»   » ರಾಜಮೌಳಿ ಅಜಾನು 'ಬಾಹುಬಲಿ', ಯಾರಿವನು?

ರಾಜಮೌಳಿ ಅಜಾನು 'ಬಾಹುಬಲಿ', ಯಾರಿವನು?

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ಕರ್ನಾಟಕದ ರಾಯಚೂರು ಮೂಲದ ಎಸ್ಎಸ್ ರಾಜಮೌಳಿ ತೆಲುಗು ಚಿತ್ರರಂಗದದಲ್ಲಿ ತಮ್ಮದೇ ಆದಂತಹ ವರಸೆಗಳನ್ನು ತೋರುತ್ತಿರುವುದು ಗೊತ್ತೇ ಇದೆ. ಈಗವರು ಭಾರಿ ಬಜೆಟ್ ಚಿತ್ರ 'ಬಾಹುಬಲಿ' ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ವಿಭಿನ್ನ ಕಥಾನಕವನ್ನು ತರುತ್ತಿದ್ದಾರೆ.

ಇದೊಂದು ಐತಿಹಾಸಿಕ ಚಿತ್ರವಾಗಿದ್ದು ಪ್ರಭಾಸ್ ಹಾಗೂ ಅನುಷ್ಕಾ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಚಿತ್ರ ಆರಂಭವಾದಂದಿನಿಂದಲೂ ತೀವ್ರ ಕುತೂಹಲ ಕೆರಳಿಸಿದೆ. ಈಗ ಈ ಚಿತ್ರಕ್ಕೆ ಸಂಬಂಧಿಸಿದ ಅಜಾನುಬಾಹುವಿನ ಸ್ಥಿರ ಚಿತ್ರವೊಂದು ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿದೆ. ಯಾರಿವನು?


ಬಹುಶಃ ಚಿತ್ರದ ಹಿರೋ ಪ್ರಭಾಸ್ ಇರಬೇಕು ಎಂದು ಎಲ್ಲರೂ ಭಾವಿಸುತ್ತಿದ್ದಾರೆ. ಆದರೆ ಈ ಚಿತ್ರ ಬಾಹುಬಲಿ ಚಿತ್ರಕ್ಕೆ ಸಂಬಂಧಿಸಿದ್ದು ಅಲ್ಲವೇ ಅಲ್ಲ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ. ಇದು ಹಾಲಿವುಡ್ ಚಿತ್ರ "Hercules: The Thracian Wars" ಸೆಟ್ಸ್ ನಲ್ಲಿರುವ ಚಿತ್ರ.

ಇದನ್ನೇ ಯಾರೋ ಬಾಹುಬಲಿ ಚಿತ್ರದ್ದೆಂದು ಪ್ರಚಾರ ಮಾಡಿದ್ದರು. ಚಿತ್ರದಲ್ಲಿ ನಾಯಕನ ಮುಖ ಕಾಣದೆ ಇರುವುದು. ಅದನ್ನು ಎಲ್ಲರೂ ನಂಬುವಂತೆ ಮಾಡಿತ್ತು. ಸದ್ಯಕ್ಕೆ ಬಾಹುಬಲಿ ಚಿತ್ರದ ಚಿತ್ರೀಕರಣ ಕೇರಳದ ಮಲಬಾರ್ ಅರಣ್ಯದಲ್ಲಿ ನಡೆಯುತ್ತಿದೆ.

ಈ ಚಿತ್ರದಲ್ಲಿ ಪ್ರಭಾಸ್, ರಾಣಾ ದಗ್ಗುಬಾಟಿ ಅಣ್ಣತಮ್ಮಂದಿರಾಗಿ ಅಭಿನಯಿಸುತ್ತಿದ್ದಾರೆ. ಇಬ್ಬರೂ ಒಂದೇ ಹುಡುಗಿಯನ್ನು ಪ್ರೀತಿಸುತ್ತಾರೆ. ಬಳಿಕ ಅಣ್ಣ ತಮ್ಮನ ನದುವೆ ವಾದವಿವಾದಗಳು ತಲೆಯೆತ್ತುತ್ತವೆ. ಮುಂದೇನು ಎಂಬುದೇ ಚಿತ್ರದ ಕಥೆ. ಸುದೀಪ್, ರಮ್ಯಾಕೃಷ್ಣ, ನಾಜರ್, ಸತ್ಯರಾಜ್ ಮುಂತಾದರು ಪಾತ್ರವರ್ಗದಲ್ಲಿದ್ದಾರೆ.

English summary
From past two days an unidentified picture which is shown above is creating viral on net saying that the picture is from “Baahubali” fight scenes of Prabhas. But, here is the actual news, our team members found that the above picture is not from “Baahubali” and it is not Prabhas. This Photo is from Dwayne Johnson on Set of “Hercules: The Thracian Wars”.
Please Wait while comments are loading...