ಖಳನಟ ಸೋನು ಸೂದ್ ಮನೆಗೆ ಐಟಿ ಅಧಿಕಾರಿಗಳು

ಇದಿಷ್ಟೇ ಅಲ್ಲದೆ ಬಾಲಿವುಡ್ ತಾರೆಗಳ ಮನೆಗಳಲ್ಲೂ ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ನಟ ಸಂಜಯ್ ದತ್, ಸೋನು ಸೂದ್, ಗಾಯಕ ಸೋನು ನಿಗಂ ಅವರ ನಿವಾಸಗಳಲ್ಲಿ ಐಟಿ ಪರಿಶೀಲನೆ ನಡೆಸಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾನ್ಯವಾಗಿ ಐಟಿ ಅಧಿಕಾರಿಗಳು ನಿರ್ವಹಿಸುವ ದಾಳಿ ರೀತಿಯಲ್ಲಲ್ಲದೆ ಪರಿಶೀಲನೆ ಸಂದರ್ಭದಲ್ಲಿ ಆದಾಯ ತೆರಿಗೆ ರಿಟರ್ನ್ಸ್ ವಿವರಗಳು, ಜಮಾ ಖರ್ಚಿನ ಪತ್ರಗಳು, ಇತರೆ ದಾಖಲೆ ಪತ್ರಗಳನ್ನು ಪರಿಶೀಲಿಸಲಾಗುತ್ತದೆ ಎನ್ನುತ್ತವೆ ಐಟಿ ಮೂಲಗಳು.
ಇಬ್ಬರು ಸಿನಿಮಾ ಪ್ರಮುಖರ ಐಟಿ ಪರಿಶೀಲನೆ ಸುಮಾರು 17 ರಿಂದ 19 ಗಂಟೆ ಸಮಯ ಹಿಡಿಸಿತಂತೆ. ಐಟಿ ಅಧಿಕಾರಿಗಳಿಗೆ ಈ ತಾರೆಗಳು ಸಂಪೂರ್ಣ ಸಹಕಾರ ನೀಡಿದ ಕಾರಣ ಯಾವುದೇ ರೀತಿಯ ಕಿರಿಕಿರಿ ಆಗದಂತೆ ಪರಿಶೀಲನೆ ನಡೆಯಿತು ಎಂದು ಅಧಿಕಾರಿಗಳು ವಿವರ ನೀಡಿದ್ದಾರೆ.
ತಮ್ಮದೇ ಆದಂತಹ ವಿಭಿನ್ನ ಶೈಲಿಯಲ್ಲಿ ಖಳನಟನಾಗಿ ಸೋನು ಸೂದ್ ದಕ್ಷಿಣ ಭಾರತದಲ್ಲಿ ಹೆಸರಾಗಿದ್ದಾರೆ. ಹೆಚ್ಚಾಗಿ ತೆಲುಗು ಚಿತ್ರಗಳಲ್ಲಿ ಗುರುತಿಸಿಕೊಂಡಿರುವ ಸೋನು ಸೂದ್ ಆಗಾಗ ಕನ್ನಡ ಚಿತ್ರಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್)


Click it and Unblock the Notifications











