For Quick Alerts
  ALLOW NOTIFICATIONS  
  For Daily Alerts

  'ನಾನ್ ಪಕ್ಕಾ ಕಾಂಗ್ರೆಸ್ ಕಾರ್ಯಕರ್ತ, ಆದ್ರೆ ನಿಮ್ಮ ಅಭಿಮಾನಿ' ಎಂದ ವ್ಯಕ್ತಿಗೆ ಜಗ್ಗೇಶ್ ಏನಂದ್ರು?

  |

  ಕನ್ನಡ ಹಿರಿಯ ನಟ ಜಗ್ಗೇಶ್ ಅವರಿಗೆ ತಮ್ಮದೇ ಅಭಿಮಾನಿ ಬಳಗ ಇದೆ. ಜಗ್ಗೇಶ್ ರಾಜಕೀಯ ಪ್ರವೇಶ ಮಾಡಿದ ಬಳಿಕ ಆ ಅಭಿಮಾನ ಹಾಗೆ ಉಳಿದುಕೊಂಡಿದೆ. ಆದ್ರೆ, ಕೆಲವು ವಿಚಾರಗಳಲ್ಲಿ ಜಗ್ಗೇಶ್ ಅವರ ಅಭಿಪ್ರಾಯವನ್ನು ವಿರೋಧಿಸುವ ಅಭಿಮಾನಿಗಳು ಸಹ ಇದ್ದಾರೆ.

  ಜಗ್ಗೇಶ್ ಸದ್ಯ ಬಿಜೆಪಿ ಪಕ್ಷದಲ್ಲಿರುವುದರಿಂದ ಕಾಂಗ್ರೆಸ್ ಹಾಗೂ ಇತರೆ ಕಾರ್ಯಕರ್ತರು ಅವರ ನಿಲುವುಗಳನ್ನು ಖಂಡಿಸುವುದು ಸಹಜ. ಆದ್ರೆ, ರಾಜಕೀಯವನ್ನು ಮೀರಿದ ಅಭಿಮಾನಿಗಳು ಜಗ್ಗೇಶ್ ಅವರಿಗಿದ್ದಾರೆ ಎನ್ನುವುದಕ್ಕೊಂದು ಉದಾಹರಣೆ ಸಿಕ್ಕಿದೆ. ಹೌದು, ಕಾಂಗ್ರೆಸ್‌ ಪಕ್ಷದ ಅಪ್ಪಟ ಕಾರ್ಯಕರ್ತನೊಬ್ಬ ಜಗ್ಗೇಶ್ ಅವರಿಗೆ 'ನಾನು ನಿಮ್ಮ ಪಕ್ಕಾ ಅಭಿಮಾನಿ' ಎಂದಿದ್ದಾರೆ. ಅದಕ್ಕೆ ಜಗ್ಗೇಶ್ ನೀಡಿದ ಪ್ರತಿಕ್ರಿಯೆ ಚರ್ಚೆಗೆ ಕಾರಣವಾಗಿದೆ? ಮುಂದೆ ಓದಿ...

  ನಾನ್ ಪಕ್ಕಾ ಕಾಂಗ್ರೆಸ್ ಕಾರ್ಯಕರ್ತ

  ನಾನ್ ಪಕ್ಕಾ ಕಾಂಗ್ರೆಸ್ ಕಾರ್ಯಕರ್ತ

  ''ಜಗ್ಗೇಶ್ ಹೇಗಿದಿರಾ ಸರ್...ನಾನ್ ಪಕ್ಕಾ ಕಾಂಗ್ರೆಸ್ ಕಾರ್ಯಕರ್ತ ಆದ್ರೆ ನಿಮ್ಮ ಪಕ್ಕಾ ಅಭಿಮಾನಿ, ರಾಜಕೀಯ ಬಿಟ್ಟು..'' ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಗ್ಗೇಶ್ ''Am not too serious in politics! ನಾನು ಎಂದಿಗು ಕಲೆಗಾಗಿ ಬದುಕುವನು! ನನ್ನ ಅಭಿಮಾನಿಗಳಿಗಾಗಿ ಪಕ್ಷಗಳ ಪಕ್ಕ ಇಟ್ಟು ಪ್ರೀತಿಸುವವನು! ನನಗೆ ರಾಜಕೀಯಕ್ಕಿಂತ ಕಲೆ ಹಾಗು ಅಭಿಮಾನಿಗಳ ಪ್ರೀತಿ ಮುಖ್ಯ! ಧನ್ಯವಾದ ಸಹೋದರ...!'' ಎಂದಿದ್ದಾರೆ.

  'ಅಲೆದಿಲ್ಲಾ, ನಿರ್ಮಾಪಕರ ಕಾಲಿಗೆ ಬಿದ್ದು ಪಾತ್ರ ಸಂಪಾದಿಸಿದವರು ನಾವು'

  ಕುತೂಹಲ ಹುಟ್ಟಿದ ಜಗ್ಗೇಶ್ ಮಾತು

  ಕುತೂಹಲ ಹುಟ್ಟಿದ ಜಗ್ಗೇಶ್ ಮಾತು

  ಜಗ್ಗೇಶ್ ಅವರ ಈ ಮಾತನ್ನು ಸೂಕ್ಷ್ಮವಾಗಿ ಗಮನಿಸಿದರೆ ರಾಜಕೀಯದಿಂದ ದೂರ ಸರಿಯುತ್ತಾರಾ ಎಂಬ ಅನುಮಾನ ಬಾರದೆ ಇರಲ್ಲ. ಅದಕ್ಕೆ ಪುಷ್ಠಿ ನೀಡುವಂತೆ ವ್ಯಕ್ತಿಯೊಬ್ಬ ಕಾಮೆಂಟ್ ಸಹ ಮಾಡಿದ್ದಾನೆ. ''ಮುಂದಿನ ಚುನಾವಣೆಯಲ್ಲಿ ನಿಮ್ಮ ಮೊದಲೆರಡು ಸಾಲನ್ನ ಮಾತ್ರ ಹಾಕ್ಕೊಂಡು (''Am not too serious in politics! ನಾನು ಎಂದಿಗು ಕಲೆಗಾಗಿ ಬದುಕುವನು!) ನೀವು ರಾಜಕೀಯಕ್ಕೆ ಸಂಚಕಾರ ಅಂತಾರೆ ಸಾರ್. ಯಾರನ್ನೂ ನಂಬಬೇಡಿ'' ಎಂದಿದ್ದಾನೆ.

  ಆಧ್ಯಾತ್ಮದ ಕಡೆ ಜಗ್ಗೇಶ್

  ಆಧ್ಯಾತ್ಮದ ಕಡೆ ಜಗ್ಗೇಶ್

  ಆ ಅಭಿಮಾನಿಯ ಕಾಮೆಂಟ್‌ಗೆ ಮತ್ತೆ ಪ್ರತಿಕ್ರಿಯೆ ನೀಡಿದ ಜಗ್ಗೇಶ್ ''ಆ ಸಮಯಕ್ಕೆ 60ವರ್ಷಕ್ಕೆ ಕಾಲಿಡುವ ನನ್ನ ದೇಹ ಹುಡುಕುವುದು ಆಧ್ಯಾತ್ಮಿಕ ದಾರಿ! ಅಧಿಕಾರವಲ್ಲಾ ಸಹೋದರ! ನನ್ನ ಆಂತರ್ಯ ಬಲ್ಲವರಿಗೆ ಮಾತ್ರ ಗೊತ್ತು ನನ್ನ ಒಳಚಿಂತನೆ! ನಾನು ನಶ್ವರಕ್ಕಿಂತ ಶ್ರೇಷ್ಠತೆ ಇರುವ ಮತ್ತೊಂದು ಹುಡುಕುತ್ತಿರುವೆ! ಆ ದಾರಿಯಲ್ಲಿ ಬಹುದೂರ ಸಾಗಿರುವೆ..ಧನ್ಯವಾದ ಪ್ರೀತಿಗೆ.'' ಎಂದಿದ್ದಾರೆ.

  'ಕಲಾವಿದರನ್ನು ಚಪ್ಪಾಳೆಗಾಗಿ 2 ಗಂಟೆ ಬಳಸಿ ಆನಂದಿಸಿ ಮರೆತುಬಿಡಿ'- ಜಗ್ಗೇಶ್

  ಇದು ಕನ್ನಡದ ಹೆಣ್ಣು ಮಗಳ ಹೃದಯ | Pranitha | Filmibeat Kannada
  ಎಂಎಲ್‌ಸಿ ಆಗಿ ನೋಡಬೇಕು

  ಎಂಎಲ್‌ಸಿ ಆಗಿ ನೋಡಬೇಕು

  ಮತ್ತೊಬ್ಬ ಅಭಿಮಾನಿ ''ಅಣ್ಣಾ ನಿಮ್ಮನ್ನ ವಿಧಾನಪರಿಷತ್ತಿನಲ್ಲಿ ನೋಡುವ ಆಸೆಯಿದೆ...ಕನ್ನಡ ನೆಲ ಜಲ ಸಂಸ್ಕೃತಿಯ ಬಗ್ಗೆ ಕಾಳಜಿಯಿರುವ ನೀವು ಎಂಎಲ್‌ಸಿ ಆಗಬೇಕು...'' ಎಂದಿದ್ದಾರೆ. ಅದಕ್ಕೆ ಉತ್ತರಿಸಿರುವ ಜಗ್ಗೇಶ್ ''ಅದು ಇಲ್ಲದೆಯು ಕನ್ನಡಕ್ಕಾಗಿ ಕೂಗಿದರೆ ಕೈ ಜೋಡಿಸುವ ಕೋಟಿ ಆತ್ಮಗಳು ನನ್ನ ಜೊತೆ ನಿಲ್ಲತ್ತವೆ ಆ ಪುಣ್ಯ ಸಾಕು ನನಗೆ..'' ಎಂದಿದ್ದಾರೆ.

  English summary
  Kannada actor Jaggesh said thanks to his fan who told 'I am strong Congress worker but your fan'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X