»   » ಪವರ್ ಸ್ಟಾರ್ ಪುನೀತ್ 'ಜಾಕಿ'ಗೆ ಭರ್ಜರಿ 5 ವರ್ಷಗಳ ಸಂಭ್ರಮ

ಪವರ್ ಸ್ಟಾರ್ ಪುನೀತ್ 'ಜಾಕಿ'ಗೆ ಭರ್ಜರಿ 5 ವರ್ಷಗಳ ಸಂಭ್ರಮ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬ್ಲಾಕ್ ಬಸ್ಟರ್ ಮೂವಿ 'ಜಾಕಿ'ಗೆ ಇದೀಗ 5 ವರ್ಷಗಳ ಸಂಭ್ರಮ. ನಿರ್ದೇಶಕ ದುನಿಯಾ ಸೂರಿ ಅವರು ಆಕ್ಷನ್-ಕಟ್ ಹೇಳಿದ್ದ 'ಜಾಕಿ' ಚಿತ್ರ ಅಪ್ಪು ಅಲಿಯಾಸ್ ಪುನೀತ್ ಗೆ ಭರ್ಜರಿ ಬ್ರೇಕ್ ಕೊಟ್ಟ ಸಿನಿಮಾ.

2010, ಅಕ್ಟೋಬರ್ 14 ರಂದು ತೆರೆ ಕಂಡ ಪುನೀತ್ ಅವರ 'ಜಾಕಿ' ಚಿತ್ರದಲ್ಲಿ ಪರಭಾಷಾ ನಟಿ ಭಾವನಾ ಅಪ್ಪು ಜೊತೆ ಡ್ಯುಯೆಟ್ ಹಾಡಿದ್ದರು. ಜೊತೆಗೆ ಹರ್ಷಿಕಾ ಪೂನಚ್ಚ, ರವಿಕಾಳೆ ಹಾಗೂ ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.[ಜಾಕಿ ಅಮೋಘ ಪ್ರಾರಂಭ; ಪ್ರೇಕ್ಷಕರ ನೂಕು ನುಗ್ಗಲು]

It's 5 Years For Puneeth Rajkumar Starrer 'Jackie'

ದುನಿಯಾ ಸೂರಿ ನಿರ್ದೇಶನ ಮಾಡಿದ್ದ 'ಜಾಕಿ' ಚಿತ್ರಕ್ಕೆ ಸೌತ್ ಫಿಲ್ಮ್ ಫೇರ್ ಅವಾರ್ಡ್ ನಲ್ಲಿ 2010ರ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿ ಸಂದಿತ್ತು. ತದನಂತರ 'ಜಾಕಿ' ತೆಲುಗು ಹಾಗೂ ಮಲಯಾಳಂ ಭಾಷೆಗೆ ಡಬ್ ಆಗಿತ್ತು.

ಜೀವನದಲ್ಲಿ ಮಿಲಿಯನೇರ್ ಆಗಬೇಕೆಂಬ ಕನಸು ಹೊತ್ತು ಪಟ್ಟಣಕ್ಕೆ ಹೊಡರುವ ಒಬ್ಬ ಹಳ್ಳಿಯ ಬಡ ಹುಡುಗನ ಪಾತ್ರದಲ್ಲಿ ಮಿಂಚಿದ್ದ ಪುನೀತ್ ರಾಜ್ ಕುಮಾರ್ ಅವರಿಗೆ ಪಟ್ಟಣದಲ್ಲಿ ಏನೇನು ಆಗುತ್ತೆ ಅನ್ನೋ ಬೇಸ್ ಮೇಲೆ ನಿರ್ದೇಶಕರು ಕಥೆ ಹೆಣೆದಿದ್ದರು.[ದುಬೈ, ಯುಎಇನಲ್ಲಿ ಅಣ್ಣಾಬಾಂಡ್ ಬಿಡುಗಡೆ]

ಚಿತ್ರದ ಹಾಡುಗಳು ಗಾಂಧಿನಗರದಲ್ಲಿ ಸಖತ್ ಹಿಟ್ ಆಗಿದ್ದು, ಸಿನಿಮಾದಲ್ಲಿರುವ 5 ಹಾಡುಗಳಿಗೆ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದರು, ನಿರ್ದೇಶಕ ಯೋಗರಾಜ್ ಭಟ್ ಅವರು ಸಾಹಿತ್ಯ ಬರೆದಿದ್ದರು.

'ಜಾಕಿ' ಚಿತ್ರದ ನಂತರ ನಿರ್ದೇಶಕ ದುನಿಯಾ ಸೂರಿ ಹಾಗೂ ಪುನೀತ್ ಅವರು 'ಅಣ್ಣಬಾಂಡ್' ಚಿತ್ರದ ಮೂಲಕ ಮತ್ತೆ ಒಂದಾಗಿದ್ದರು. ಇದೀಗ ಉತ್ತಮ ಗೆಳೆಯರಾಗಿರುವ ನಿರ್ದೇಶಕ ಸೂರಿ ಮತ್ತು ನಟ ಪುನೀತ್ ಅವರು 'ದೊಡ್ಮನೆ ಹುಡುಗ' ಎಂಬ ಬಿಗ್ ಬಜೆಟ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರ ಡಿಸೆಂಬರ್ 2015ರಲ್ಲಿ ತೆರೆ ಕಾಣಲಿದೆ.

English summary
Puneeth Rajkumar starrer blockbuster Kannada movie 'Jackie' movie completes 5 years. The movie directed by Duniya Soori gave a huge break to Puneeth in 2010. The movie was released on 14th October, it starred Puneeth, Bhavana, Ravi Kale and Harshika Poonacha in the lead roles.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada