twitter
    For Quick Alerts
    ALLOW NOTIFICATIONS  
    For Daily Alerts

    'ಹಣಕ್ಕಾಗಿ ಸಾಯಬೇಡಿ, ನೊಂದವರ ಪೀಡಿಸಬೇಡಿ, ತಿನ್ನಲು ಅನ್ನಸಿಗದೆ ಸಾಯುತ್ತೀರಿ'

    |

    ಕೊರೊನಾ ವೈರಸ್‌ನಿಂದ ನೂರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಜನರು ಜೀವಕ್ಕಾಗಿ ಹೋರಾಡುತ್ತಿರುವ ಈ ಸಮಯದಲ್ಲಿ ದುಡ್ಡು ಮಾಡಿಕೊಳ್ಳುವ ಪ್ರವೃತ್ತಿಯನ್ನು ಅನೇಕರು ಮುಂದುವರಿಸಿದ್ದಾರೆ. ಆಸ್ಪತ್ರೆ, ಆಂಬುಲೆನ್ಸ್, ಆಕ್ಸಿಜನ್, ಬೆಡ್, ಸ್ಮಶಾನ ಕಾರ್ಯಕರ್ತರು ಮಾನವೀಯತೆ ಮರೆತು ದುಡ್ಡಿನ ಆಸೆಗೆ ಬಿದ್ದಿದ್ದಾರೆ.

    Recommended Video

    ಮನುಷ್ಯರ ಮೇಲೆ ನಂಬಿಕೆ ಸತ್ತುಹೋಗಿದೆ ಅಂದ್ರು ನಟ ಜಗ್ಗೇಶ್ | Filmibeat Kannada

    ಗಂಟೆಗೊಂದು ಘಟನೆ, ದಿನಕ್ಕೊಂದು ಹೃದಯವಿದ್ರಾವಕ ಸನ್ನಿವೇಶಗಳು ವರದಿಯಾಗುತ್ತಲೇ ಇದೆ. ಇಂತಹ ಘಟನೆಗಳ ಬಗ್ಗೆ ತೀರಾ ಬೇಸರ ವ್ಯಕ್ತಪಡಿಸಿರುವ ಹಿರಿಯ ನಟ ಜಗ್ಗೇಶ್ 'ಹಣಕ್ಕಾಗಿ ಸಾಯಬೇಡಿ, ನೊಂದವರ ಪೀಡಿಸಬೇಡಿ, ತಿನ್ನಲು ಅನ್ನಸಿಗದೆ ಸಾಯುತ್ತೀರಿ' ಎಂದು ಕುಟುಕಿದ್ದಾರೆ. ಮುಂದೆ ಓದಿ...

    ಸತ್ತರೆ ಹಣ ಬರೋಲ್ಲಾ ಪಾಪ ಪುಣ್ಯ ಮಾತ್ರ

    ಸತ್ತರೆ ಹಣ ಬರೋಲ್ಲಾ ಪಾಪ ಪುಣ್ಯ ಮಾತ್ರ

    ಕೋವಿಡ್ ಸಂತ್ರಸ್ತರು ನೊಂದು ಟಿವಿಯಲಿ ಮಾತಾಡಿದ್ದು ನೋಡಿ ಸಂಕಟವಾಯ್ತು. ಆಸ್ಪತ್ರೆ, ಆಂಬುಲೆನ್ಸ್, ಔಷಧಿ ಅಂಗಡಿ, ಸ್ಮಶಾನ ಕಾರ್ಯಕರ್ತರು ಹಣಕ್ಕಾಗಿ ಸಾಯಬೇಡಿ, ನೊಂದವರ ಪೀಡಿಸಬೇಡಿ, ತಿನ್ನಲು ಅನ್ನಸಿಗದೆ ಸಾಯುತ್ತೀರಿ. ನೊಂದವರಿಗೆ ಭುಜ ಕೊಟ್ಟು ಸಹಾಯಮಾಡಿ. ಸತ್ತರೆ ಹಣ ಬರೋಲ್ಲಾ ಪಾಪ ಪುಣ್ಯ ಮಾತ್ರ ನಮ್ಮಹಿಂದೆ ಬರೋದು. ದೇವನೊಬ್ಬನಿರುವ ಎಲ್ಲ ನೋಡುತಿರುವ'' ಎಂದು ಟ್ವಿಟ್ಟರ್ ಮೂಲಕ ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

    ಸಿನಿಮಾ ಹಿಟ್ ಆದರೂ ಸಂಬಳ ಕೊಡದೆ ಜಗ್ಗೇಶ್‌ಗೆ ನಿರ್ಮಾಪಕರ ಮೋಸಸಿನಿಮಾ ಹಿಟ್ ಆದರೂ ಸಂಬಳ ಕೊಡದೆ ಜಗ್ಗೇಶ್‌ಗೆ ನಿರ್ಮಾಪಕರ ಮೋಸ

    ಮನುಷ್ಯರಿಗೆ ಮನುಷ್ಯರ ಮೇಲೆ ನಂಬಿಕೆ ಸತ್ತು ಹೋಗಿದೆ

    ಮನುಷ್ಯರಿಗೆ ಮನುಷ್ಯರ ಮೇಲೆ ನಂಬಿಕೆ ಸತ್ತು ಹೋಗಿದೆ

    ''ಇಂಥ ಸಮಯದಲ್ಲೆ ಇಂಥ ಕ್ರೂರಿಗಳು active ಆಗೋದು. ಇಂಥ ಕೀಳು ಜನರಿಂದ ಮನುಷ್ಯರಿಗೆ ಮನುಷ್ಯರ ಮೇಲೆ ನಂಬಿಕೆ ಸತ್ತು ಹೋಗಿದೆ, ನಾನು ಇಷ್ಟು ನೊಂದದ್ದು ಇತ್ತೀಚಿನ ಈ ಕ್ರೂರ ವರ್ತನೆಯಿಂದ. ನನಗೆ ಅರಿಯದಂತೆ ಕೆಟ್ಟ ಬೈಗುಳ ಕೋಪ ಅನಾವಶ್ಯಕ ಬರುತ್ತಿದೆ. ತಪ್ಪು ಎಂದು ನನ್ನ ನಾನೇ ಸರಿಪಡಿಸಿಕೊಳ್ಳುತ್ತಿರುವೆ. ಇಂಥ ದಿನಗಳ ಎಣಿಸಲಿಲ್ಲಾ ನಾನು horrible'' ಎಂದು ಜಗ್ಗೇಶ್ ಆಕ್ರೋಶ ಹೊರಹಾಕಿದ್ದಾರೆ.

    ಸಹಾಯ ಮಾಡಲು ಆಗದಿದ್ದರೆ ಮೌನವಾಗಿ ಇದ್ದುಬಿಡಿ

    ಸಹಾಯ ಮಾಡಲು ಆಗದಿದ್ದರೆ ಮೌನವಾಗಿ ಇದ್ದುಬಿಡಿ

    ''ನಾನು ಕಾಯವಾಚಮನ ದೇವರು ಮೆಚ್ಚುವಂತೆ 5 ಜನ ಕೋವಿಡ್ ಬಂದವರಿಗೆ ತನು ಮನ ಧನ ಅರ್ಪಿಸಿ ಸೇವೆ ಮಾಡುತ್ತಿರುವೆ. ಅದರಲ್ಲಿ ಒಬ್ಬ ಬಂಧು ತೀರಿಹೋದ. ದಯಮಾಡಿ ನೀವು ನಿಮ್ಮವರಿಗೆ ಸಹಾಯ ಮಾಡಿ ಆಗದಿದ್ದರೆ ಮೌನವಾಗಿ ಇದ್ದುಬಿಡಿ. ಇಲ್ಲಿ ಬಂದು ಸಂಬಂಧವಿಲ್ಲದ ಪ್ರಶ್ನೆ ತೀಟೆ ಅಣಕ timepassಗೆ ಈಕೆಟ್ಟ ಪರಿಸ್ಥಿತಿ ಬಳಕೆ ಮಾಡಬೇಡಿ ಈ ಗುಣ ಯಾರಿಗು ಶೋಭೆಯಲ್ಲಾ'' ಎಂದು ನಟ ಜಗ್ಗೇಶ್ ಮನವಿ ಮಾಡಿದ್ದಾರೆ.

    'ಟೀಕಿಸುವುದು, ದೂಷಿಸುವುದು ಬಿಡಿ, ಜನರು ಜವಾಬ್ದಾರಿಯಿಂದ ವರ್ತಿಸಿ''ಟೀಕಿಸುವುದು, ದೂಷಿಸುವುದು ಬಿಡಿ, ಜನರು ಜವಾಬ್ದಾರಿಯಿಂದ ವರ್ತಿಸಿ'

    ಸೆಲೆಬ್ರಿಟಿಗಳಿಗೂ ಕಷ್ಟ ತಪ್ಪಿದ್ದಲ್ಲ

    ಸೆಲೆಬ್ರಿಟಿಗಳಿಗೂ ಕಷ್ಟ ತಪ್ಪಿದ್ದಲ್ಲ

    ಸೆಲೆಬ್ರಿಟಿಗಳು ಅಥವಾ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವವರಿಗೂ ಕೊರೊನಾದಿಂದ ಭಾರಿ ಸಮಸ್ಯೆ, ಸಂಕಷ್ಟಗಳು ಎದುರಾಗಿದೆ. ಇತ್ತೀಚಿಗಷ್ಟೆ ಸುನೇತ್ರಾ ಪಂಡಿತ್ ತಮ್ಮ ಸಹೋದರಿಯನ್ನು ಕಳೆದುಕೊಂಡರು. ಕಿರುತೆರೆ ನಟ ಪವನ್ ಕುಮಾರ್ ಸಹ ತಮ್ಮ ಕುಟುಂಬ ಸದಸ್ಯರನ್ನು ಕೊರೊನಾದಿಂದ ಕಳೆದುಕೊಂಡರು.

    English summary
    Veteran actor Jaggesh has expressed outrage over the ambulance, the hospital.
    Monday, April 26, 2021, 9:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X