»   » 'ಬಿಲ್ಡಪ್' ರಾಣಿ ಸಂಜನಾಗೆ ಮಾತಲ್ಲೇ ಪೆಟ್ಟು ಕೊಟ್ಟ ನಟ ಜಗ್ಗೇಶ್.!

'ಬಿಲ್ಡಪ್' ರಾಣಿ ಸಂಜನಾಗೆ ಮಾತಲ್ಲೇ ಪೆಟ್ಟು ಕೊಟ್ಟ ನಟ ಜಗ್ಗೇಶ್.!

Posted By:
Subscribe to Filmibeat Kannada

'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ 'ಬಿಲ್ಡಪ್' ಎಂದು ಬಿರುದು ಕೊಟ್ಟಿರುವ 'ಮೇಕಪ್ ಕ್ವೀನ್' ಸಂಜನಾ ವಿರುದ್ಧ 'ಡಿ' ಬಾಯ್ಸ್ ಸಿಡಿದೆದ್ದಿದ್ದಾರೆ.

ದರ್ಶನ್ ಬಗ್ಗೆ ಸಂಜನಾ ಕೊಟ್ಟ ಒಂದೇ ಒಂದು ಹೇಳಿಕೆಯಿಂದ ಇಂದು ಸೋಷಿಯಲ್ ಮೀಡಿಯಾದಲ್ಲಿ ಮಹಾ ಯುದ್ಧ ನಡೆಯುತ್ತಿದೆ. ಆದರೂ, ಸಂಜನಾ ಕ್ಷಮೆ ಕೇಳುವ ಹಾಗೆ ಕಾಣುತ್ತಿಲ್ಲ.

Jaggesh comments on 'Bigg Boss' Sanjana-Darshan controversy

'ಬಾತ್ ರೂಂ' ಸಂಜನಾ ವಿರುದ್ಧ ದಂಗೆ ಎದ್ದ ದರ್ಶನ್ ಫ್ಯಾನ್ಸ್.!

''ಇದು ನನ್ನ ವೈಯುಕ್ತಿಕ ಅಭಿಪ್ರಾಯ. ದರ್ಶನ್ ರವರ ಚಿತ್ರಗಳಲ್ಲಿ ತುಂಬಾ ಬಿಲ್ಡಪ್ ಇರುತ್ತದೆ. ಅದಕ್ಕೆ ಹೇಳ್ದೆ. ಅದು ನನ್ನ ಅಭಿಪ್ರಾಯ. ಅದನ್ನ ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ'' ಅಂತ ಸಂಜನಾ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ದರ್ಶನ್ ಗೆ 'ಬಿಲ್ಡಪ್' ಅಂತ ಕರೆದು ದೊಡ್ಡ ಎಡವಟ್ಟು ಮಾಡಿಕೊಂಡ ಸಂಜನಾ.!

ಇಡೀ ವಿವಾದವನ್ನ ಗಮನಿಸಿರುವ ನವರಸ ನಾಯಕ ಜಗ್ಗೇಶ್, ಟ್ವಿಟ್ಟರ್ ನಲ್ಲಿ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.

ಯಶ್-ರಶ್ಮಿಕಾ ವಿವಾದದ ಬಗ್ಗೆ ನಟ ಜಗ್ಗೇಶ್ ಮಾಡಿದ ಕಾಮೆಂಟ್ ಇದು.!

''ದೌರ್ಭಾಗ್ಯ... ನಕ್ಕು ಸುಮ್ಮನಾಗಿ... ಅಳಿಲು ಆನೆ ಬಗ್ಗೆ ಹರಿಕಥೆ ಮಾಡಿದಂಗೆ'' ಅಂತ ಟ್ವೀಟ್ ಮಾಡುವ ಮೂಲಕ ಸಂಜನಾಗೆ ತಮ್ಮದೇ ಶೈಲಿಯಲ್ಲಿ ಬಿಸಿ ಮುಟ್ಟಿಸಿದ್ದಾರೆ ನಟ ಜಗ್ಗೇಶ್.

''ನನಗೆ 54 ವರ್ಷ. 18ನೇ ವರ್ಷದಿಂದ ದುಡಿಮೆ ಶುರು ಮಾಡಿದೆ. ಇಷ್ಟು ವರ್ಷ ಜೀವನ ಪಾಠ ಕಲಿಸಿದೆ. ಹಗಲುಗನಸು ಕಾಣೋಲ್ಲ. ಕಾಯಕದಲ್ಲಿ ಕೈಲಾಸ ಕಾಣುವೆ. ಎಲ್ಲರನ್ನ ಗೌರವಿಸುವೆ'' ಎಂದೂ ಕೂಡ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಸದ್ಯ ಫೇಸ್ ಬುಕ್ ನಿಂದ ಮಾಯ ಆಗಿರುವ ಸಂಜನಾ, ದರ್ಶನ್ ಫ್ಯಾನ್ಸ್ ಒತ್ತಾಯಕ್ಕೆ ಮಣಿದು ಕ್ಷಮೆ ಕೇಳುತ್ತಾರಾ.? ನೋಡೋಣ...

English summary
Kannada Actor Jaggesh has taken his twitter account to comment on 'Bigg Boss' Sanjana-Darshan controversy

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada