»   » ಶ್ರೀಲಂಕಾ, ಮಲೇಶಿಯಾದಿಂದ ಜಗ್ಗೇಶ್ ಗೆ ಬಂದಿದೆ ಬೆದರಿಕೆ ಕರೆ.! ಯಾಕೆ.?

ಶ್ರೀಲಂಕಾ, ಮಲೇಶಿಯಾದಿಂದ ಜಗ್ಗೇಶ್ ಗೆ ಬಂದಿದೆ ಬೆದರಿಕೆ ಕರೆ.! ಯಾಕೆ.?

Posted By:
Subscribe to Filmibeat Kannada

ನವರಸ ನಾಯಕ ಜಗ್ಗೇಶ್ ರವರಿಗೆ ಶ್ರೀಲಂಕಾ, ಮಲೇಶಿಯಾ ಹಾಗೂ ಆಸ್ಟ್ರೇಲಿಯಾದಿಂದ ಬೆದರಿಕೆ ಕರೆ ಬಂದಿದೆ. ಅದಕ್ಕೆ ಕಾರಣವಾಗಿದ್ದು ಡಬ್ಬಿಂಗ್ ವಿರುದ್ಧ ಜಗ್ಗೇಶ್ ರವರ ನೇರ ಬಾಣಗಳು ಅಂದ್ರೆ ನೀವು ನಂಬಲೇಬೇಕು.!

ಹೌದು.. ಕನ್ನಡ ಚಿತ್ರರಂಗಕ್ಕೆ 'ಡಬ್ಬಿಂಗ್' ಬರಕೂಡದು ಅಂತ ನಟ ಜಗ್ಗೇಶ್ ಗುಡುಗಿದ್ದರು. ಅದರ ಪರಿಣಾಮವಾಗಿ ಅವರಿಗೆ ವಿದೇಶಗಳಿಂದ ಬೆದರಿಕೆ ಕರೆಗಳು ಬಂದಿವೆ. ಈ ವಿಚಾರವನ್ನ ನಟ ಜಗ್ಗೇಶ್ ಇವತ್ತು ಖುದ್ದು ಬಹಿರಂಗ ಪಡಿಸಿದರು. ಜೊತೆಗೆ ''ಬೆದರಿಕೆ ಕರೆಗಳಿಗೆಲ್ಲ ಬಗ್ಗುವ ಗಂಡು ನಾನಲ್ಲ'' ತೊಡೆ ತಟ್ಟಿದರು.['ಅಯ್ಯಯ್ಯೋ... ಅನ್ಯಾಯ' ಎಂದು ಡಬ್ಬಿಂಗ್ ವಿರುದ್ಧ ಕೂಗಿದ ಕನ್ನಡ ತಾರೆಯರು]

ಸ್ಯಾಂಡಲ್ ವುಡ್ ನಲ್ಲಿ ಡಬ್ಬಿಂಗ್ ವಿರೋಧಿಸಿ ಇಂದು ಕಲಾವಿದರು ಹಾಗೂ ತಂತ್ರಜ್ಞರು ಮೈಸೂರು ಬ್ಯಾಂಕ್ ನಿಂದ ಫ್ರೀಡಂ ಪಾರ್ಕ್ ವರೆಗೆ ಜಾಥಾ ನಡೆಸಿ, ತದನಂತರ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಜಗ್ಗೇಶ್ ಡಬ್ಬಿಂಗ್ ವಿರುದ್ಧ ಮಾತುಗಳನ್ನಾಡಿದರು. ವಿವರ ಇಲ್ಲಿದೆ ಓದಿರಿ....

ನಮ್ಮನ್ನ ಸಮಾಧಿ ಮಾಡುವ ಹುನ್ನಾರ ನಡೆಯುತ್ತಿದೆ

''ಡಬ್ಬಿಂಗ್ ಮೂಲಕ ನಮ್ಮನ್ನ ಸಮಾಧಿ ಮಾಡುವ ದೊಡ್ಡ ಹುನ್ನಾರ ನಡೆಯುತ್ತಿದೆ. ನ್ಯಾಯವನ್ನು ಕೇಳಲು ಬಂದಿದ್ದೇವೆ. 80 ವರ್ಷ ಇತಿಹಾಸ ಇರುವ ಕನ್ನಡ ಚಿತ್ರರಂಗವನ್ನ ನಿಮ್ಮ ಸ್ವಾರ್ಥಕ್ಕಾಗಿ ಸಾಯಿಸಬೇಡಿ'' - ಜಗ್ಗೇಶ್, ನಟ ['ಕನ್ನಡದ ಹೆಸರಲ್ಲಿ ಅನಾಚಾರ': 'ಡಬ್ಬಿಂಗ್' ವಿರುದ್ಧ ಗುಡುಗಿದ ನಟ ಜಗ್ಗೇಶ್.!]

ನಮ್ಮ ಹಕ್ಕು ನಮಗೆ ಬೇಕು

''ಡಬ್ಬಿಂಗ್ ವಿರುದ್ಧ ಮಾತನಾಡುವವರಿಗೆ ಲಾಯರ್ ನೋಟೀಸ್ ಕಳುಹಿಸಿಬಿಟ್ಟರೆ, ಮನೆಯಲ್ಲಿ ಮುದುರಿಕೊಂಡು ಇರುತ್ತಾರೆ ಎಂಬ ಕಲ್ಪನೆ ನಿಮಗೆ ಇದ್ದರೆ... ದಯಮಾಡಿ ಅದನ್ನ ನಿಮ್ಮಲ್ಲೇ ಇಟ್ಟುಕೊಳ್ಳಿ. ಈ ದೇಶದಲ್ಲಿ ಅತಿಶ್ರೇಷ್ಟವಾದ ಸಂವಿಧಾನವನ್ನ ಡಾ.ಬಿ.ಆರ್.ಅಂಬೇಡ್ಕರ್ ನಮಗೆಲ್ಲ ಕೊಟ್ಟಿದ್ದಾರೆ. ಪ್ರತಿಯೊಬ್ಬರಿಗೂ ಮಾತನಾಡುವ ಹಕ್ಕು ಇದೆ. ಪರ-ವಿರೋಧದ ಬಗ್ಗೆ ಚರ್ಚೆ ಮಾಡುವ ಹಕ್ಕು ಇದೆ. ಹೀಗಾಗಿ ನಮ್ಮ ಹಕ್ಕನ್ನ ನಮಗೆ ಬೇಕು ಅಂತ ಕೇಳಲು ಬಂದಿದ್ದೇವೆ'' - ಜಗ್ಗೇಶ್, ನಟ

ಆಕ್ರಮಣ ಮಾಡಲು ಹೊರಟಿದ್ದಾರೆ

''ಕೊರಿಯಾ, ಚೈನಾ ಸಿನಿಮಾಗಳನ್ನ ಇವತ್ತು ಡಬ್ಬಿಂಗ್ ಮಾಡಿ ನಮ್ಮನ್ನ ಆಕ್ರಮಣ ಮಾಡಲು ತಯಾರಾಗಿದ್ದಾರೆ. ನಮ್ಮ ಕನ್ನಡ ಮಾಧ್ಯಮ ನಮ್ಮ ನೋವಿಗೆ ಸ್ಪಂದಿಸಬೇಕು'' - ಜಗ್ಗೇಶ್, ನಟ

ಬೆದರಿಕೆ ಕರೆ ಬಂದಿದೆ

''ಡಬ್ಬಿಂಗ್ ವಿರುದ್ಧ ಯಾರ್ಯಾರು ಮಾತನಾಡುತ್ತಾರೆ. ಆಯಾ ನಟನ ಅಭಿಮಾನಿ ಸಂಘಗಳಿಗೆ ಹೋಗಿಬಿಟ್ಟು ಇಲ್ಲಿರುವ ಮಲ್ಲಪ್ಪ ಶೆಟ್ರು, ಇವನಿಗೆ ಧಮ್ಕಿ ಹಾಕಿ ಅಂತ ಹೇಳಿ ಶ್ರೀಲಂಕಾ, ಆಸ್ಟ್ರೇಲಿಯಾ, ಮಲೇಶಿಯಾದಿಂದ ಬೆದರಿಕೆ ಕರೆ ಬಂದಿದೆ. ನಿಮ್ಮ ಬೆದರಿಕೆ ಕರೆಗೆ ನಾನು ಕೇರ್ ಮಾಡಲ್ಲ. ನಾವು ಎಲ್ಲ ಆಟ ಆಡಿ ಇಲ್ಲಿಗೆ ಬಂದಿರೋದು. ಕನ್ನಡದ ಅನ್ನವನ್ನು ತಿಂದು ಇಲ್ಲಿಯವರೆಗೂ ಬರಲು ಯೋಗ್ಯತೆ ಬೆಳೆಸಿಕೊಂಡಿರೋದು'' - ಜಗ್ಗೇಶ್, ನಟ

ಹುಳಿ ಹಿಂಡುವ ಕೆಲಸ ಮಾಡಬೇಡಿ

''ನಾವು ಯಾವ ಭಾಷೆ ವಿರುದ್ಧ ಇಲ್ಲ. ಹುಳಿ ಹಿಂಡುವ ಕೆಲಸ ಮಾಡಬೇಡಿ. 80 ವರ್ಷದಿಂದ ಕಷ್ಟ ಪಟ್ಟಿದ್ದೇವೆ. ಮುಂದಿನ ಪೀಳಿಗೆಗೆ ದಾರಿ ಮಾಡಿಕೊಡಿ'' - ಜಗ್ಗೇಶ್, ನಟ

English summary
Kannada Actor Jaggesh gets threatening calls for raising voice against Dubbing in Sandalwood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada