»   » ಹಳೆ ಮುನಿಸು ಮರೆತು ಒಂದಾದ ಉಪೇಂದ್ರ - ಜಗ್ಗೇಶ್ ಜೋಡಿ

ಹಳೆ ಮುನಿಸು ಮರೆತು ಒಂದಾದ ಉಪೇಂದ್ರ - ಜಗ್ಗೇಶ್ ಜೋಡಿ

Posted By:
Subscribe to Filmibeat Kannada

ಕನ್ನಡ ಚಿತ್ರರಂಗ ಒಂದು ಕುಟುಂಬ ಇದ್ದ ಹಾಗೆ. ಎಲ್ಲರ ಮನೆಯಲ್ಲಿ ಯಾವ ರೀತಿ ಮುನಿಸು ಬರುತ್ತದೆಯೋ ಅದೇ ರೀತಿ ಕೆಲವು ಬಾರಿ ನಟರ ಮಧ್ಯ ಮನಸ್ತಾಪ ಬರುವುದು ಸಹಜ. ಆದರೆ ಅದನ್ನು ಮರೆತು ಮತ್ತೆ ಒಟ್ಟಿಗೆ ಸೇರಿವುದು ನಿಜವಾದ ಕಲಾವಿದರ ಲಕ್ಷಣ. ಈಗ ಅದೇ ರೀತಿಯ ಬೆಳವಣಿಗೆ ಆಗಿದೆ.

ನಟ ಉಪೇಂದ್ರ ಹಾಗೂ ಜಗ್ಗೇಶ್ ವರ್ಷಗಳ ನಂತರ ಈಗ ಒಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ ಈ ಇಬ್ಬರು ನಟರ ಮಧ್ಯ ಮುನಿಸು ಬಂದಿದ್ದು ಎಲ್ಲರಿಗೂ ತಿಳಿದಿದೆ. 'ಉಪ್ಪಿ 2' ಸಿನಿಮಾದ ವೇಳೆ 'ಎಲ್ಲರ ಕಾಲ್ ಏಳಿತದೆ ಕಾಲ..' ಹಾಡು ಬಂದಾಗ ಜಗ್ಗೇಶ್ ನಟ ಉಪೇಂದ್ರ ವಿರುದ್ಧ ಕೋಪಗೊಂಡಿದ್ದರು. ಚಿತ್ರದ ಹಾಡಿನಲ್ಲಿ ಕನ್ನಡದ ನಟರ ಬಗ್ಗೆ ಅವಹೇಳನ ಮಾಡಲಾಗಿದೆ. ಎಂದು ಸಿಟ್ಟಿಗೆದ್ದರು.

ಆ ನಂತರ ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ನಡುವೆ ಜಗಳ ಆಯ್ತು. ಉಪೇಂದ್ರ ಅಭಿಮಾನಿಗಳು ಕೂಡ ಜಗ್ಗೇಶ್ ವಿರುದ್ಧ ಗರಂ ಆಗಿದ್ದರು. ಆದರೆ ಈಗ ಹಿಂದಿನ ಎಲ್ಲ ಘಟನೆ ಮರೆತು ಮತ್ತೆ 'ತರ್ಲೆ ನನ್ ಮಗ' ಜೋಡಿ ಒಂದಾಗಿದೆ. ಮುಂದೆ ಓದಿ...

ಯಶ್ ಬರ್ತ್ ಡೇ ಪಾರ್ಟಿ

ನಟ ಯಶ್ ಹುಟ್ಟುಹಬ್ಬದ ಪಾರ್ಟಿ ನಿನ್ನೆ ಸಂಜೆ ನಡೆದಿದೆ. ಈ ಕಾರ್ಯಕ್ರಮದಲ್ಲಿ ಅಂಬರೀಶ್, ಜಗ್ಗೇಶ್, ಉಪೇಂದ್ರ, ಪುನೀತ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಈ ವೇಳೆ ಉಪೇಂದ್ರ ಮತ್ತು ಜಗ್ಗೇಶ್ ಒಟ್ಟಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಜಗ್ಗೇಶ್ ಟ್ವೀಟ್

ಜಗ್ಗೇಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಉಪೇಂದ್ರ, ಅಂಬರೀಶ್ ಮತ್ತು ಯಶ್ ಜೊತೆ ತೆಗೆದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ''ಅಪಾರ್ಥ ಬೇಡ. ಯಾರು ಏನೇ ಅಂದುಕೂಂಡರು ನಾವು ಕಲಾವಿಶಾರದೆ ಮಕ್ಕಳು..ಸಿರಿಗನ್ನಡಂ ಬಾಳ್ಗೆ ಸಿರಿಗನ್ನಡಂ ಗೆಲ್ಗೆ..'' ಎಂದು ಟ್ವೀಟ್ ಮಾಡಿದ್ದಾರೆ.

ಸಂತಸದಲ್ಲಿ ಅಭಿಮಾನಿಗಳು

ಜಗ್ಗೇಶ್ ಮತ್ತು ಉಪೇಂದ್ರ ಇಬ್ಬರ ಸೆಲ್ಫಿ ಪೋಟೋ ನೋಡಿ ಅನೇಕ ಅಭಿಮಾನಿಗಳು ಖುಷಿ ಆಗಿದ್ದಾರೆ. ಕನ್ನಡದ ನಟರು ಇದೇ ರೀತಿ ಒಂದಾಗಿ ಇರಬೇಕು ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.

2 ವರ್ಷಗಳ ನಂತರ

'ಉಪ್ಪಿ 2' ಸಿನಿಮಾದ ಹಾಡಿನ ವಿವಾದದ ನಂತರ ಉಪೇಂದ್ರ ಮತ್ತು ಜಗ್ಗೇಶ್ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಆದರೆ 2 ವರ್ಷಗಳ ಬಳಿಕ ಈಗ ಮತ್ತೆ ಈ ಇಬ್ಬರು ನಟರು ಒಂದಾಗಿದ್ದಾರೆ.

ಉಪೇಂದ್ರ ವಿರುದ್ಧ ಟ್ವಿಟ್ಟರ್ ನಲ್ಲಿ ರೊಚ್ಚಿಗೆದ್ದ ಜಗ್ಗೇಶ್

'ತರ್ಲೆ ನನ್ ಮಗ' ಜೋಡಿ

ಉಪೇಂದ್ರ ಮತ್ತು ಜಗ್ಗೇಶ್ ಒಟ್ಟಿಗೆ ಚಿತ್ರರಂಗಕ್ಕೆ ಬಂದವರು. ಉಪೇಂದ್ರ ನಿರ್ದೇಶನದ ಮೊದಲ ಸಿನಿಮಾ 'ತರ್ಲೆ ನನ್ ಮಗ'ದಲ್ಲಿ ಜಗ್ಗೇಶ್ ನಾಯಕರಾಗಿದ್ದರು. ಮೊದಲ ಚಿತ್ರದಲ್ಲಿ ಈ ಜೋಡಿ ದೊಡ್ಡ ಯಶಸ್ಸು ಗಳಿಸಿತ್ತು.

ಟ್ವಿಟ್ಟರ್ ನಲ್ಲಿ ಜಗ್ಗೇಶ್ ವಿರುದ್ಧ ಉಪೇಂದ್ರ ಅಭಿಮಾನಿಗಳ ಯುದ್ಧ

ನಿನ್ನೆ ನಡೆದ ಕಾರ್ಯಕ್ರಮ

ಯಶ್ ನಿನ್ನೆ 32ನೇ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಂಬರೀಶ್, ಜಗ್ಗೇಶ್, ಉಪೇಂದ್ರ, ಪುನೀತ್ ರಾಜ್ ಕುಮಾರ್, ಅವಿನಾಶ್, ಅಮೂಲ್ಯ, ಪ್ರಜ್ವಲ್ ದೇವರಾಜ್ ಸೇರಿದಂತೆ ಅನೇಕ ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು.

English summary
After two years kannada actors Upendra and Jaggesh met in Yash birthday party. Jaggesh took a photos with Upendra and shared it in his twitter account.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X