For Quick Alerts
  ALLOW NOTIFICATIONS  
  For Daily Alerts

  ಕನ್ನಡಕ್ಕೆ ಮುಮೈತ್ ಖಾನ್ ತಂಗಿ ಜಬೈನ್ ಖಾನ್

  By Rajendra
  |

  ನೈಜ ಸ್ಥಳದ ಹೆಸರಿನಲ್ಲಿ ಪ್ರಾರಂಭವಾದ ಶಿವಾಜಿನಗರ' ಇದೀಗ ಶಿವಾಜಿನಗರ'ದಲ್ಲೇ ಚಿತ್ರೀಕರಣ ಮಾಡುವುದಕ್ಕಾಗಿ ಪೊಲೀಸು ಇಲಾಖೆಯಿಂದ ಅನುಮತಿ ಪಡೆದು ಚಿತ್ರೀಕರಣ ನಡೆಸಿದೆ. ಸಾಹಸ ಪ್ರಧಾನ ಚಿತ್ರಗಳ ಸರದಾರ ವಿಜಯ್ ಹಾಗೂ ಪರುಲ್ ಯಾದವ್ ಅವರ ಅಭಿನಯದ ಕೆಲವು ಸೂಕ್ಷ್ಮ ಸನ್ನಿವೇಶಗಳನ್ನು ನಿರ್ದೇಶಕ ಪಿ ಎನ್ ಸತ್ಯ ಅವರು ಪೂರ್ಣಗೊಳಿಸಿದ್ದಾರೆ.

  ಇದೆ ಅಲ್ಲದೆ ಜಬೈನ್ ಖಾನ್ ಅವರ ಐಟಂ ಸಾಂಗ್ ಒಂದನ್ನು ಸಹ ಮೀನರ್ವಾ ಮಿಲ್ ನಲ್ಲಿ ಹಾಕಲಾದ ಸೆಟ್ ಅಲ್ಲಿ ಚಿತ್ರೀಕರಣ ಮಾಡಲಾಗಿದೆ. ಜಬೈನ್ ಖಾನ್ ಜನಪ್ರಿಯ ಐಟಂ ಡಾನ್ಸರ್ ಮುಮೈತ್ ಖಾನ್ ಅವರ ಸಹೋದರಿ ಮುಂಬೈ ಇಂದ ಈ ಹಾಡಿಗಾಗಿ ಕರೆಸಲಾಗಿತ್ತು.

  ಅಂದು ಕಲಾಸಿಪಾಳ್ಯ' 2005 ರಲ್ಲಿ ರಾಮು ಫಿಲಂಸ್ ಅಡಿಯಲ್ಲಿ ನಿರ್ಮಾಣ ಮಾಡಿ ಜಯಭೇರಿ ಆಗಿದ್ದು ಚರಿತ್ರೆಯ ಪುಟಗಳಲ್ಲಿ ಸೇರಿದೆ. ಇಂದು ಅದೇ ಲಾಂಛನದಲ್ಲಿ 'ಶಿವಾಜಿನಗರ'. ಪಿ ಎನ್ ಸತ್ಯ ಈ ಹಿಂದೆ ನಿರ್ಮಾಪಕ ರಾಮು ಅವರ ಸಂಸ್ಥೆಯಲ್ಲಿ 'ಗೂಳಿ' ನಿರ್ದೇಶನ ಮಾಡಿದ್ದರು, ನಾಯಕ ನಟ ವಿಜಯ್ 'ಕಂಠೀರವ' ಸಿನೆಮಾದಲ್ಲಿ ಇದೆ ನಿರ್ಮಾಪಕರ ಸಂಸ್ಥೆಯಲ್ಲಿ ನಾಯಕನಾಗಿ ಅಭಿನಯಿಸಿದ್ದರು.

  ಜೆಸ್ಸಿ ಗಿಫ್ಟ್ ಅವರ ಸಂಗೀತ, ಸೇಲ್ವಂ ಅವರ ಛಾಯಾಗ್ರಹಣ, ರವಿ ಶ್ರೀವತ್ಸ ಅವರ ಸಂಭಾಷಣೆ, ವಿಜಯ್ ಚಂಡೂರ್ ಅವರ ಸಹ ನಿರ್ದೇಶನ, ರಾಮ್ ಲಕ್ಷ್ಮಣ್, ರವಿ ವರ್ಮ, ಗಣೇಶ್ ಹಾಗೂ ಫಳಣಿ ರಾಜ್ ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.

  ವಿಜಯ್ ಅವರಿಗೆ ನಾಯಕಿ ಆಗಿ ಪರೂಲ್ ಯಾದವ್ ಅವರು ಅಭಿನಯಿಸುತ್ತಿದ್ದಾರೆ. ಪ್ರದೀಪ್ ರಾವತ್, ಅಭಿಮಾನ್ ಸಿಂಗ್, ಆದಿತ್ಯ ಮೆನನ್, ಸುಮಿತ್ರಾ, ಅವಿನಾಷ್, ಸತ್ಯಜಿತ್, ಹುಲಿವಾನ್ ಗಂಗಾಧರ, ಶ್ರೀನಿವಾಸ್ ಪ್ರಭು, ಮೈಸೂರು ಮಲ್ಲೇಶ್, ಅಡಿಗ, ಅಶೋಕ್ ರಾವು ಅಲ್ಲದೆ 20 ವರ್ಷಗಳ ಬಳಿಕ ಅಂದಿನ ನಾಯಕಿ ತ್ರಿವೇಣಿ ಅವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Item Girl Mumaith Khan sister Zabyn Khan sizzles in Kannada film Shivajinagar. Duniya Vijay plays lead role in this film. Parul Yadav is the lead lady of the movie. The film is being produced by Ramu and directed by PN Satya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X