For Quick Alerts
  ALLOW NOTIFICATIONS  
  For Daily Alerts

  ಬಲಗಾಲಿಟ್ಟು ರಂಗ ಪ್ರವೇಶಿಸಿದ 'ರಂಗನಾಯಕ' ಜಗ್ಗೇಶ್

  |

  'ಮಠ' ನಿರ್ದೇಶಕ ಗುರುಪ್ರಸಾದ್ ಮತ್ತು ನವರಸ ನಾಯಕ ಜಗ್ಗೇಶ್ ಕಾಂಬಿನೇಷನ್‌ನಲ್ಲಿ 'ರಂಗನಾಯಕ' ಎಂಬ ಸಿನಿಮಾ ಸೆಟ್ಟೇರಿದ್ದು, ಇಂದಿನಿಂದ ಚಿತ್ರೀಕರಣಕ್ಕೆ ನಟ ಜಗ್ಗೇಶ್ ಹಾಜರಾಗಿದ್ದಾರೆ. ಜಗ್ಗೇಶ್ ಅವರು ಬಹಳ ವಿಶೇಷವಾದ ಗೆಟಪ್‌ನಲ್ಲಿ ರಂಗನಾಯಕ ಶೂಟಿಂಗ್ ಸೆಟ್‌ಗೆ ಎಂಟ್ರಿಯಾದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಈ ಫೋಟೋವನ್ನು ಸ್ವತಃ ಜಗ್ಗೇಶ್ ಹಂಚಿಕೊಂಡಿದ್ದು, ''ರಂಗನಾಯಕ ಇಂದು ಬಲಗಾಲಿಟ್ಟೆ..'' ಎಂದು ಕ್ಯಾಪ್ಷನ್ ಹಾಕಿದ್ದಾರೆ. ಕರ್ನಾಟಕದ ಭಾವುಟವನ್ನು ಪ್ರತಿನಿಧಿಸುವಂತೆ ಕೆಂಪು ಮತ್ತು ಹಳದಿ ಬಣ್ಣದ ವಸ್ತ್ರ ತೊಟ್ಟು ನಗುನಗುತಾ ಬಂದ ಜಗ್ಗೇಶ್ ಬಲಗಾಲಿಟ್ಟು ಸೆಟ್‌ಗೆ ಬಂದಿದ್ದಾರೆ. ಈ ವೇಳೆ ಜಗ್ಗೇಶ್ ಅವರನ್ನು ನಿರ್ದೇಶಕ ಗುರು ಪ್ರಸಾದ್ ಹಾಗೂ ನೃತ್ಯ ಸಂಯೋಜಕ ಇರ್ಮಾನ್ ಸರ್ದಾರಿಯಾ ಅಕ್ಕ ಪಕ್ಕ ನಿಂತು ಸ್ವಾಗತಿಸಿದ್ದಾರೆ.

  'ಈ ದೃಶ್ಯ ಮಾಡಬೇಕಿದ್ರೆ ಹೃದಯ ಬಾಯಿಗೆ ಬಂದಿತ್ತು': ಜಗ್ಗೇಶ್ ಹಳೆಯ ನೆನಪು'ಈ ದೃಶ್ಯ ಮಾಡಬೇಕಿದ್ರೆ ಹೃದಯ ಬಾಯಿಗೆ ಬಂದಿತ್ತು': ಜಗ್ಗೇಶ್ ಹಳೆಯ ನೆನಪು

  ಮಠ, ಎದ್ದೇಳು ಮಂಜುನಾಥ ಸಿನಿಮಾಗಳ ನಂತರ ಈ ಸೂಪರ್ ಹಿಟ್ ಕಾಂಬಿನೇಷನ್ ಒಂದಾಗಿರುವುದು ಸಹಜವಾಗಿ ಕುತೂಹಲ ಹೆಚ್ಚಿಸಿದೆ. ಸುಮಾರು 11 ವರ್ಷದ ನಂತರ ಜಗ್ಗೇಶ್ ಮತ್ತು ಗುರುಪ್ರಸಾದ್ 'ರಂಗನಾಯಕ' ಚಿತ್ರದ ಮೂಲಕ ಒಟ್ಟಿಗೆ ಸಿನಿಮಾ ಮಾಡ್ತಿದ್ದಾರೆ. ಮುಂದೆ ಓದಿ...

  ವಿಖ್ಯಾತ್ ಪ್ರೊಡಕ್ಷನ್‌ನಲ್ಲಿ ನಿರ್ಮಾಣ

  ವಿಖ್ಯಾತ್ ಪ್ರೊಡಕ್ಷನ್‌ನಲ್ಲಿ ನಿರ್ಮಾಣ

  ವಿಖ್ಯಾತ್ ಪ್ರೊಡಕ್ಷನ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಈ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ. ಅಂದ್ಹಾಗೆ, ಅನೂಪ್ ಸೀಳಿನ್ ಮತ್ತು ಗುರು ಪ್ರಸಾದ್ ಕಾಂಬಿನೇಷನ್‌ನಲ್ಲಿ ಮೂರು ಸಿನಿಮಾಗಳು ಬಂದಿದ್ದು, ಈ ಮೂರು ಚಿತ್ರದ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಅದ್ಭುತ ಎನಿಸಿಕೊಂಡಿದೆ. 'ಎದ್ದೇಳು ಮಂಜುನಾಥ', 'ಡೈರೆಕ್ಟರ್ ಸ್ಪೆಷಲ್' ಹಾಗೂ 'ಎರಡನೇ ಸಲ' ಚಿತ್ರಗಳಿಗೆ ಅನೂಪ್ ಮ್ಯೂಸಿಕ್ ಕಂಪೋಸ್ ಮಾಡಿದ್ದರು. ಈಗ ನಾಲ್ಕನೇ ಸಿನಿಮಾ ರಂಗನಾಯಕ.

  ಕಳೆದ ವರ್ಷ ಸೆಟ್ಟೇರಿದ್ದ ರಂಗನಾಯಕ

  ಕಳೆದ ವರ್ಷ ಸೆಟ್ಟೇರಿದ್ದ ರಂಗನಾಯಕ

  ಕಥೆ-ಚಿತ್ರಕಥೆ-ಸಂಭಾಷಣೆ-ಸಾಹಿತ್ಯದ ಜೊತೆಗೆ ನಿರ್ದೇಶನ ಮಾಡ್ತಿರುವ ಗುರು ಪ್ರಸಾದ್ ಈಗ ಚಿತ್ರೀಕರಣಕ್ಕೆ ಚಾಲನೆ ಕೊಟ್ಟಿದ್ದಾರೆ. ಕಳೆದ ವರ್ಷ ಡಿಸೆಂಬರ್ ಅಂತ್ಯದಲ್ಲಿ ರಂಗನಾಯಕ ಅಧಿಕೃತವಾಗಿ ಮುಹೂರ್ತ ಮಾಡಿಕೊಂಡಿತ್ತು. ಹಾಗ್ನೋಡಿದ್ರೆ, ಇಷ್ಟೊತ್ತಿಗಾಗಲೇ ಸಿನಿಮಾ ತೆರೆಗೆ ಬರಬೇಕಿತ್ತು. ಕೋವಿಡ್ ಕಾರಣದಿಂದ ಸ್ವಲ್ಪ ತಡವಾಗಿದೆ. ಇನ್ನುಳಿದಂತೆ ಜಗ್ಗೇಶ್ ಅವರನ್ನು ಹೊರತುಪಡಿಸಿ ರಂಗನಾಯಕ ಚಿತ್ರದಲ್ಲಿ ಬೇರೆ ಯಾವೆಲ್ಲ ಕಲಾವಿದರು ಇರಲಿದ್ದಾರೆ ಎನ್ನುವುದು ಸದ್ಯಕ್ಕೆ ಕುತೂಹಲ ಮೂಡಿಸಿದೆ.

  'ರಂಗನಾಯಕ' ಪ್ರಚಾರಕ್ಕಾಗಿ ಗುರುಪ್ರಸಾದ್ ರೇಗಾಡಿದ್ರಾ?'ರಂಗನಾಯಕ' ಪ್ರಚಾರಕ್ಕಾಗಿ ಗುರುಪ್ರಸಾದ್ ರೇಗಾಡಿದ್ರಾ?

  ತೋತಾಪುರಿ ಮುಗಿಸಿದ ಜಗ್ಗೇಶ್

  ತೋತಾಪುರಿ ಮುಗಿಸಿದ ಜಗ್ಗೇಶ್

  'ನೀರ್‌ದೋಸೆ' ಖ್ಯಾತಿಯ ವಿಜಯ ಪ್ರಸಾದ್ ನಿರ್ದೇಶನದಲ್ಲಿ 'ತೋತಾಪುರಿ' ಸಿನಿಮಾ ಮಾಡುತ್ತಿರುವ ಜಗ್ಗೇಶ್, ಚಿತ್ರೀಕರಣ ಮುಗಿಸಿದ್ದಾರೆ. ಸಿನಿಮಾ ಆರಂಭದಿಂದಲೂ ಈ ಚಿತ್ರ ದೊಡ್ಡ ಮಟ್ಟದ ಕುತೂಹಲ ಮೂಡಿಸಿದೆ. ಎರಡು ಭಾಗಗಳಾಗಿ ಬಿಡುಗಡೆಯಾಗುತ್ತಿರುವ ಈ ಚಿತ್ರ ಏಕಕಾಲಕ್ಕೆ ಚಿತ್ರೀಕರಣ ಮುಗಿಸಿದೆ. ಜಗ್ಗೇಶ್, ಧನಂಜಯ್, ಅದಿತಿ ಪ್ರಭುದೇವ, ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್, ಹೇಮಾದತ್ ಪ್ರಮುಖ ತಾರಾಬಳಗದಲ್ಲಿ ನಟಿಸಿದ್ದಾರೆ. 2019ರಲ್ಲಿ ತೆರೆಕಂಡ 'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾದಲ್ಲಿ ಕೊನೆಯದಾಗಿ ಜಗ್ಗೇಶ್ ಕಾಣಿಸಿಕೊಂಡಿದ್ದರು. ಮೇಘನಾ ಗಾಂವ್ಕರ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು.

  ಸರ್ಕಾರದ ವಿರುದ್ಧ ಗುಡುಗಿದ್ದ 'ಮಠ' ನಿರ್ದೇಶಕ

  ಸರ್ಕಾರದ ವಿರುದ್ಧ ಗುಡುಗಿದ್ದ 'ಮಠ' ನಿರ್ದೇಶಕ

  ಕೊರೊನಾ ವೈರಸ್ ಕಾರಣಕ್ಕಾಗಿ ರಾಜ್ಯದಲ್ಲಿ ಹಾಗು ದೇಶದಲ್ಲಿ ಅನೇಕರು ಜನರು ಸಾವನ್ನಪ್ಪಿದರು. ಈ ಹಿನ್ನೆಲೆ ಕಳೆದ ಏಪ್ರಿಲ್ ತಿಂಗಳಲ್ಲಿ ವಿಡಿಯೋ ಮೂಲಕ ಸರ್ಕಾರ ಹಾಗೂ ಯಡಿಯೂರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ನನಗೂ ಕೊರೊನಾ ಬಂದಿದೆ, ನಾನು ಸತ್ತರೆ ಸರ್ಕಾರವೇ ಕಾರಣ ಎಂದು ಡೆತ್‌ನೋಟ್ ಬರೆದಿಡುವುದಾಗಿ ಎಚ್ಚರಿಕೆ ಕೊಟ್ಟಿದ್ದರು. ಅದಾದ ನಂತರ ಎರಡನೇ ಬಾರಿಗೆ ಜೂನ್ ತಿಂಗಳಲ್ಲಿ ಮತ್ತೊಮ್ಮೆ ವಿಡಿಯೋ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಯಡಿಯೂರಪ್ಪ ನೀನು ಸಾಕಪ್ಪ ಎಂದು ಖಾರವಾಗಿ ಟೀಕಿಸಿದ್ದರು.

  English summary
  Kannada actor Jaggesh makes an auspicious entry, puts his right foot first as he enters the sets of Ranganayaka today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X