»   » ವಿದೇಶಿ ಯುವಕನ ಕೈಹಿಡಿದ ಜಗಪತಿ ಬಾಬು ಪುತ್ರಿ

ವಿದೇಶಿ ಯುವಕನ ಕೈಹಿಡಿದ ಜಗಪತಿ ಬಾಬು ಪುತ್ರಿ

Posted By: ಅನಂತರಾಮು, ಹೈದರಾಬಾದ್
Subscribe to Filmibeat Kannada

ಕನ್ನಡದಲ್ಲಿ ಕಿಚ್ಚ ಸುದೀಪ್ ಅಭಿನಯದ ಬಚ್ಚನ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ತೆಲುಗು ನಟ ಜಗಪತಿ ಬಾಬು ಅವರ ಪುತ್ರಿ ವಿವಾಹ ಅದ್ದೂರಿಯಾಗಿ ಹೈದರಾಬಾದಿನಲ್ಲಿ ನೆರವೇರಿತು. ಟಾಲಿವುಡ್ ನ ಖ್ಯಾತ ನಟ ನಟಿಯರು, ರಾಜಕೀಯ ಧುರೀಣರು ಆಗಮಿಸಿದ ನೂತನ ವಧುವರರಿಗೆ ಶುಭ ಕೋರಿದರು.

ಜಗಪತಿ ಬಾಬು ಅವರ ಪುತ್ರಿ ಮೇಘನಾ ಯುಎಸ್ ನಲ್ಲಿ ಓದುತ್ತಿರಬೇಕಾದರೆ ಅಲ್ಲೇ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿದೆ. ವಿದೇಶಿ ಹುಡುಗ ಚಾಡ್ ಬೋವೆನ್ ಜೊತೆಗಿನ ಪ್ರೇಮ ಇದೀಗ ಮದುವೆಗೆ ನಾಂದಿಹಾಡಿದೆ. ವಿದೇಶಿ ಹುಡುಗ ಜಗಪತಿ ಬಾಬು ಅವರಿಗೂ ಇಷ್ಟವಾಗಿದ್ದಾನೆ.

ವರ ವಿದೇಶಿ ಆದರೂ ಪಕ್ಕಾ ಭಾರತೀಯ ಸಂಪ್ರದಾಯದಂತೆ ಮದುವೆ ನಡೆದಿರುವುದು ವಿಶೇಷ. ವರನ ತಂದೆತಾಯಿ ಸಹ ಭಾರತೀಯ ಸಾಂಪ್ರದಾಯಿಕ ಉಡುಪಿನಲ್ಲಿ ಕಂಗೊಳಿಸುತ್ತಿದ್ದರು. ಬನ್ನಿ ಮದುವೆ ಚಿತ್ರಗಳ ಮೇಲೊಮ್ಮೆ ಕಣ್ಣಾಡಿಸೋಣ.

ನೂತನ ಜೋಡಿಗೆ ತಾರೆಗಳ ಶುಭಹಾರೈಕೆ

ವರ ಬೋವೆನ್ ಅವರು ಯುಎಸ್ ನ ಐಯೋವಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಾರೆಗಳಾದ ವೆಂಕಟೇಶ್, ಅರ್ಜುನ್ ಸರ್ಜಾ, ರಮ್ಯಾ ಕೃಷ್ಣ, ಮುರಳಿ ಮೋಹನ್ ಸೇರಿದಂತೆ ಹಲವರು ಆಗಮಿಸಿದ ಶುಭಕೋರಿದರು.

ಯುಎಸ್ ನಲ್ಲಿ ಪ್ರೇಮಾಂಕುರ

ಮೇಘನಾ ಅವರು ಯುಎಸ್ ನಲ್ಲಿ ಇಂಟೀರಿಯರ್ ಡಿಸೈನಿಂಗ್ ಕೋರ್ಸ್ ಮಾಡುತ್ತಿದ್ದರು. ಆಗಲೇ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿದೆ. ಈ 'ಭಲೆ ಜೋಡಿ'ಯನ್ನು ನೋಡಿದರೆ ಜಗಪತಿ ಬಾಬು ಹೇಗೆ ಒಪ್ಪಿದರು ಎಂಬ ಅನುಮಾನ ಮೂಡುವುದು ಸಹಜ.

ಸೆಲೆಬ್ರಿಟಿ ಮಕ್ಕಳು ಎಂದರೆ ಕೇಳಬೇಕೆ

ಈಗಿನ ಕಾಲದ ಮಕ್ಕಳು ಕೇಳಬೇಕೆ, ಮದುವೆ ವಿಚಾರದಲ್ಲಿ ತಂದೆತಾಯಿ ಮಾತನ್ನೂ ಕೇಳುವುದಿಲ್ಲ. ಇನ್ನು ಸೆಲೆಬ್ರಿಟಿ ಮಕ್ಕಳು ಎಂದರೆ ಕೇಳಬೇಕೆ.

ಈಗ ಖಳನಟನಾಗಿ ಮಿಂಚುತ್ತಿರುವ ಜಗಪತಿ ಬಾಬು

ಆರಂಭದಲ್ಲಿ ನಾಯಕ ನಟನಾಗಿ ಗುರುತಿಸಿಕೊಂಡಿದ್ದ ಜಗಪತಿಬಾಬು ಆ ಬಳಿಕ ಪೋಷಕನಟನಾಗಿ ಗಮನಸೆಳೆದವರು. ಹೀರೋ ಪಾತ್ರಗಳಲ್ಲಿ ಮಿಂಚಿದ್ದಕ್ಕಿಂತ ಹೆಚ್ಚಾಗಿ ಈಗ ಖಳನಟನಾಗಿ ಎಲ್ಲರ ಗಮನಸೆಳೆಯುತ್ತಿದ್ದಾರೆ.

ಪ್ರೇಮವಿವಾಹಕ್ಕೆ ಜಗಪತಿಬಾಬು ಒಪ್ಪಿರುವುದೇ ವಿಶೇಷ

ರಜನಿಕಾಂತ್ ಅವರ 'ಲಿಂಗಾ' ಚಿತ್ರದಲ್ಲೂ ಖಳನಟನಾಗಿ ಜಗಪತಿಬಾಬು ಮಿಂಚಿದ್ದಾರೆ. ಈಗವರು ಟಾಲಿವುಡ್, ಕೋಲಿವುಡ್ ನಲ್ಲಿ ಬಲು ಬೇಡಿಕೆಯ ಖಳನಟ. ಒಟ್ಟಾರೆಯಾಗಿ ತಮ್ಮ ಪುತ್ರಿ ಪ್ರೇಮವಿವಾಹಕ್ಕೆ ಜಗಪತಿಬಾಬು ಒಪ್ಪಿರುವುದೇ ವಿಶೇಷ.

ಅರುಂಧತಿ ನಕ್ಷತ್ರ ತೋರಿಸಿದ ಅಮೆರಿಕದ ವರ

ಅರುಂಧತಿ ನಕ್ಷತ್ರ ತೋರಿಸಿ ಅಮೆರಿಕಾದ ವರ ಮಹಾಶಯ ಸಂಭ್ರಮ ಪಟ್ಟರು. ಬಳಿಕ ತಮ್ಮ ತಂದೆತಾಯಿ ಜೊತೆಗೆ ಎಲ್ಲರಿಗೂ ಪೋಸು ಕೊಟ್ಟರು.

ಭಾರತೀಯ ಆಚಾರವಿಚಾರಕ್ಕೆ ತಲೆಬಾಗಿದ

ಇತ್ತೀಚೆಗೆ ನಮ್ಮ ಸಂಪ್ರದಾಯ, ಆಚಾರವಿಚಾರಗಳ ಬಗ್ಗೆ ನಮ್ಮಲ್ಲೇ ಅಸಡ್ಡೆ ಇದೆ. ಅಂತಹದ್ದರಲ್ಲಿ ವಿದೇಶಿ ಯುವಕನೊಬ್ಬ ಇಲ್ಲಿನ ಆಚಾರವಿಚಾರ ಸಂಪ್ರದಾಯಕ್ಕೆ ತಲೆಬಾಗಿರುವುದು ವಿಶೇಷ.

ಹೊಸ ಬಾಳಿನ ಹೊಸಿಲಲಿ ನಿಂತಿರುವ ಜೋಡಿಗೆ ಶುಭವಾಗಲಿ

ಸಪ್ತಪದಿ ಇದು ಸಪ್ತಪದಿ ಈ ಏಳು ಹೆಜ್ಜೆಗಳ ಸಂಬಂಧ ನಮ ಏಳು ಜನ್ಮಗಳ ಅನುಬಂಧ... ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ ಹೊಸ ಆಸೆಯ ಕಡಲಿ ತೇಲುತಿಹ ನವ ಜೋಡಿಗೆ ಸುಖವಾಗಲಿ.

English summary
Actor Jagapathi Babu's eldest daughter Meghana entered into wedlock on March 8. The wedding ceremony was held at Hotel Westin in Hyderabad and it was a complete family affair with little glitz and glam. Meghana , who did her masters from Lowa University, USA, had found her love, across the oceans. She got married to an NRI, Chad Bowen, whom she met during her stay in USA.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada