»   » ಅಣ್ಣಾವ್ರ ಅಭಿಮಾನಿ ಜಗ್ಗೇಶ್ ಗೆ ಅದೃಷ್ಟ ಅಂದ್ರೆ ಇದೇ ನೋಡಿ

ಅಣ್ಣಾವ್ರ ಅಭಿಮಾನಿ ಜಗ್ಗೇಶ್ ಗೆ ಅದೃಷ್ಟ ಅಂದ್ರೆ ಇದೇ ನೋಡಿ

Posted By:
Subscribe to Filmibeat Kannada
ನವರಸ ನಾಯಕನ ಪಾಲಿಗೆ ಅಣ್ಣಾವ್ರು ಆದ್ರು ಲಕ್ಕಿ | Filmibeat Kannada

ಕನ್ನಡದ ಖ್ಯಾತ ನಟ, ನವರಸ ನಾಯಕ ಜಗ್ಗೇಶ್ ಅವರಿಗೆ ಬಿಜೆಪಿಯಿಂದ ಟಿಕೆಟ್ ಸಿಕ್ಕಿದೆ. ನಿನ್ನೆ ಬಿಜೆಪಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಜಗ್ಗೇಶ್ ಅವರು ಯಶವಂತಪುರದಿಂದ ಸ್ಪರ್ಧೆ ಮಾಡುತ್ತಿರುವುದು ಅಧಿಕೃತ ಘೋಷಣೆಯಾಗಿದೆ.

ಇದು ಸ್ವತಃ ಜಗ್ಗೇಶ್ ಅವರೇ ಹೇಳುವಾಗೆ ಬಯಸದೇ ಬಂದ ಭಾಗ್ಯ. ಯಾಕಂದ್ರೆ, ಜಗ್ಗೇಶ್ ಅವರು ಸಾರ್ವಜನಿಕವಾಗಿ ಎಲ್ಲಿಯೂ ನಾನು ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿ, ನನಗೆ ಈ ಕ್ಷೇತ್ರದ ಟಿಕೆಟ್ ಬೇಕು ಎಂದು ಕೇಳಿಲ್ಲ. ಆದ್ರೆ, ರಾಜಕೀಯ ಲೆಕ್ಕಾಚಾರಗಳಲ್ಲಿ ಜಗ್ಗೇಶ್ ಅವರಿಗೆ ಟಿಕೆಟ್ ಸಿಕ್ಕಿದೆ.

ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾದ ಇಂದು (ಏಪ್ರಿಲ್ 24) ಭಾರತ್ ನಗರದಲ್ಲಿ ಮಧ್ಯಾಹ್ನ 12.30ಕ್ಕೆ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಇದು ಇನ್ನೊಂದು ರೀತಿಯಲ್ಲಿ ಬಯಸದೇ ಬಂದ ಭಾಗ್ಯ.

jaggesh filing nomination on dr rajkumar birthday

ಯಶವಂತಪುರದಿಂದ ಚುನಾವಣಾ ಕಣಕ್ಕೆ ಬಿಜೆಪಿ ಅಭ್ಯರ್ಥಿ ನಟ ಜಗ್ಗೇಶ್!

ಹೌದು, ಹೇಳಿ ಕೇಳಿ ಜಗ್ಗೇಶ್ ಅವರು, ನಟಸಾರ್ವಭೌಮ ಡಾ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ. ಇಂದು ಅಣ್ಣಾವ್ರ ಹುಟ್ಟುಹಬ್ಬ. ರಾಜ್ ಅವರನ್ನ ತಮ್ಮ ಆರಾಧ್ಯ ದೈವ ಎಂದೇ ಹೇಳಿಕೊಳ್ಳುವ ಜಗ್ಗೇಶ್ ಅವರು, ಅವರ ಹುಟ್ಟುಹಬ್ಬದಂದೇ ಚುನಾವಣ ಕಣಕ್ಕೆ ಇಳಿಯುತ್ತಿದ್ದಾರೆ. ಹೀಗಾಗಿ, ಟಿಕೆಟ್ ಸಿಕ್ಕಿದ್ದು ಮತ್ತು ನಾಮಪತ್ರ ಸಲ್ಲಿಸುತ್ತಿರುವುದು ಜಗ್ಗೇಶ್ ಅವರ ಪಾಲಿಗೆ ಖುಷಿ ಕೊಟ್ಟಿದೆ.

'ಲಕ್ಕಿ ಸ್ಟಾರ್' ನವರಸ ನಾಯಕ ಜಗ್ಗೇಶ್ ರಾಜಕೀಯ ಪಯಣ

ಜಗ್ಗೇಶ್ ಅವರು ಈ ಹಿಂದೆ ತುರುವೇಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದರು. ಜಗದೀಶ್ ಶೆಟ್ಟರ್ ಅವರು ವಿಧಾನಸಭೆ ಸ್ಪೀಕರ್ ಆಗಿದ್ದ ಕಾಲದಲ್ಲಿ ಶಾಸಕ ಸ್ಥಾನ ತೊರೆದು ಬಿಜೆಪಿ ಸೇರ್ಪಡೆಗೊಂಡರು. ಕೆಎಸ್ಸಾರ್ಟಿಸಿ ಉಪಾಧ್ಯಕ್ಷರಾಗಿ ಕ್ಯಾಬಿನೆಟ್ ದರ್ಜೆ ಹುದ್ದೆ ನಿಭಾಯಿಸಿದರು. ಸದ್ಯ ಕರ್ನಾಟಕ ಬಿಜೆಪಿಯ ಕಾರ್ಯಕಾರಿ ಸಮಿತಿಯ ವಿಶೇಷ ಆಹ್ವಾನಿತರಾಗಿದ್ದಾರೆ.

English summary
Kannada actor jaggesh will filing nomination on dr rajkumar birthday (april 24th) at 12.30 pm bharath nagara. jaggesh has get ticket from yeshwantpur in bjp.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X