»   » ಪಾಕ್ ಹೊಗಳಿದ ರಮ್ಯಾಗೆ ಛೀಮಾರಿ ಹಾಕಿದ ನಟ ಜಗ್ಗೇಶ್

ಪಾಕ್ ಹೊಗಳಿದ ರಮ್ಯಾಗೆ ಛೀಮಾರಿ ಹಾಕಿದ ನಟ ಜಗ್ಗೇಶ್

Posted By:
Subscribe to Filmibeat Kannada

ನಟಿ, ಮಾಜಿ ಸಂಸದೆ ರಮ್ಯಾ ಅದ್ಯಾವಾಗ 'ನೀರ್ ದೋಸೆ' ಚಿತ್ರಕ್ಕೆ ಅರ್ಧಕ್ಕೆ ಕೈ ಕೊಟ್ರೋ, ಆಗ್ಲೇ ರಮ್ಯಾ ವಿರುದ್ಧ ನಟ ಜಗ್ಗೇಶ್ ಕಿಡಿ ಕಾರಿದ್ರು. ಲಕ್ಷಾಂತರ ರೂಪಾಯಿ ಸುರಿದ ನಿರ್ಮಾಪಕರ ಪರ ದನಿ ಎತ್ತಿದ ಜಗ್ಗೇಶ್ ಟ್ವಿಟ್ಟರ್ ನಲ್ಲಿ ರಮ್ಯಾ ವಿರುದ್ಧ ಮಾತಿನ ಸಮರ ನಡೆಸಿದ್ರು.

ಈಗ ಅದೇ ರಮ್ಯಾ ವಿರುದ್ಧ ನಟ ಜಗ್ಗೇಶ್ ಸಿಡಿಮಿಡಿಗೊಂಡಿದ್ದಾರೆ. ಕಾರಣ ಇಂಡಿಯಾ ಹಾಗೂ ಪಾಕಿಸ್ತಾನ!

ಪಾಕಿಸ್ತಾನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ರಮ್ಯಾ ವಿರುದ್ಧ ಮಾಧ್ಯಮಗಳ ಮುಂದೆ ಜಗ್ಗೇಶ್ ಕೆಂಡ ಕಾರಿದ್ದಾರೆ. ಸಾಲದಕ್ಕೆ ತಮ್ಮ ಟ್ವೀಟ್ ಗಳ ಮೂಲಕ ಅಣಕವಾಡಿದ್ದಾರೆ. [ವಿಶ್ವದ ಮಾಹಿತಿ ಅಪಾರ, ರಮ್ಯಾಗೆ ನೋಬಲ್ ಪ್ರಶಸ್ತಿ ಸಿಗಲಿ!!]

ರಮ್ಯಾ ಮತ್ತು ಜಗ್ಗೇಶ್ ನಡುವಿನ ಹೊಸ ವಿವಾದದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ, ಓದಿರಿ....

ನಟಿ ರಮ್ಯಾ ನೀಡಿದ್ದ ಹೇಳಿಕೆ ಏನು?

ಮಂಡ್ಯ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯಿಂದ ನಿನ್ನೆ (ಆಗಸ್ಟ್ 20) ನಡೆದ 'ಬೃಹತ್ ಮಹಿಳಾ ಸಮಾವೇಶ'ದಲ್ಲಿ ಭಾಗಿಯಾದ ರಮ್ಯಾ, ''ರಕ್ಷಣಾ ಸಚಿವರು ಹೇಳಿದಂತೆ ಪಾಕಿಸ್ತಾನವಿಲ್ಲ. ಅಲ್ಲಿಯ ಜನ ನಮ್ಮ ರೀತಿನೇ ಇದ್ದಾರೆ. ಸಾರ್ಕ್ ಕಾನ್ಫರೆನ್ಸ್ ನಲ್ಲಿ ನನ್ನನ್ನು ಚೆನ್ನಾಗಿಯೇ ನೋಡಿಕೊಂಡರು. ಅನ್ಯೋನ್ಯವಾಗಿಯೇ ಮಾತನಾಡಿಸಿದರು'' ಅಂತ ಪಾಕಿಸ್ತಾನ ರಾಷ್ಟ್ರವನ್ನ ಹೊಗಳಿದರು. [ರಕ್ಷಣಾ ಸಚಿವರು ಹೇಳಿದಂತೆ ಪಾಕಿಸ್ತಾನವಿಲ್ಲ: ರಮ್ಯಾ]

ಕೋಪಗೊಂಡ ನಟ ಜಗ್ಗೇಶ್

ರಮ್ಯಾ ಪಾಕಿಸ್ತಾನವನ್ನ ಹೊಗಳಿದ್ದಕ್ಕೆ ನಟ ಜಗ್ಗೇಶ್ ಕೋಪಗೊಂಡಿದ್ದಾರೆ. ಇಂದು ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ಎಬಿವಿಪಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿದ ಜಗ್ಗೇಶ್ ರಮ್ಯಾ ವಿರುದ್ಧ ಕಿಡಿ ಕಾರಿದ್ದಾರೆ. [ಕಗ್ಗಂಟಾಗಿರುವ ರಮ್ಯಾ 'ನೀರ್ ದೋಸೆ' ವಿವಾದ]

ಭಾರತೀಯನಾಗಿ ಮಾತನಾಡುತ್ತಿದ್ದೇನೆ!

''ಯಾರೂ ಕೂಡ ಶತ್ರು ರಾಷ್ಟ್ರವನ್ನ ಹೊಗಳುವಂತಹ ಕೆಲಸ ಮಾಡಬಾರದು. ಸಿನಿಮಾ ಅನ್ನೋದು ಪಕ್ಕಕ್ಕಿಡಿ, ಭಾರತೀಯನಾಗಿ ನಾನು ಮಾತನಾಡುತ್ತಿದ್ದೇನೆ, ಮಿತ್ರರಾಗಿ ಬಂದರೆ ನಾವು ಮಿತ್ರರು. ಶತ್ರುಗಳಾಗಿ ಬಂದರೆ ನಾವು ಶತ್ರುಗಳೇ'' - ಜಗ್ಗೇಶ್

ನಟ ಜಗ್ಗೇಶ್ ಹೇಳಿಕೆ

"ಅವರ ಅನುಭವ ತುಂಬಾ ಅಗಾಧವಾಗಿರಬೇಕು, ನಾನು ಇನ್ನೇನು ಹೇಳೋಕ್ಕಾಗೋದಿಲ್ಲ. ಅವರು ಈ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ನಾಯಕರಿರಬೇಕು. ಅವರು ತುಂಬಾ ಬೆಳೆದಿರಬೇಕು. ಹಾಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೋಬೆಲ್ ಪ್ರಶಸ್ತಿಗೂ ಪ್ರಯತ್ನಿಸುತ್ತಿರಬೇಕೇನೋ. ಅನ್ಸುತ್ತೆ. ಹಾಗಾಗಿ ಆ ರೀತಿ ಮಾತಾಡ್ತಿರಬೇಕು'' - ಜಗ್ಗೇಶ್

ರಮ್ಯಾ ವಿರುದ್ಧ ಜಗ್ಗೇಶ್ ಏನಂದ್ರು?

''ಎಂಟಾಣೆ ಅಕ್ಷರ ಕಲಿಯದೇ, ಅನುಭವ ಇಲ್ಲದೆ ಇದ್ದವರು ಸಹ ಪಾಕಿಸ್ತಾನವನ್ನು ಹೊಗಳುತ್ತಾರೆ. ಅವರಿಗೆ ಇನ್ನಷ್ಟು ಶಾಂತಿ ಅವಾರ್ಡ್, ನೊಬೆಲ್ ಸಿಗಲಿ. ಬಿಲ್ ಕ್ಲಿಂಟನ್ ಪಕ್ಕದಲ್ಲಿ ನಿಂತು ಫೋಟೋ ತೆಗೆದುಕೊಳ್ಳಲಿ.'' - ಜಗ್ಗೇಶ್

ಮತ ಬ್ಯಾಂಕ್ ಗಾಗಿ?

''ಶತ್ರು ದೇಶವನ್ನು ರಮ್ಯಾ ಹೊಗಳಿದ್ದು ನಮ್ಮೊಳಗೆ ಬೆಂಕಿ ಉರಿಯುವಂತೆ ಮಾಡಿದೆ. ಕೇವಲ ಮತ ಬ್ಯಾಂಕ್ ಗಾಗಿ ದೇಶ ವಿರೋಧಿ ಹೇಳಿಕೆ ನೀಡ್ಬೇಡಿ'' - ಜಗ್ಗೇಶ್

ಸೊಳ್ಳೆ-ತಿಗಣೆಗಳಿದ್ದಂತೆ

''ದೇಶ ವಿರೋಧಿ ಘೋಷಣೆ ಕೂಗುವವರ ಅಗತ್ಯ ಭಾರತಕ್ಕೆ ಇಲ್ಲ. ಇವರೆಲ್ಲ ಸೊಳ್ಳೆ, ತಿಗಣೆಗಳಿದ್ದಂತೆ. ಸರಿಯಾದ ಔಷಧಿ ಬೀಳಬೇಕು ಅಷ್ಟೇ'' - ಜಗ್ಗೇಶ್

ಜಗ್ಗೇಶ್ ಮಾಡಿರುವ ಟ್ವೀಟ್ ಗಳನ್ನ ನೋಡಿ

ನಟಿ ರಮ್ಯಾ ವಿರುದ್ಧ ಜಗ್ಗೇಶ್ ಮಾಡಿರುವ ಟ್ವೀಟ್ ನೋಡಿ...

ಸ್ವಾಭಿಮಾನಿ ಹೆಣ್ಣು ಮಕ್ಕಳು ಬೇಕು

''ಭಾರತಾಂಬೆಗೆ ಪಿ.ವಿ.ಸಿಂಧು ಅಂತಹ ಹೆಣ್ಣು ಮಕ್ಕಳು ಬೇಕು. ನಮ್ಮನ್ನ ತಿಂದು ಬೆಳೆದು ಶತ್ರುಗಳ ಹೊಗಳೋ ಹೆಣ್ಣು ಮಕ್ಕಳಲ್ಲಾ. ಸ್ವಾಭಿಮಾನಿ ಭಾರತೀಯರಾಗಿ!!'' ಅಂತ ಮತ್ತೊಂದು ಟ್ವೀಟ್ ಮಾಡಿದ್ದಾರೆ ಜಗ್ಗೇಶ್

English summary
Kannada Actor, Politician Jaggesh is annoyed with Kannada Actress, EX MP, Congress Politician Ramya's statement on Pakistan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada