For Quick Alerts
  ALLOW NOTIFICATIONS  
  For Daily Alerts

  ಪರಿಸರ ದ್ರೋಹಿಗಳ ವಿರುದ್ದ ಸಮರ ಸಾರಿದ ನವರಸ ನಾಯಕ

  By Pavithra
  |
  ಜಗ್ಗೇಶ್ ಇಷ್ಟು ಗರಂ ಆಗೋದಕ್ಕೆ ಏನ್ ಕಾರಣ..!!? | Filmibeat Kannada

  ನವರಸ ನಾಯಕ ಜಗ್ಗೇಶ್ ಸುಮಾರು 30 ವರ್ಷದಿಂದ ಮಲ್ಲೇಶ್ವರಂ ನಿವಾಸಿಯಾಗಿದ್ದಾರೆ. ಕಳೆದ ಮೂವತ್ತು ವರ್ಷದಿಂದಲೂ ತಮ್ಮ ಮನೆಯ ಸುತ್ತಾ ಮುತ್ತ ಮಕ್ಕಳಂತೆ ಸಾಕಷ್ಟು ಮರಗಳನ್ನ ಬೆಳೆಸಿ ಪೋಷಣೆ ಮಾಡುತ್ತಾ ಬಂದಿದ್ದಾರೆ. ತಾವೇ ಪ್ರತಿ ಮರಗಳಿಗೂ ನೀರು ಪೂರೈಸುತ್ತಾ ಬೆಳಸಿಕೊಂಡು ಬಂದಿದ್ದಾರೆ.

  ಆದರೆ ಇಂದು ರಾಜ್ಯ ಕಾರ್ಯಕಾರಿಣಿ ಸಭೆ ಮುಗಿಸಿಕೊಂಡ ಮನೆಯ ಬಳಿ ಬಂದ ಜಗ್ಗೇಶ್ ಅವರಿಗೆ ಶಾಕ್ ಕಾದಿತ್ತು. ಮನೆಯ ಆವರಣಕ್ಕೆ ಸಮಸ್ಯೆ ಆಗುತ್ತದೆ ಎನ್ನುವ ನಿಟ್ಟಿನಲ್ಲಿ ತಮ್ಮ ಮನೆಯ ಸುತ್ತಾ ಮುತ್ತ ನಿವಾಸಿಗಳು ಸೊಂಪಾಗಿ ಬೆಳೆದಿದ್ದ ಮರವನ್ನು ಕಡಿಸಿ ಹಾಕಿದ್ದಾರೆ. ಇದರಿಂದ ಬೇಸರವಾದ ನವರಸ ನಾಯಕ ಪರಿಸರಕ್ಕೆ ಆದ ಅನ್ಯಾಯವನ್ನು ಫೇಸ್ ಬುಲ್ ಲೈವ್ ಮಾಡುವ ಮೂಲಕ ಜನರಿಗೆ ತಲಪಿಸಿದ್ದಾರೆ.

  ಈ ಹಿಂದೆಯೂ ಇದೇ ರೀತಿಯಲ್ಲಿ ಮರಗಳನ್ನ ಕಡಿಯಲು ಬಂದಾಗ ಜಗ್ಗೇಶ್ ಅವರೇ ಖುದ್ದಾಗಿ ಶಾಸಕರನ್ನು ಭೇಟಿ ಮಾಡಿ ಮರಗಳನ್ನು ಸಂರಕ್ಷಿಸಿಕೊಂಡಿದ್ದರು. ಆದರೆ ಈ ಬಾರಿ ಜಗ್ಗೇಶ್ ಅವರು ಇಲ್ಲದ ಸಮಯ ನೋಡಿ ಮರಗಳನ್ನು ಕಡಿದು ಹಾಕಿದ್ದಾರೆ. ಮನೆಯ ಸುತ್ತಾ ಬೆಳೆದಿರುವ ಮರವನ್ನು ಕಡಿಯಲು ಅನುಮತಿ ನೀಡಿರುವವರು ಯಾರು? ಮರ ಕಡಿಯುವಂತೆ ಪತ್ರ ಬರೆದವರು ಯಾರು? ಎನ್ನುವುದನ್ನು ತಿಳಿಯುವವರೆಗೂ ಹೋರಾಟ ಮಾಡುವುದಾಗಿ ಜಗ್ಗೇಶ್ ಎಚ್ಚರಿಕೆ ಕೊಟ್ಟಿದ್ದಾರೆ.

  ಜಗ್ಗೇಶ್ ಅವರ ಜೊತೆಯಲ್ಲಿ ಸಾರ್ವಜನಿಕರು ಕೈ ಜೋಡಿಸುವಂತೆ ಮನವಿ ಮಾಡಿದ್ದು ಯಾರು ಹೋರಾಟಕ್ಕೆ ಮುಂದಾಗಲಿಲ್ಲ ಎಂದರೆ ತಾವೊಬ್ಬರೇ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ. ಮರಗಳನ್ನು ಕಡಿದಿರುವುದು ಜಗ್ಗೇಶ್ ಅವರ ಮನಸ್ಸಿಗೆ ನೋವನ್ನು ಉಂಟು ಮಾಡಿದೆ. ಮರಗಳಲ್ಲಿ ವಾಸವಿದ್ದ ನೂರಾರು ಹಕ್ಕಿ, ಪಕ್ಷಿಗಳು ವಾಸಸ್ಥಾನವನ್ನು ಕಳೆದುಕೊಂಡಿರುವುದು ನವರಸ ನಾಯಕನಿಗೆ ಮರುಕ ಉಂಟು ಮಾಡಿದೆ.

  English summary
  Actor Jaggesh expresses anger over cutting trees near his house. Jaggesh told the people about the tree cut down through facebook live .

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X