»   » ಅರೆರೆ.! ಜಗ್ಗೇಶ್ ಮತ್ತೆ ಮದುವೆ ಆದ್ರಾ ಏನ್ ಕತೆ

ಅರೆರೆ.! ಜಗ್ಗೇಶ್ ಮತ್ತೆ ಮದುವೆ ಆದ್ರಾ ಏನ್ ಕತೆ

Posted By:
Subscribe to Filmibeat Kannada

ನಿರ್ದೇಶಕ ವಿಜಯ್ ಪ್ರಸಾದ್ ಅವರು ಅಂತೂ ಇಂತೂ 'ನೀರ್ ದೋಸೆ' ಹುಯ್ಯೋದನ್ನ ಮುಗಿಸಿ ಬಿಟ್ರು. ಇನ್ನೇನಿದ್ದರೂ ಪ್ರೇಕ್ಷಕರಿಗೆ ಬಾಳೆ ಎಲೆ ಹಾಕಿ ಬಡಿಸಲು ಮಾತ್ರ ಬಾಕಿ ಉಳಿದಿರುವುದು.

ನವರಸ ನಾಯಕ ಜಗ್ಗೇಶ್, ನಟಿ ಹರಿಪ್ರಿಯಾ, ಹಿರಿಯ ನಟ ದತ್ತಣ್ಣ ಮತ್ತು ಸುಮನಾ ರಂಗನಾಥ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ 'ನೀರ್ ದೋಸೆ' ಸಿನಿಮಾ ಶೂಟಿಂಗ್ ಕಂಪ್ಲೀಟ್ ಮಾಡಿದೆ.[ಚಿತ್ರಗಳು: 'ನೀರ್ ದೋಸೆ' ಹುಯಿದು ಸುಸ್ತಾದ ವಿಜಯ್ ಪ್ರಸಾದ್]

ಸುಮಾರು 2 ವರ್ಷಗಳ ಹಿಂದೆ ಸೆಟ್ಟೇರಿದ್ದ 'ನೀರ್ ದೋಸೆ' ಹಲವಾರು ರಗಳೆಗಳನ್ನು ಹಿಮ್ಮೆಟ್ಟಿ ಅಂತೂ ಶೂಟಿಂಗ್ ಮುಗಿಸಿದೆ. ಬಹಳ ದಿನಗಳಿಂದ ಬೆಂಗಳೂರಿನ ಸುತ್ತಮುತ್ತ ಶೂಟಿಂಗ್ ನಡೆಸುತ್ತಿದ್ದ ನಿರ್ದೇಶಕ ವಿಜಯ್ ಪ್ರಸಾದ್ ಅವರು ಕೊನೆಗೂ 'ನೀರ್ ದೋಸೆ' ಚಿತ್ರದ ಶೂಟಿಂಗ್ ಯಶಸ್ವಿಯಾಗಿ ಮುಗಿಸುವಲ್ಲಿ ಸಫಲರಾಗಿದ್ದಾರೆ.

ಇನ್ನು ಚಿತ್ರದ ಕೊನೆಯ ಹಂತದ ಶೂಟಿಂಗ್ ಮುಗಿಸಿರುವ ಇಡೀ ಚಿತ್ರತಂಡ ಶೂಟಿಂಗ್ ಸ್ಟಿಲ್ಸ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಕೊನೆ ಹಂತದಲ್ಲಿ ನಟ ಜಗ್ಗೇಶ್ ಮತ್ತು ಸುಮನಾ ರಂಗನಾಥ್ ಅವರ ಮದುವೆಯ ದೃಶ್ಯವನ್ನು ಶೂಟಿಂಗ್ ಮಾಡಲಾಗಿತ್ತು.[ಜಗ್ಗೇಶ್ ರ 'ನೀರ್ ದೋಸೆ' ಪಿಕ್ಚರ್ನ್ಯಾಗ ಡೈಲಾಗ್ ಹೆಂಗೆಲ್ಲಾ ಐತಿ ಗೊತ್ತೇನ್ರೀ?]

ಚಿತ್ರದ ಶೂಟಿಂಗ್ ಸ್ಟಿಲ್ಸ್ ಮತ್ತು ಜಗ್ಗೇಶ್ ಅವರ ಮನದಾಳದ ಮಾತುಗಳನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

ಕ್ಲೈಮ್ಯಾಕ್ಸ್ ಸಾಂಗ್ ಆದ್ಮೇಲೆ ಪ್ಯಾಕಪ್

ಕೊನೆಯದಾಗಿ ಕಂಠೀರವ ಸ್ಟುಡಿಯೋದಲ್ಲಿ ಒಂದು ಕ್ಲೈಮ್ಯಾಕ್ಸ್ ಸಾಂಗ್ ಶೂಟ್ ಮಾಡಿದ ನಂತರ ಚಿತ್ರದ ಶೂಟಿಂಗ್ ಮುಗಿಸಲಾಯಿತು.[ಸಿಗರೇಟ್ ಸೇದಿ ಆರೋಗ್ಯ ಕೆಡಿಸಿಕೊಂಡ 'ನೀರ್ ದೋಸೆ' ಬೆಡಗಿ]

ಜಗ್ಗೇಶ್ ಮದುವೆ

ನವರಸ ನಾಯಕ ಜಗ್ಗೇಶ್ ಮತ್ತು ಸುಮನಾ ರಂಗನಾಥ್ ಅವರ ಮದುವೆ ದೃಶ್ಯದ ಚಿತ್ರೀಕರಣ ಮುಗಿಸಿ ಬಹು ದಿನಗಳ ಕಾಲ ಒಲೆಯ ಮೇಲಿದ್ದ 'ನೀರ್ ದೋಸೆ' ಕಾವಲಿಯನ್ನು ಕೆಳಗಿರಿಸಲಾಯಿತು.[ಚಿತ್ರಗಳು : 'ನೀರ್ ದೋಸೆ' ಸೆಟ್ ನಲ್ಲಿ ಮೋಜು-ಮಸ್ತಿ]

ಸ್ಮಶಾನದಲ್ಲಿ ಪ್ರಥಮ ರಾತ್ರಿ ಸನ್ನಿವೇಶ

ರುದ್ರಭೂಮಿಯಲ್ಲಿ ನವರಸ ನಾಯಕ ಜಗ್ಗೇಶ್ ಮತ್ತು ಸುಮನಾ ರಂಗನಾಥ್ ಅವರ ಪ್ರಥಮ ರಾತ್ರಿ ಸನ್ನಿವೇಶವನ್ನು ಚಿತ್ರೀಕರಿಸಲಾಗಿದೆ. ಸ್ಮಶಾನಪ್ರಿಯ 'ಸ್ಮಶಾನರುದ್ರಮುನಿ' ಸ್ವಾಮಿ ವಿಜಯ್ ಪ್ರಸಾದ್ ಎಂದು ಜಗ್ಗೇಶ್ ಅವರು ಟ್ವೀಟ್ ಮಾಡಿದ್ದಾರೆ.

ಡೌ ಮಾಡುತ್ತಿರುವ ಜಗ್ಗೇಶ್-ವಿಜಯ್

ಚಿತ್ರದ ಕಡೇ ಹಾಗೂ ಮುಕ್ತಾಯದ ಹಾಡಲ್ಲಿ ನಾಯಕಿಯರ ನೋಡಿ ಸುಯ್ ಟಪಕ್ ಅಂತ ಡೌ ಮಾಡುತ್ತಿರುವ ಮದುಮಗ ನವರಸ ನಾಯಕ ಜಗ್ಗೇಶ್ ಮತ್ತು ನಿರ್ದೇಶಕ ವಿಜಯ್ ಪ್ರಸಾದ್ ಅವರ ವರಸೆ ನೋಡಿ.

ಇಬ್ಬರು ಸುಂದರಿಯರ ನಡುವೆ ನವರಸ ನಾಯಕ

ಕ್ಲೈಮ್ಯಾಕ್ಸ್ ಸಾಂಗ್ ಶೂಟ್ ನ ಚಿಕ್ಕ ಗ್ಯಾಪ್ ನಲ್ಲಿ ನವರಸ ನಾಯಕ ಜಗ್ಗೇಶ್ ಅವರು ಇಬ್ಬರು ಬ್ಯೂಟಿಗಳಾದ ಸುಮನಾ ರಂಗನಾಥ್ ಮತ್ತು ಹರಿಪ್ರಿಯಾ ಅವರ ಜೊತೆ ಫೊಟೋ ಕ್ಲಿಕ್ಕಿಸಿಕೊಂಡಿದ್ದು ಹೀಗೆ.

ವಿಜಯ್ ಪ್ರಸಾದ್ ಮಸ್ತಿ

ಕಂಠೀರವ ಸ್ಟುಡಿಯೋದಲ್ಲಿ ನಡೆದ ಶೂಟಿಂಗ್ ಸಂದರ್ಭದಲ್ಲಿ ಸೆಟ್ ನಲ್ಲಿ ನಿರ್ದೇಶಕ ವಿಜಯ್ ಪ್ರಸಾದ್ ಮತ್ತು ನಟಿ ಸುಮನಾ ರಂಗನಾಥ್ ಅವರು ಮೋಜು-ಮಸ್ತಿ ಮಾಡಿದ್ದು ಹೀಗೆ.

ಮದುವೆ ಆಯ್ತು ಊಟ ಎಲ್ಲಿ

ಶೂಟಿಂಗ್ ನಡುವೆಯೂ ಚಿತ್ರತಂಡದವರು ಸೆಟ್ ನಲ್ಲಿ ಎಷ್ಟು ಎಂಜಾಯ್ ಮಾಡುತ್ತಾರೆ ಎಂಬುದಕ್ಕೆ ಈ ಫೊಟೋ ಸಾಕ್ಷಿ. 'ಮದುವೆ ಏನೋ ಆಯ್ತು ಊಟ ಎಲ್ಲಿ ಅಂತ ಕೇಳಿದಂತಿದೆ' ಇವರ ವರಸೆ.

#neerdose..ನೀರ್ದೋಸೆ ಚಿತ್ರದ ಚಿತ್ರೀಕರಣ ನಾಳೆ ಮುಕ್ತಾಯವಾಗುತ್ತೆ..ನಿರ್ದೇಶಕ ವಿಜಯ್ ಪ್ರಸಾದ್ ಬಗ್ಗೆ ಏನಾದರು ಹೇಳಬೇಕು ಅನ್ನಿಸಿತು..ಕಾರಣ...

Posted by Jaggesh Shivalingappa on Tuesday, March 1, 2016

ಜಗ್ಗೇಶ್ ದೀರ್ಘ ಸ್ಟೇಟಸ್

ಶೂಟಿಂಗ್ ಮುಗಿದ ಖುಷಿಯಲ್ಲಿ ನವರಸ ನಾಯಕ ಜಗ್ಗೇಶ್ ಅವರು ತಮ್ಮ ಮನದಾಳದ ಮಾತನ್ನು ದೀರ್ಘ ಸ್ಟೇಟಸ್ ಮೂಲಕ ಹೊರಗೆಡವಿದ್ದಾರೆ.

English summary
Kannada movie 'Neer Dose' has wrap up the shooting of the movie. Kannada Actor Jaggesh himself has confirmed it on his official Facebook page to all his fans & friends. The movie is directed by 'Sidlingu' fame Vijaya Prasad.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada