twitter
    For Quick Alerts
    ALLOW NOTIFICATIONS  
    For Daily Alerts

    ಬೇಸಿಗೆಯಲ್ಲಿ ಪಕ್ಷಿ, ಪ್ರಾಣಿಗಳ ದಣಿವಾರಿಸಿದ ಜಗ್ಗೇಶ್

    |

    ಅಬ್ಬಬ್ಬಾ ಏನು ಬಿಸಿಲು ಅಲ್ವಾ.. ಮನೆಯಿಂದ ಹೊರಗಡೆ ಕಾಲು ಇಡುವ ಆಗಿಲ್ಲ, ಸೂರ್ಯ ತನ್ನ ಪ್ರತಾಪ ತೋರುತ್ತಾನೆ. ಬಿಸಿಲಿಗೆ ಆಯಾಸ, ಬಾಯರಿಕೆ ಹೆಚ್ಚೆ ಆಗುತ್ತದೆ. ಅದಕ್ಕೆ ನಾವೇಲ್ಲ ಪದೇ ಪದೇ ನೀರು ಕುಡಿದು ಸಮಾಧಾನ ಮಾಡಿಕೊಳ್ಳುತ್ತೇವೆ.

    ಪಕ್ಷಿಗಳ ಕಾಳಜಿಗೆ ಮುಂದಾದ ಯಶ್ ಮಡದಿ ರಾಧಿಕಾ ಪಕ್ಷಿಗಳ ಕಾಳಜಿಗೆ ಮುಂದಾದ ಯಶ್ ಮಡದಿ ರಾಧಿಕಾ

    ಆದರೆ, ಈ ರೀತಿ ಪ್ರಾಣಿ ಪಕ್ಷಿಗಳಿಗೆ ಆಗುತ್ತದೆ ಆಗ ಅವೇನು ಮಾಡಬೇಕು ಯೋಚಿಸಿ. ಅದರಲ್ಲಿಯೂ ಬೆಂಗಳೂರಿನಂತಹ ಸಿಟಿಯಲ್ಲಿ ಪ್ರಾಣಿಗಳ ಪಾಡು ಕೇಳುವವರೆ ಇಲ್ಲ. ಆದರೆ, ನಟ ಜಗ್ಗೇಶ್ ಕೆಲ ಪ್ರಾಣಿಗಳಿಗೆ ಸಹಾಯ ಮಾಡಿದ್ದಾರೆ.

    jaggesh kept water bowls for birds on the rooftop to save birds from summer

    ಜಗ್ಗೇಶ್ ತಮ್ಮ ಮನೆಯ ಮುಂದೆ, ಮನೆಯ ಮೇಲೆ ಪಾತ್ರೆಗಳಲ್ಲಿ ನೀರು ಇಟ್ಟು ಪ್ರಾಣಿ, ಪಕ್ಷಿಗಳ ದಣಿವಾರಿಸಿದ್ದಾರೆ. ಈ ಬಗ್ಗೆ ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿರುವ ಅವರು ''ಕಾಣದ ದೇವರಿಗೆ ಇಡುವ ನೈವೇದ್ಯಕ್ಕಿಂತ ಬಡಪಾಯಿ ಪಕ್ಷಿಗಳಿಗೆ ಹಾಗು ನೀರು ಹರಸಿ ಬರುವ ನಾಯಿಗಳಿಗೆ ಇಡುವ ನೀರೆ ಶ್ರೇಷ್ಟ ಪೂಜೆ. ನನ್ನ ಮನೆಯ ಮೇಲೆ ಪಕ್ಷಿಗೆ, ಮನೆಯ ಮುಂದೆ ಮಡಕೆಯಲ್ಲಿ ಬೀದಿ ನಾಯಿಗಳಿಗೆ ನೀರಿಡುವೆ.'' ಎಂದಿದ್ದಾರೆ.

    View this post on Instagram

    ಕಾಣದ ದೇವರಿಗೆ ಇಡುವ ನೈವೇದ್ಯಕ್ಕಿಂತ ಬಡಪಾಯಿ ಪಕ್ಷಿಗಳಿಗೆ ಹಾಗು ನೀರು ಹರಸಿ ಬರುವ ನಾಯಿಗಳಿಗೆ ಇಡುವ ನೀರೆ ಶ್ರೇಷ್ಟಪೂಜೆ.. ನನ್ನ ಮನೆಯಮೇಲೆ ಪಕ್ಷಿಗೆ..ಮನೆಯಮುಂದೆ ಮಡಕೆಯಲ್ಲಿ ಬೀದಿನಾಯಿಗಳಿಗೆ ನೀರಿಡುವೆ.. ಪಾಪಿ ಮನುಷ್ಯರು ಈ ಮಡಕೆಯು ಕದ್ದುಹೋಗುತ್ತಾರೆ! ನನ್ನ ಮನೆಯ ಅಕ್ಕಪಕ್ಕದ ವಿಧ್ಯಾವಂತರು bloody dogs comes in packs fr water ಅಂತ ಮಡಿಕೆ ಎಸೆಯುತ್ತಾರೆ! ಕೆಲವರಿಗೆ ಉಗಿದು ಓಡಿಸಿದ್ದು ಉಂಟು! ದಯಮಾಡಿ ತಾವು ನೀರನ್ನು ಇಂದೆ ಇಡಿ.. ಪ್ರಾರ್ಥನೆ..

    A post shared by Jaggesh Shivalingappa (@actor_jaggesh) on

    ಅಂದಹಾಗೆ, ಜಗ್ಗೇಶ್ ಅವರ ಈ ಕೆಲಸ ನಿಜಕ್ಕೂ ಮೆಚ್ಚುವಂತಿದೆ. ಒಬ್ಬರು ಇಬ್ಬರಲ್ಲದೆ ಇದೇ ರೀತಿ ಎಲ್ಲರೂ ಮಾಡಿದರೆ ಪ್ರಾಣಿಗಳ ರಕ್ಷಣೆ ಮಾಡಿದ ಪುಣ್ಯ ನಿಮ್ಮದಾಗಲಿದೆ.

    English summary
    Kannada actor Jaggesh kept water bowls for birds on the rooftop to save birds from summer.
    Wednesday, March 13, 2019, 19:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X