರ್‌ಟೈನರ್ 'ನೋಟರಿ'

  'ಗೂಗ್ಲಿ' ನಂತರ ಪವನ್ ಒಡೆಯರ್ ಬೇರೆ ತರಹದ ಜಾನರ್ ಸಿನಿಮಾಗಳತ್ತ ಮುಖ ಮಾಡಿದ್ದರು. 'ರೇಮೊ' ಮೂಲಕ ಇದೀಗ ಮತ್ತೆ ಅಂಥದ್ದೇ ಫ್ರೆಶ್ ಲವ್ ಸ್ಟೋರಿ ನಿರ್ದೇಶಕರು ಸಿದ್ಧರಾಗಿದ್ದಾರೆ. ಟ್ರೈಲರ್‌ನಲ್ಲಿ ಅದು ಗೊತ್ತಾಗುತ್ತಿದೆ.

  ರಾಕ್‌ಸ್ಟಾರ್ ರೇವಂತ್ ಲವ್‌ ಸ್ಟೋರಿ

  ರಾಕ್‌ಸ್ಟಾರ್ ರೇವಂತ್ ಲವ್‌ ಸ್ಟೋರಿ

  ಚಿತ್ರದ ನಾಯಕನ ರಾಕ್‌ಸ್ಟಾರ್ ರೇವಂತ್. ನಾಯಕಿ ಮೋಹನಾ ಖ್ಯಾತ ಗಾಯಕಿ ಮೋಹನಾ. ಇವರಿಬ್ಬರ ಪ್ರೇಮ್ ಕಹಾನಿ 'ರೇಮೊ'. ಇವರಿಬ್ಬರು ಹೆಸರಿನ ಮೊದಲ ಅಕ್ಷರಗಳನ್ನು ಸೇರಿಸಿ 'ರೇಮೊ' ಎನ್ನುವ ವಿಭಿನ್ನ ಟೈಟಲ್ ಇಟ್ಟಿರೋದು ಗೊತ್ತೇಯಿದೆ. ರಾಕ್‌ಸ್ಟಾರ್ ರೇವಂತ್‌ಗೆ ನಾನೇ ನಂಬರ್ ವನ್, ನನ್ನ ಬಿಟ್ಟರೆ ಯಾರು ಇಲ್ಲ ಎನ್ನುವ ಧಿಮಾಕು. ರಾತ್ರೋರಾತ್ರಿ ಮೋಹನಾ ಕೂಡ ಗಾಯಕಿಯಾಗಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಾಳೆ. ನಂಬರ್ ವನ್ ಪಟ್ಟಕ್ಕಾಗಿ ಇಬ್ಬರ ನಡುವೆ ಪೈಪೋಟಿ ಶುರುವಾಗುತ್ತದೆ. ಈ ಹಾದಿಯಲ್ಲಿ ರೇವಂತನ ಪ್ರೇಮಪಾಶದಲ್ಲಿ ಮೋಹನಾ ಸಿಲುಕುತ್ತಾಳೆ. ಮುಂದೆ ಈ ಲವ್ ಸ್ಟೋರಿ ಏನೆಲ್ಲಾ ತಿರುವು ಪಡೆದುಕೊಳ್ಳುತ್ತೆ ಎನ್ನುವುದನ್ನು ತೆರೆಮೇಲೆ ನೋಡಬೇಕು.

  ಇಶಾನ್- ಆಶಿಕಾ ಮೋಡಿ

  ಇಶಾನ್- ಆಶಿಕಾ ಮೋಡಿ

  ಪ್ರತಿಫ್ರೇಮ್ ಕಣ್ಣಿಗೆ ಹಬ್ಬ ಎನ್ನುವಂತಿದೆ. ಸಿಂಪಲ್ ಕಥೆಯನ್ನು ಬಹಳ ಪರಿಣಾಮಕಾರಿಯಾಗಿ ಪವನ್ ಒಡೆಯರ್ ಕಟ್ಟಿಕೊಟ್ಟಿರೋದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಈ ಹಿಂದೆ ಪುರಿ ಜಗನ್ನಾಥ್ ನಿರ್ದೇಶನದ 'ರೋಗ್‌' ಚಿತ್ರದಲ್ಲಿ ಹೀರೊ ಆಗಿ ಲಾಂಚ್ ಆಗಿದ್ದ ಇಶಾನ್, 'ರೇಮೊ' ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮನಗೆಲ್ಲಲು ಬರುತ್ತಿದ್ದಾರೆ. ಸ್ಟೈಲಿಶ್ ಲುಕ್, ಮ್ಯಾನರಿಸಂ, ಆಟಿಟ್ಯೂಡ್ ನಿಜಕ್ಕೂ ರಾಕ್‌ಸ್ಟಾರ್ ಆಗಿ ಮೋಡಿ ಮಾಡಿದ್ದಾರೆ. ಆಕ್ಷನ್ ಸೀಕ್ವೆನ್ಸ್‌ನಲ್ಲಿ ಕೊಂಚ ಹೆಚ್ಚೇ ಅಬ್ಬರಿಸಿದ್ದಾರೆ. ಆಶಿಕಾ ಮುದ್ದಾಗಿ ಕಾಣಿಸೋದಷ್ಟೇ ಅಲ್ಲ ಮೋಹನಾ ಪಾತ್ರದಲ್ಲಿ ಪ್ರೇಕ್ಷಕರ ಮನಗೆಲ್ಲುವ ಸುಳಿವು ಸಿಗುತ್ತಿದೆ.

  'ರೇಮೊ' ಚಿತ್ರದಲ್ಲಿ 'ಗೂಗ್ಲಿ' ಫ್ಲೇವರ್

  'ರೇಮೊ' ಚಿತ್ರದಲ್ಲಿ 'ಗೂಗ್ಲಿ' ಫ್ಲೇವರ್

  9 ವರ್ಷಗಳ ಹಿಂದೆ ರಾಕಿಂಗ್ ಸ್ಟಾರ್ ಯಶ್ ಹಾಗೂ ಕೃತಿ ಕರಬಂಧ ನಟನೆಯ 'ಗೂಗ್ಲಿ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಬಹಳ ವಿಭಿನ್ನ ಕಥೆ ಕಟ್ಟಿಕೊಟ್ಟು ಪವನ್ ಒಡೆಯರ್ ಸಕ್ಸಸ್ ಕಂಡಿದ್ದರು. 'ರೇಮೊ' ಟ್ರೈಲರ್ ನೋಡಿದವರಿಗೆ 'ಗೂಗ್ಲಿ' ನೆನಪಾಗುತ್ತಿದೆ. ಅದರಲ್ಲೂ ನಾಯಕಿ ನಾಯಕನ ಕೆನ್ನೆಗೆ ಬಾರಿಸೋದು, ತಿರುಗಿ ನಾಯಕ ಕೂಡ ನಾಯಕಿ ಕೆನ್ನೆಗೆ ಬಾರಿಸೋದು ಅದೇ ಸಿನಿಮಾವನ್ನು ನೆನಪಿಸುತ್ತಿದೆ. ಮ್ಯೂಸಿಕ್ ಲವ್‌ಸ್ಟೋರಿಗೆ ಎಮೋಷನ್ ಸೇರಿಸಿ ಸಿನಿಮಾ ಕಟ್ಟಿಕೊಟ್ಟಿರುವುದು ಗೊತ್ತಾಗುತ್ತಿದೆ. ಟ್ರೈಲರ್ ನೋಡಿದವರು 'ಗೂಗ್ಲಿ' ರೀತಿಯಲ್ಲೇ 'ರೇಮೊ' ಕೂಡ ಹಿಟ್ ಆಗುತ್ತದೆ ಎನ್ನುತ್ತಿದ್ದಾರೆ.

  ನವೆಂಬರ್ 25ಕ್ಕೆ 'ರೇಮೊ' ರಿಲೀಸ್

  ನವೆಂಬರ್ 25ಕ್ಕೆ 'ರೇಮೊ' ರಿಲೀಸ್

  'ರೇಮೊ' ಚಿತ್ರದಲ್ಲಿ ನಾಯಕನ ತಂದೆ ತಾಯಿ ಪಾತ್ರಗಳಲ್ಲಿ ತಮಿಳು ನಟ ಶರತ್‌ಕುಮಾರ್ ಹಾಗೂ ಮಧೂ ಮಿಂಚಿದ್ದಾರೆ. ಇನ್ನು ನಾಯಕಿ ತಂದೆ ಪಾತ್ರದಲ್ಲಿ ಅಚ್ಯುತ್ ಕುಮಾರ್ ಮಿಂಚಿದ್ದಾರೆ. ವೈಧಿ ಸಿನಿಮಾಟೋಗ್ರಫಿ ಬಹಳ ಸೊಗಸಾಗಿದೆ. ನವೆಂಬರ್ 25ಕ್ಕೆ ವಿಶ್ವದಾದ್ಯಂತ 'ರೇಮೊ' ಸಿನಿಮಾ ಬಿಡುಗಡೆ ಆಗಲಿದೆ. ಯಾವುದೇ ವಿಚಾರದಲ್ಲೂ ರಾಜಿಯಾಗದೇ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಿಸಲಾಗಿದೆ. ಸದ್ಯ ಬಾಲಿವುಡ್‌ ಸಿನಿಮಾದಲ್ಲಿ ಬ್ಯುಸಿಯಾಗಿರುವ ಪವನ್ ಒಡೆಯರ್‌ಗೆ ಕನ್ನಡದಲ್ಲಿ ಈ ಸಿನಿಮಾ ಸಕ್ಸಸ್ ತಂದುಕೊಡುತ್ತಾ ಕಾದು ನೋಡಬೇಕು.

  English summary
  Ishan and Ashika Ranganath Starrer Raymo Trailer Released. Romantic Musical film directed by Pavan Wadeyar and produced by C. R Manohar.
  Sunday, November 6, 2022, 17:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X