»   » ನಾಯಕಿಯರೇ 'ನಿಮಗೊಂದು ಸಲಾಂ'!

ನಾಯಕಿಯರೇ 'ನಿಮಗೊಂದು ಸಲಾಂ'!

Posted By:
Subscribe to Filmibeat Kannada

ಸಿನಿಮಾ ನಾಯಕಿಯರು ಅಂದ್ರೆ ಕೇವಲ ಚಿತ್ರಗಳಲ್ಲಿ ಅಭಿನಯಿಸುವುದು, ಹೈ ಫೈ ಜೀವನ ನಡೆಸುವುದು ಎಂಬ ಕಾಲ ಇದಲ್ಲ. ಈಗಿನ ನಾಯಕಿಯರು ಬದಲಾಗಿದ್ದಾರೆ. ಅಭಿನಯವಷ್ಟೇ ಅಲ್ಲದೇ ಬೇರೆ ಬೇರೆ ಕ್ಷೇತ್ರಗಳಲ್ಲೂ ತಮ್ಮನ್ನ ತಾವು ಗುರುತಿಸಿಕೊಳ್ಳುವುದಕ್ಕೆ ಶುರು ಮಾಡಿದ್ದಾರೆ.

ಕನ್ನಡ ಚಿತ್ರರಂಗ ಬೆಳೆಯುತ್ತಿರುವ ಹಾಗೆ ನಾಯಕಿಯರ ಮನಸ್ಥಿತಿ ಬೆಳೆಯುತ್ತಿದೆ. ಬ್ಯುಸಿ ಆಗಿರುವ ತಮ್ಮ ಲೈಫ್ ನಲ್ಲಿ ಕೊಂಚ ಬಿಡುವು ಮಾಡಿಕೊಂಡು ಕೆಲ ಹೆಣ್ಣು ಮಕ್ಕಳ ಬಾಳಿಗೆ ಬೆಳಕಾಗಲು ಮುಂದಾಗಿದ್ದಾರೆ. ನಮ್ಮ ಚಂದನವನದ ನಾಯಕಿಯರು ಮಾಡುವುದಕ್ಕೆ ಹೊರಟಿರುವ ಕೆಲಸದ ಬಗ್ಗೆ ನೀವು ಕೇಳಿದ್ರೆ, 'ನಾಯಕಿಯರೇ ನಿಮಗೊಂದು ಸಲಾಂ' ಎನ್ನುವುದು ಗ್ಯಾರೆಂಟಿ. ಮುಂದೆ ಓದಿ....

`ಹೆಣ್ ಮಕ್ಕಳೇ` ಸ್ಟ್ರಾಂಗು ಗುರು

ಕನ್ನಡ ಸಿನಿಮಾರಂಗದ ನಾಯಕಿಯರು ಯಾರಿಗಿಂತ ಕಡಿಮೆ ಇಲ್ಲ. ಅಭಿನಯದಲ್ಲಿ, ನಿರ್ಮಾಣದಲ್ಲಿ ಸೈ ಎನಿಸಿಕೊಂಡಿರವವರು ಈಗ ಸಹಾಯ ಹಸ್ತ ಚಾಚಲು ರೆಡಿಯಾಗಿದ್ದಾರೆ. ತಮ್ಮದೇ ಸ್ಟೈಲ್ ನಲ್ಲಿ ನಿರಾಶ್ರಿತ ಹೆಣ್ಣು ಮಕ್ಕಳ ಬಾಳಿಗೆ ಬೆಳಕಾಗಲಿದ್ದಾರೆ.

`ಜೆ.ಪಿ ಸರ್ವಿರ್ಸ್ ಫೌಂಡೇಷನ್` ಅಡಿಯಲ್ಲಿ ಕಾರ್ಯಕ್ರಮ

`ವ್ಯಾನಿಡಿ ಟ್ರಂಕ್ ಸೇಲ್`, ಇಂತದೊಂದು ಕಾರ್ಯಕ್ರಮಕ್ಕೆ ಇದೇ ಭಾನುವಾರ ಕನ್ನಡ ಚಿತ್ರದ ನಾಯಕಿಯರು ಚಾಲನೆ ನೀಡಲಿದ್ದಾರೆ. ಈ ಮೂಲಕ ತಮ್ಮ `ವಾರ್ಡ್ ರೋಬ್ `ನಲ್ಲಿರೋ ಬಟ್ಟೆಗಳನ್ನ ಸೇಲ್ ಮಾಡ್ತಿದ್ದಾರೆ. ಹೀರೋಯಿನ್ಸ್ ಅಂದ ಮೇಲೆ ಸಾಕಷ್ಟು ಬಟ್ಟೆಗಳನ್ನ ಒಮ್ಮೆ ಮಾತ್ರ ಬಳಸಿ ಹಾಗೇಯೇ ಇಟ್ಟಿರುತ್ತಾರೆ. ಅಂತಹ ಬಟ್ಟೆಯನ್ನ ಇಲ್ಲಿ ಸೇಲ್ ಮಾಡಲಾಗುತ್ತೆ ಅದರಿಂದ ಬಂದ ಹಣವನ್ನ `ಜೆ.ಪಿ ಸರ್ವಿಸ್ ಪೌಂಡೇಷನ್` ನಿಂದ ನಿರಾಶ್ರಿತ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಜೀವನಕ್ಕೆ ನೀಡಲಿದ್ದಾರೆ.

ಬಟ್ಟೆ ಜೊತೆಗೆ ಅಲಂಕಾರಕ ವಸ್ತುಗಳು ಲಭ್ಯ

ಭಾನುವಾರ ನಡೆಯಲಿರುವ 'ವ್ಯಾನಿಟಿ ಟ್ರಂಕ್ ಸೇಲ್'ನಲ್ಲಿ ಖುದ್ದು ನಾಯಕಿಯರೇ ತಮ್ಮ ಬಟ್ಟೆಗಳನ್ನ ಸೇಲ್ ಮಾಡ್ತಾರೆ. ಬಟ್ಟೆಯ ಜೊತೆಗೆ ಚಪ್ಪಲಿ, ಶೂ, ಸರ, ಓಲೆ ಹೀಗೆ ಹೆಣ್ಣು ಮಕ್ಕಳು ಅಲಂಕಾರಕ್ಕೆ ಬಳಸುವ ಎಲ್ಲಾ ರೀತಿಯ ವಸ್ತುಗಳು ಖರೀದಿಗೆ ಲಭ್ಯವಿದೆ.

ಯಾರೆಲ್ಲಾ ನಾಯಕಿಯರು ಭಾಗಿ

ಇದೇ ತಿಂಗಳ 12 ಭಾನುವಾರ `ಬಿಹೈವ್` ಎಂಬ ಸ್ಥಳದಲ್ಲಿ ಬೆಳ್ಳಿಗ್ಗೆ 11-30ರಿಂದ ಸಂಜೆ 5 ಗಂಟೆ ವರೆಗೂ ಈ ಸೇಲ್ ಇರುತ್ತೆ. ಹೀರೋಯಿನ್ಸ್ ನಡೆಸುತ್ತಿರುವ ಕಾರ್ಯಕ್ರಮ ಆಗಿರುವುದರಿಂದ ಹೆಣ್ಣು ಮಕ್ಕಳಿಗೆ ಮಾತ್ರ ಅವಕಾಶ ಇರುತ್ತೆ.

ಖರೀದಿಸಿ ಮೀಟ್ ಮಾಡಿ

ಶೃತಿ ಹರಿಹರನ್ ರಿಂದ ಇಂತದೊಂದು ಪ್ಲಾನ್ ಪ್ರಾರಂಭವಾಗಿ ಈಗ ಸುಮಾರು 16 ನಾಯಕಿಯರು ಹಾಗೂ ಇಬ್ಬರು` ಸ್ಟಾರ್ ಡಿಸೈನ್ಸರ್`, `ವ್ಯಾನಿಟಿ ಟ್ರಂಕ್ ಸೇಲ್ `ಗೆ ಸಾಥ್ ನೀಡಿದ್ದಾರೆ. ಸಂಯುಕ್ತ ಹೆಗ್ಡೆ, ಸಂಯುಕ್ತ ಹೊರನಾಡು, ಮೇಘನಾ ರಾಜ್, ಮೇಘನಾ ಗಾಂವ್ಕರ್, ರಾಜ್ ಶ್ರೀ ಪೊನ್ನಪ್ಪ, ನೀತು, ಸಂಗೀತಾ ಭಟ್, ಶಾನ್ವಿ, ಸೋನುಗೌಡ, ಪ್ರಜ್ನಾ, ಶ್ರದ್ದಾ ಶ್ರೀನಾಥ್, ಮಾನ್ವಿತಾ ಹರೀಶ್, ಹಿತಾ ಚಂದ್ರಶೇಖರ್, ಕಾವ್ಯ ಶೆಟ್ಟಿ, ಸಚಿನಾ ಹೆಗ್ಗಾರ್ ಹಾಗೂ ನಿಶಾರಾ ಕಿರಣ್ ಭಾಗಿಯಾಗಲಿದ್ದಾರೆ.

ಚಿತ್ರರಂಗದ ನಾಯಕಿಯರಿಂದ ಹೊಸ ಪರ್ವ

ನಟಿ ರಾಜ್ ಶ್ರೀ ಪೊನ್ನಪ್ಪರ ತಾಯಿ` ಜ್ಯೋತಿ ಪೊನ್ನಪ್ಪ` ಸಾಕಷ್ಟು ವರ್ಷಗಳಿಂದ` ಜೆ ಪಿ ಸರ್ವಿಸ್ ಫೌಂಡೇಷನ್` ನಡೆಸುತ್ತಾ ಬಂದಿದ್ದಾರೆ. ನಾಯಕಿಯರು ಭಾನುವಾರ ಸೇಲ್ ನಲ್ಲಿ ದುಡಿಯುವ ಹಣವನ್ನ ಜೆಪಿ ಮತ್ತು `ಆದ್ಯ ಫೌಂಡೇಶನ್` ಮೂಲಕ ಬಡ ಹೆಣ್ಣು ಮಕ್ಕಳ ಜೀವನಕ್ಕೆ ನೆರವಾಗಲಿದೆ.

ಚಂದನವನದಲ್ಲಿ ಒಗ್ಗಟ್ಟಿನ ಮಂತ್ರ

`ವ್ಯಾನಿಟಿ ಟ್ರಂಕ್ ಸೇಲ್` ನಲ್ಲಿ ಎಲ್ಲರೂ ಕೆಲಸಗಳನ್ನ ಹಂಚಿಕೊಂಡಿದ್ದಾರೆ. ಜೀವನ ಪೂರ್ತಿ ಹೀರೋಯಿನ್ಸ್ ಆಗಿರುವ ಇವರು ಒಂದು ದಿನ ತಾವು ನಾಯಕಿಯರು ಎನ್ನುವುದನ್ನ ಮರೆತು ಕೆಲಸ ಮಾಡಲಿದ್ದಾರೆ. ಈ ಮೂಲಕ ನಾವೆಲ್ಲ ಒಂದು ಎನ್ನುವ ಜೊತೆಗೆ ಕಷ್ಟದಲ್ಲಿರುವ ಹೆಣ್ಣು ಮಕ್ಕಳಿಗೆ ಸಣ್ಣ ಸಹಾಯ ಮಾಡಲು` ಹೀರೋಯಿನ್ಸ್` ನಿರ್ಧಾರ ಮಾಡಿದ್ದಾರೆ. ಇದಕ್ಕಾಗಿ ನಮ್ಮ ನಾಯಕಿಯರಿಗೆ ಸಲಾಂ ಹೇಳಲೇಬೇಕು.

English summary
sandalwood sixteen heroins to create group and ready to go for help orphan childrens. ಕನ್ನಡ ಸಿನಿಮಾ ನಾಯಕಿಯರು ಅನಾಥ ಮತ್ತು ನಿರಾಶ್ರೀತ ಹೆಣ್ಣು ಮಕ್ಕಳಿಗೆ ಸಹಾಯ ಮಾಡಲು ಮುಂದಾಗಿದ್ದಾರೆ
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada