»   » ಮತ್ತೊಂದು ಕನ್ನಡ ಚಿತ್ರದಲ್ಲಿ ಜಾಕಿ ಶ್ರಾಫ್ ಜಾದೂ!

ಮತ್ತೊಂದು ಕನ್ನಡ ಚಿತ್ರದಲ್ಲಿ ಜಾಕಿ ಶ್ರಾಫ್ ಜಾದೂ!

Posted By:
Subscribe to Filmibeat Kannada
ಅಣ್ಣಾಬಾಂಡ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರೇಕ್ಷಕರಿಗೆ ಸದ್ಯ ದರ್ಶನ ನೀಡುತ್ತಿರುವ ಬಾಲಿವುಡ್ ನಟ ಜಾಕಿ ಶ್ರಾಫ್, ಮತ್ತೊಂದು ಕನ್ನಡ ಚಿತ್ರದಲ್ಲಿ ನಟಿಸಲಿದ್ದಾರೆ. ಸುದ್ದಿ ಮೂಲಗಳ ಪ್ರಕಾರ ಜಾಕಿಶ್ರಾಫ್ ನಟಿಸಲಿರುವ ಚಿತ್ರದ ಹೆಸರು 'ಪ್ಯಾಟೆ ಹುಡ್ಗೀರು ಕಾಡಿಗೆ ಬಂದ್ರು'. ಈ ಹೆಸರನ್ನು ಕೇಳಿದರೆ ಇದು ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ ರಿಯಾಲಿಟಿ ಶೋ ಪ್ರಭಾವದಿಂದ ಮೂಡಿದ ಚಿತ್ರವೇನೋ ಎಂಬ ಸಂಶಯ ಮೂಡುವುದು ಸಹಜ. ಆದರೆ ಅದಕ್ಕೆ ಉತ್ತರ ಚಿತ್ರತಂಡಕ್ಕೆ ಮಾತ್ರ ಗೊತ್ತು.

ಅಣ್ಣಾಬಾಂಡ್ ಚಿತ್ರ ನೊಡಿದವರಿಗೆ ಜಾಕಿ ಶ್ರಾಫ್ ನಟನೆ ಇಷ್ಟವಾಗಿದೆ. ಆದರೆ ಅವರೇ ಕಲಿತು ಮಾತನಾಡಿರುವ ಕನ್ನಡ ಇಷ್ಟವಾಗಿಲ್ಲ. ಅವರ ಗಂಡುಗಲಿ ಧ್ವನಿ ಕೇಳಿಸುತ್ತದೆಯಾದರೂ ಅವರೇನು ಹೇಳುತ್ತಿದ್ದಾರೆ ಎನ್ನುವುದು ಅರ್ಥವಾಗದೇ ಪ್ರೇಕ್ಷಕರು ಗಲಿಬಿಲಿಗೊಳ್ಳುವಂತಾಗಿದೆ. ಆದರೂ, ಅವರಂಥ ಹಿರಿಯ ನಟನ ಅಭಿನಯಕ್ಕೆ ಮಾರುಹೋಗದಿರಲು ಸಾಧ್ಯವೇ. ಆದರೂ ಅವರಿಗೀಗ ಬಾಲಿವುಡ್ ನಲ್ಲಿ ಬೇಡಿಕೆ ಕಡಿಮೆಯಾಗಿದೆ ಎಂಬುದನ್ನು ಮರೆಯುವಂತಿಲ್ಲ.

ಬಾಲಿವುಡ್ ನಲ್ಲಿ ಆಯ್ಕೆಯ ಅವಕಾಶ ಇಲ್ಲದ್ದಕ್ಕೋ ಏನೋ ಜಾಕಿ ಶ್ರಾಫ್ ಮತ್ತೆ ಕನ್ನಡದತ್ತಲೇ ಮುಖ ಮಾಡಿದ್ದಾರೆ. ಇದೀಗ ಅವರು ಬಂದಿರುವುದು ಮುಸುರಿ ಕೃಷ್ಣಮೂರ್ತಿ ಮಗ ಜಯಸಿಂಹ ನಿರ್ದೇಶನದ ಈ ಪ್ಯಾಟೆ ಹುಡ್ಗೀರು ಕಾಡಿಗೆ ಬಂದ್ರು' ಚಿತ್ರಕ್ಕೆ. ಇದೇನೂ ಭಾರೀ ಬಜೆಟ್ ಚಿತ್ರವಲ್ಲ ಎಂಬುದು ನೆನಪಿರಲಿ. ಒಟ್ಟಿನಲ್ಲಿ ಕಾಡಿಗೆ ಬಂದ ಪ್ಯಾಟೆ ಹುಡ್ಗೀರಿಗೆ ಜಾಕಿ ದರ್ಶನವಾಗಲಿದೆ. ಮುಂದೇನಾಗುತ್ತೋ..! (ಒನ್ ಇಂಡಿಯಾ ಕನ್ನಡ)

English summary
Bollywood Actor Jackie Shroff comes again to a Kannada movie. That is Musuri Krishnamurthy son Jayasimha's 'Pyate Hudgiru Kadige Bandru movie. Anna Bond movie is the Jackie Shroff acted first movie in Kannada. 
 
Please Wait while comments are loading...