twitter
    For Quick Alerts
    ALLOW NOTIFICATIONS  
    For Daily Alerts

    ಕುರುಡನ ಕಣ್ಣೀರಿಗೆ ಮರುಗಿ ತಮ್ಮದೇ ಪಕ್ಷದ ಸರ್ಕಾರವನ್ನು ಕುಟುಕಿದ ಜಗ್ಗೇಶ್

    |

    ಹಿರಿಯ ನಟ, ಬಿಜೆಪಿ ಪಕ್ಷ ಮುಖಂಡ ಜಗ್ಗೇಶ್ ಟ್ವಿಟ್ಟರ್‌ನಲ್ಲಿ ಸದಾ ಸಕ್ರಿಯ. ಬಿಜೆಪಿ ಕಟ್ಟಾಳುವಾಗಿರುವ ಅವರು, ಮೋದಿ ಅವರ ಅಭಿಮಾನಿ ಸಹ ಹೌದು. ಆದರೆ ಇಂದು ತಮ್ಮದೇ ಪಕ್ಷದ ವಿರುದ್ಧ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ. ಇದಕ್ಕೆ ಸಕಾರಣವೂ ಇದೆ.

    Recommended Video

    Aishwarya Rai ಗೆ ಸಂತಸದ ಸುದ್ದಿ! | Filmibeat Kannada

    ಟ್ವಿಟ್ಟರ್‌ನಲ್ಲಿ ಕುರುಡನೊಬ್ಬನ ಕಣ್ಣೀರು ಕಂಡು ಬೇಸರಗೊಂಡ ಜಗ್ಗೇಶ್ ಅವರು, ತಮ್ಮದೇ ಪಕ್ಷದ ಸದಸ್ಯರ ವಿರುದ್ಧ ಗುಡುಗಿದ್ದಾರೆ. ಎಚ್ಚರಿಕೆಯನ್ನೂ ಸಹ ನೀಡಿದ್ದಾರೆ.

    ತಮ್ಮದೇ ಪಕ್ಷದಿಂದ ಗೆದ್ದು ಅಧಿಕಾರದಲ್ಲಿರುವ ಸಹವರ್ತಿಗಳನ್ನು ಜಗ್ಗೇಶ್ ತುಸು ಖಾರವಾಗಿಯೇ ಕುಟುಕಿದ್ದಾರೆ. ಏನೂ ಮಾಡಲಾಗದ ಸ್ಥಿತಿಯಲ್ಲಿ ತಾವಿರುವುದಾಗಿ ಬೇಸರ ವ್ಯಕ್ತಪಡಿಸಿದ್ದಾರೆ ಜಗ್ಗೇಶ್.

    ಅಂಧ ವ್ಯಕ್ತಿಯ ಕಣ್ಣೀರು

    ಅಂಧ ವ್ಯಕ್ತಿಯ ಕಣ್ಣೀರು

    ಅಂಧ ವ್ಯಕ್ತಿಯೊಬ್ಬ ಸರ್ಕಾರದಿಂದ ತನಗೆ ಆಗಬೇಕಿರುವ ಕಾರ್ಯವೊಂದಕ್ಕಾಗಿ ಅಧಿಕಾರಿಗಳ ಬಳಿ ಅಳುತ್ತಾ ಬೇಡಿಕೊಳ್ಳುತ್ತಿದ್ದಾನೆ. ಐದು ವರ್ಷದಿಂದಲೂ ಅಲೆದಾಡುತ್ತಿದ್ದೀನಿ ಎಂದು ಕಣ್ಣೀರುಡುತ್ತಿದ್ದಾನೆ. ಈ ವಿಡಿಯೋವನ್ನು ಯಾರೋ ಜಗ್ಗೇಶ್‌ಗೆ ಟ್ವಟ್ಟಿರ್‌ನಲ್ಲಿ ಟ್ಯಾಗ್ ಮಾಡಿದ್ದಾರೆ.

    ಗೆದ್ದು ಬಂದವರ ಜಾಣ ಕುರುಡು: ಜಗ್ಗೇಶ್

    ಗೆದ್ದು ಬಂದವರ ಜಾಣ ಕುರುಡು: ಜಗ್ಗೇಶ್

    ವಿಡಿಯೋ ನೋಡಿ ಮರುಕಪಟ್ಟ ಜಗ್ಗೇಶ್, 'ಇಂಥ ಅನೇಕ ಅಮಾಯಕರ ಕಣ್ಣಾರೆ ಕಂಡು ಏನು ಮಾಡಲಾಗದ ರಾಜಕೀಯ ವ್ಯೆವಸ್ಥೆಯನ್ನು ನಾನು ಶಪಿಸುವೆ. ಜನರಿಗಾಗಿ ಎಂದು ಹೇಳಿ ಜನರಿಂದ ಗೆದ್ದುಬಂದು ಜಾಣಕುರುಡು ಪ್ರದರ್ಶನ ಮಾಡುವವರೆ ಇಂಥ ಅಮಾಯಕರಿಗೆ ಸಹಾಯ ಮಾಡಿ, ಇಲ್ಲದಿದ್ದರೆ ನಿಮ್ಮ ಯಾವ ದೇವರು ಕ್ಷಮಿಸೋಲ್ಲಾ' ಎಂದಿದ್ದಾರೆ.

    'ಬಡವರ ಶಾಪ ಸುಮ್ಮನೆ ಬಿಡದು'

    'ಬಡವರ ಶಾಪ ಸುಮ್ಮನೆ ಬಿಡದು'

    ಮುಂದುವರೆದು, 'ಅಧಿಕಾರ ಇಂದು ಇರುತ್ತದೆ ನಾಳೆ ಹೋಗುತ್ತದೆ!ಬಡವರ ಶಾಪ ಒಂದುದಿನ ಸುಟ್ಟುಬಿಡುತ್ತದೆ' ಎಂದು ತಮ್ಮದೇ ಪಕ್ಷದ ಅಧಿಕಾರದಲ್ಲಿರುವ ಜನಪ್ರತಿನಿಧಿಗಳಿಗೆ ಚಾಟಿ ಬೀಸಿದ್ದಾರೆ.

    ಅವರ ಪಾಪ ಅವರನ್ನೇ ಸುಡುತ್ತದೆ

    ಅವರ ಪಾಪ ಅವರನ್ನೇ ಸುಡುತ್ತದೆ

    ಪ್ರಸ್ತುತ ಸರ್ಕಾರ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಯಶವಂತ್ ಎನ್ನುವರೊಬ್ಬರು ಜಗ್ಗೇಶ್ ಅವರಿಗೆ ಟ್ವಿಟ್ಟರ್‌ನಲ್ಲಿ ದೂರಿದ್ದಾರೆ, ಇದಕ್ಕೆ ಪರೋಕ್ಷ ಸಮ್ಮತಿ ವ್ಯಕ್ತಪಡಿಸಿರುವ ಜಗ್ಗೇಶ್, 'ಅವರು ಮಾಡಿದ ಪಾಪ ಅವರನ್ನೆ ಸುಡುತ್ತದೆ!ದೇವನೊಬ್ಬನಿರುವ ಅವ ಎಲ್ಲಾ ನೋಡುತ್ತಿರುವ' ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

    ಲೋಕಸಭೆ ಚುನಾವಣೆಯಲ್ಲಿ ಜಗ್ಗೇಶ್ ಸ್ಪರ್ಧೆ

    ಲೋಕಸಭೆ ಚುನಾವಣೆಯಲ್ಲಿ ಜಗ್ಗೇಶ್ ಸ್ಪರ್ಧೆ

    ನಟ ಜಗ್ಗೇಶ್ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಸಿನಿಮಾ ರಂಗದಿಂದ ಎಂಎಲ್‌ಸಿ ಸ್ಥಾನ ಪಡೆಯಲು ಪ್ರಯತ್ನಗಳನ್ನು ಮಾಡಿದರಾದರೂ ಯಡಿಯೂರಪ್ಪ ಅವರು ಸಿ.ಪಿ.ಯೋಗೇಶ್ವರ್ ಅವರನ್ನು ಎಂಎಲ್‌ಸಿ ಮಾಡಿದರು.

    English summary
    Actor turned politician Jaggesh lambasted on his own BJP parties government.
    Tuesday, July 28, 2020, 16:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X