»   » ಅಜಿತ್-ಶಾಲಿನಿ ದಂಪತಿಗೆ ಗಂಡು ಮಗು

ಅಜಿತ್-ಶಾಲಿನಿ ದಂಪತಿಗೆ ಗಂಡು ಮಗು

Posted By:
Subscribe to Filmibeat Kannada

ಕಾಲಿವುಡ್ ನಟ ಅಜಿತ್ ಮನೆಗೆ ಇಂದು ಹೊಸ ಅತಿಥಿಯ ಆಗಮನವಾಗಿದೆ. ತಾರಾ ದಂಪತಿ ಅಜಿತ್ ಮತ್ತು ಶಾಲಿನಿಗೆ ಇವತ್ತು (ಸೋಮವಾರ, ಮಾರ್ಚ್ 2) ಎರಡನೇ ಮಗುವಾಗಿದೆ. ಮುಂಜಾನೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಅಜಿತ್ ಪತ್ನಿ ಶಾಲಿನಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಆಸ್ಪತ್ರೆಯಲ್ಲಿ ಅಜಿತ್ ಮತ್ತು ಶಾಲಿನಿ ಇರುವ ಫೋಟೋವನ್ನ ಅಜಿತ್ ಆಪ್ತ ವಲಯ ಟ್ವೀಟ್ ಮಾಡುವ ಮೂಲಕ ಈ ಸಿಹಿ ಸುದ್ದಿಯನ್ನ ಬಹಿರಂಗ ಪಡಿಸಿದೆ. ಕಾಡ್ಗಿಚ್ಚಿನಂತೆ ಈ ಸ್ವೀಟ್ ನ್ಯೂಸ್ ಹಬ್ಬುತ್ತಿದ್ದಂತೆ, ಟ್ವಿಟ್ಟರ್ ನಲ್ಲಿ ಶುಭಾಶಯಗಳ ಮಹಾಪೂರ ಹರಿದು ಬಂದಿದೆ.

its-a-baby-boy-for-thala-ajith-and-shalini

ನಟ ಧನುಷ್, ಜಯಂ ರವಿ, ವಿಕ್ರಂ ರವಿ ಸೇರಿದಂತೆ ತಮಿಳು ಚಿತ್ರರಂಗದ ಗಣ್ಯಾತಿಗಣ್ಯರು ಅಜಿತ್ ಮತ್ತು ಶಾಲಿನಿ ದಂಪತಿಗಳಿಗೆ ಶುಭಾಶಯ ಕೋರಿದ್ದಾರೆ. ಅಲ್ಲದೇ, ಪುಟಾಣಿಯನ್ನ 'ಕುಟ್ಟಿ ಥಳಾ' ಅಂತಲೇ ಎಲ್ಲರೂ ಕರೆಯುತ್ತಿದ್ದಾರೆ.

'ಅಮರ್ಕ್ಕಲಮ್' ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದ ಅಜಿತ್ ಮತ್ತು ಶಾಲಿನಿ, ನಿಜಜೀವದಲ್ಲೂ ಒಂದಾಗುವುದಕ್ಕೆ ನಿರ್ಧರಿಸಿ 2000ನೇ ಇಸವಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದರು. 2008 ರಲ್ಲಿ ಹೆಣ್ಣು ಮಗುವಿಗೆ ತಂದೆ-ತಾಯಿಯಾದ ಈ ಜೋಡಿಗೆ ಇದೀಗ ಪುತ್ರ ಪ್ರಾಪ್ತಿಯಾಗಿದೆ. [ಅಜಿತ್ ಸಿನಿಮಾಗೆ ಒಳ್ಳೆ ಓಪನಿಂಗ್, ಫ್ಯಾನ್ಸ್ ನಿಂದ ರಕ್ತದಾನ]

its-a-baby-boy-for-thala-ajith-and-shalini

ಒಂದ್ಕಡೆ ಅಜಿತ್ ಅಭಿನಯದ 'ಎನ್ನೈ ಅರಿಂದಾಲ್' ಸೂಪರ್ ಡ್ಯೂಪರ್ ಹಿಟ್ ಆಗಿದೆ. ಅದರ ಬೆನ್ನಲ್ಲೇ, ಮರಿ ಅಜಿತ್ ಜನನವಾಗಿರುವುದರಿಂದ ಡಬ್ಕಿ ಡಬಲ್ ಖುಷಿ. ಅಜಿತ್ ಮತ್ತು ಶಾಲಿನಿಗೆ ನಮ್ಮ ಕಡೆಯಿಂದಲೂ ಹಾರ್ದಿಕ ಶುಭಾಶಯಗಳು. (ಏಜೆನ್ಸೀಸ್)

English summary
Thala Ajith and his wife, Shalini welcomed their second child, a baby boy, today (March 2nd) in a private hospital, Chennai.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada