Don't Miss!
- News
ರಾಜ್ಯಕ್ಕೆ ಅಮಿತ್ ಶಾ ಆಗಮನ; ಕಿತ್ತೂರು ಕರ್ನಾಟಕದಲ್ಲಿ ಸಂಚಲನ: ಬಸವರಾಜ ಬೊಮ್ಮಾಯಿ
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- Technology
ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S23! ಫೀಚರ್ಸ್ ನಿರೀಕ್ಷೆ ಏನು?
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Finance
ಹಿಂಡನ್ಬರ್ಗ್ vs ಅದಾನಿ ನಡುವೆ ಎಲ್ಐಸಿ, ಎಸ್ಬಿಐ ಉಳಿತಾಯ ರಿಸ್ಕ್ನಲ್ಲಿದೆಯೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅನೂಪ್ ಭಂಡಾರಿ ಕೆಲಸ ಕಂಡು ದೊಡ್ಡ ಹೊಗಳಿಕೆ ಮಾತಾಡಿದ ಜಾಕ್ವೆಲಿನ್
ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ನಟಿಸುತ್ತಿರುವುದು ಖಚಿತವಾಗಿದೆ. ವಿಕ್ರಾಂತ್ ರೋಣ ಸಿನಿಮಾದ ಹಾಡೊಂದಕ್ಕೆ ಹೆಜ್ಜೆ ಹಾಕಲು ಬಂದಿದ್ದ ಶ್ರೀಲಂಕಾ ಚೆಲುವೆ ಜೊತೆಗೆ ವಿಶೇಷ ಪಾತ್ರವೊಂದರಲ್ಲಿ ನಟನೆಯೂ ಮಾಡಿದ್ದಾರೆ ಎನ್ನುವುದು ಥ್ರಿಲ್ಲಿಂಗ್ ಸಮಾಚಾರ.
ಈ ಸುದ್ದಿಯನ್ನು ನಿರ್ದೇಶಕ ಅನೂಪ್ ಭಂಡಾರಿ ಇತ್ತೀಚಿಗಷ್ಟೆ ಅಧಿಕೃತಗೊಳಿಸಿದ್ದರು. ಈಗ ಜಾಕ್ವೆಲಿನ್ ಸಹ ವಿಕ್ರಾಂತ್ ರೋಣ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಸುದೀಪ್ ಜೊತೆ ನಟಿಸಿದ್ದು ಹಾಗೂ ವಿಕ್ರಾಂತ್ ರೋಣ ಸಿನಿಮಾದ ಮೇಕಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಜಾಕ್ವೆಲಿನ್, ನಿರ್ದೇಶಕ ಅನೂಪ್ ಭಂಡಾರಿ ಬಗ್ಗೆ ಬಹಳ ದೊಡ್ಡ ಮಾತುಗಳನ್ನಾಡಿದ್ದಾರೆ. ಮುಂದೆ ಓದಿ...
ಜಾಕ್ವೆಲಿನ್
ಬಗ್ಗೆ
ಮತ್ತೊಂದು
ಸರ್ಪ್ರೈಸ್
ಸುದ್ದಿ
ನೀಡಿದ
ಅನೂಪ್
ಭಂಡಾರಿ

ದೊಡ್ಡ ಪ್ರಕರಣೆ.....
''ಇದು ದೊಡ್ಡ ಪ್ರಕಟಣೆ...ಹೌದು, ವಿಕ್ರಾಂತ್ ರೋಣ ಚಿತ್ರದಲ್ಲಿ ನಾನು ನಟಿಸುತ್ತಿದ್ದೇನೆ. ನನ್ನ ಫಸ್ಟ್ ಲುಕ್ ಪೋಸ್ಟರ್ ನೋಡಲು ಕಾಯುತ್ತಿದ್ದೇನೆ. ನಿರ್ಮಾಪಕ ಜಾಕ್ ಮಂಜು ಮತ್ತು ಶಾಲಿನಿ ಆರ್ಟ್ಸ್ ಪಿಕ್ಚರ್ ಸಂಸ್ಥೆಗೆ ಬಹಳ ಧನ್ಯವಾದ. ಸುದೀಪ್ ಜೊತೆ ನಟಿಸಿದ ಅನುಭವ ಬಹಳ ದೀರ್ಘಕಾಲ ಉಳಿಯುತ್ತದೆ'' ಎಂದು ಜಾಕ್ವೆಲಿನ್ ಹೇಳಿದ್ದಾರೆ.

ಭಾರತ ಹೆಮ್ಮೆ ಪಡುವ ನಿರ್ದೇಶಕ
ಇನ್ನು ಅನೂಪ್ ಭಂಡಾರಿ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಜಾಕ್ವೆಲಿನ್ ಫರ್ನಾಂಡೀಸ್, ''ವಿಶ್ವಮಟ್ಟದಲ್ಲಿ ಭಾರತ ಹೆಮ್ಮೆಪಡುವಂತೆ ಮಾಡಲಿದ್ದಾರೆ ಅನೂಪ್ ಭಂಡಾರಿ'' ಎಂದು ಟ್ವೀಟ್ ಮಾಡಿದ್ದಾರೆ.

ಶೂಟಿಂಗ್ ಮುಗಿಸಿದ ಹೋದ ಜಾಕ್ವೆಲಿನ್
'ವಿಕ್ರಾಂತ್ ರೋಣ' ಸಿನಿಮಾದ ಹಾಡಿನ ಚಿತ್ರೀಕರಣ ಇತ್ತೀಚಿಗಷ್ಟೆ ಮುಗಿದಿದೆ. ಶೂಟಿಂಗ್‌ಗಾಗಿ ಬೆಂಗಳೂರಿಗೆ ಬಂದಿದ್ದ ಬಿಟೌನ್ ಬ್ಯೂಟಿ ವಿಕ್ರಾಂತ್ ರೋಣ ಚಿತ್ರತಂಡದ ಜೊತೆ ಕೆಲಸ ಮಾಡಿದ್ದಕ್ಕೆ ಖುಷ್ ಆಗಿದ್ದಾರೆ. ಹಾಡಿನ ಮೇಕಿಂಗ್ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
Recommended Video

ಡಬ್ಬಿಂಗ್ ಮಾಡಲಿದ್ದಾರೆ ಜಾಕ್ವೆಲಿನ್
'ವಿಕ್ರಾಂತ್ ರೋಣ' ಸಿನಿಮಾ ಪ್ಯಾನ್ ಇಂಡಿಯಾ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ವಿಶೇಷ ಅಂದ್ರೆ ಈ ಚಿತ್ರಕ್ಕೆ ಕನ್ನಡದಲ್ಲಿ ಸ್ವತಃ ಜಾಕ್ವೆಲಿನ್ ಫರ್ನಾಂಡೀಸ್ ಡಬ್ಬಿಂಗ್ ಮಾಡಲಿದ್ದಾರಂತೆ. ಕನ್ನಡ ಕಲಿತು ವಾಯ್ಸ್ ಡಬ್ ಮಾಡಲು ನಿರ್ಧರಿಸಿದ್ದಾರೆ. ಇದು ನಿಜಕ್ಕೂ ಸ್ವಾಗತರ್ಹ ಮತ್ತು ಖುಷಿಯ ವಿಚಾರ. ಇನ್ನು ಸಿನಿಮಾ ರಿಲೀಸ್ ಬಗ್ಗೆ ಸದ್ಯಕ್ಕೆ ಸ್ಪಷ್ಟ ಮಾಹಿತಿ ಇಲ್ಲ. ಕೋಟಿಗೊಬ್ಬ 3 ಬಿಡುಗಡೆ ನಂತರ ವಿಕ್ರಾಂತ್ ರೋಣ ತೆರೆಗೆ ಬರಲಿದೆ ಎಂದು ಹೇಳಲಾಗಿದೆ.