»   » ನವರಸ ನಾಯಕ ಜಗ್ಗೇಶ್ ಮೊಮ್ಮಗು ನೋಡಿದ್ದೀರಾ?

ನವರಸ ನಾಯಕ ಜಗ್ಗೇಶ್ ಮೊಮ್ಮಗು ನೋಡಿದ್ದೀರಾ?

Posted By:
Subscribe to Filmibeat Kannada

ನವರಸ ನಾಯಕ ಜಗ್ಗೇಶ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ನಾಯಕ ನಟ ಜಗ್ಗೇಶ್ ತಾತನಾಗಿದ್ದಾರೆ. ಜಗ್ಗೇಶ್ ಪುತ್ರ ಗುರುರಾಜ್ ಗೆ ಗಂಡು ಮಗುವಾಗಿದೆ.

ಗುರುರಾಜ್ ಮತ್ತು ಹಾಲೆಂಡ್ ಮೂಲದ ಪತ್ನಿ ಕ್ಯಾಟಿಪೈಲಿ ಅವರಿಗೆ ಮೇ 31ನೇ ತಾರೀಖು ಗಂಡು ಮಗು ಜನನವಾಗಿದೆ. ಕಳೆದ ವರ್ಷ ಗುರುರಾಜ್ ಮತ್ತು ಕ್ಯಾಟಿಪೈಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.

ಥೈಲ್ಯಾಂಡ್ ನಲ್ಲಿ ಕ್ರೀಡೆಗೆ ಸಂಬಂಧಿಸಿದ ಶಿಬಿರದಲ್ಲಿ ಪಾಲ್ಗೊಳ್ಳಲು ಹೋದಾಗ, ಗುರುರಾಜ್ ಅವರಿಗೆ ಕ್ಯಾಟಿಪೈಲ್ ಪರಿಚಯವಾಗಿತ್ತು. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಗೆ ತಿರುಗಿದ್ಮೇಲೆ ಹಸೆಮಣೆ ಏರುವುದಕ್ಕೆ ಈ ಜೋಡಿ ನಿರ್ಧರಿಸಿದ್ದರು. ಪುತ್ರನ ಪ್ರೇಮ್ ಕಹಾನಿ ಕೇಳಿ ಜಗ್ಗೇಶ್ ಹಿಂದುಮುಂದು ನೋಡದೆ ಮದುವೆ ಮಾಡಿದರು.

Jaggesh becomes Grand Father for a Baby boy

ಈಗ ಇಬ್ಬರ ಪ್ರೇಮಕ್ಕೆ ಗಂಡು ಮಗು ಪ್ರಾಪ್ತಿಯಾಗಿದೆ. ಈ ಬಗ್ಗೆ ಖುಷಿಯಿಂದ, ''ನಾನು ತಾತನ ತರಹ ಕಾಣುತ್ತೀನಾ? ಆದರೂ ಆಗಿದ್ದೇನೆ. ಗುರುರಾಯರ ಕೃಪೆಯಿಂದ ಗಂಡು ಮಗುವಿಗೆ ನಾನು ತಾತನಾಗಿದ್ದೇನೆ'' ಅಂತ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. [ಲಂಡನ್ ನಲ್ಲಿ ಜಗ್ಗೇಶ್ ಪುತ್ರನ ವಿವಾಹ ಮಹೋತ್ಸವ]

ಇದರೊಂದಿಗೆ ಆಸ್ಪತ್ರೆಯಲ್ಲಿ ತೆಗೆದ ಸೆಲ್ಫಿಯೊಂದಿಗೆ ಇಂದು ಜಗ್ಗೇಶ್ ಮಾಡಿರುವ ಟ್ವೀಟ್ ಇಲ್ಲಿದೆ.

ಹೊಸ ಅತಿಥಿ ಬಂದ ಖುಷಿಯಲ್ಲಿರುವ ಜಗ್ಗೇಶ್ ಮತ್ತು ಕುಟುಂಬಕ್ಕೆ ನಮ್ಮ ಕಡೆಯಿಂದಲೂ ಹಾರ್ದಿಕ ಶುಭಾಶಯಗಳು.

English summary
Kannada Actor Jaggesh has become Grand Father of a baby boy. Jaggesh himself shared this news in Twitter.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada