For Quick Alerts
  ALLOW NOTIFICATIONS  
  For Daily Alerts

  ''ಮುಂದಿನ ಪೀಳಿಗೆ ಉದ್ಧಾರಕ್ಕೆ ಸತ್ಯ ನುಡಿದೆ, ಅನುಭವಿಸಿ ಕನ್ನಡಕ್ಕೆ ಚಟ್ಟ ತಯಾರು''- ಜಗ್ಗೇಶ್

  |

  ಪ್ಯಾನ್ ಇಂಡಿಯಾ ಚಿತ್ರಗಳಿಗೆ ಸಂಬಂಧಿಸಿದಂತೆ ನಟ ಜಗ್ಗೇಶ್ ಅವರ ನೀಡಿದ್ದ ಹೇಳಿಕೆಗೆ ಭಾರಿ ಖಂಡನೆ ವ್ಯಕ್ತವಾಗಿತ್ತು. ''ಪ್ಯಾನ್ ಇಂಡಿಯಾ ನಮ್ಮನ್ನು ಉದ್ಧಾರ ಮಾಡಲ್ಲ, ಯಾರನ್ನೋ ಮೆಚ್ಚಿಸೋಕೆ ಪ್ಯಾನ್ ಇಂಡಿಯಾ ಮಾಡ್ತಾವ್ರೆ'' ಎಂದು ನವರಸ ನಾಯಕ ಅಸಮಾಧಾನ ಹೊರಹಾಕಿದ್ದರು.

  ಆದ್ರೀಗ, ಜಗ್ಗೇಶ್ ಅವರ ಹೇಳಿದ ಮಾತು ಸತ್ಯ ಎಂದು ಕೆಲವು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಈ ಕುರಿತು ನೆಟ್ಟಿಗರ ಟ್ವೀಟ್‌ಗೆ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದು, 'ಮುಂದಿನ ಪೀಳಿಗೆ ಉದ್ಧಾರಕ್ಕೆ ಸತ್ಯ ನುಡಿದೆ, ಅನುಭವಿಸಿ ಕನ್ನಡಕ್ಕೆ ಚಟ್ಟ ತಯಾರು' ಎಂದು ಎಚ್ಚರಿಕೆ ನೀಡಿದ್ದಾರೆ. ಮುಂದೆ ಓದಿ....

  ಪ್ಯಾನ್ ಇಂಡಿಯಾ ವಿರೋಧಿಸಿದ್ದಕ್ಕೆ ನಟ ಜಗ್ಗೇಶ್ ವಿರುದ್ಧ ಟೀಕೆ

  ನಿಮ್ಮ ಮಾತು ಇಂದು ಸತ್ಯವಾಗುತ್ತಿದೆ

  ನಿಮ್ಮ ಮಾತು ಇಂದು ಸತ್ಯವಾಗುತ್ತಿದೆ

  ಕನ್ನಡದಲ್ಲಿ ಮೆಗಾ ಪ್ಯಾನ್ ಪ್ರಾಜೆಕ್ಟ್‌ವೊಂದು ಘೋಷಣೆಯಾಗಿದೆ. ಈ ಪ್ರಾಜೆಕ್ಟ್‌ ಕುರಿತು ಕೆಲವು ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಜಗ್ಗೇಶ್ ಅವರು ಈ ಹಿಂದೆ ಪ್ಯಾನ್ ಇಂಡಿಯಾ ಕುರಿತು ಹೇಳಿದ ಮಾತು ಸತ್ಯ ಎನಿಸುತ್ತದೆ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಜಗ್ಗೇಶ್ ಅವರ ಸಹ ಪ್ರತಿಕ್ರಿಯೆ ನೀಡಿದ್ದಾರೆ.

  ಪ್ಯಾನ್ ಇಂಡಿಯಾ ವಿವಾದ: 'ಎಷ್ಟೆ ಬೆಳೆದರು ತಂದೆ ಮುಂದೆ ಮಕ್ಕಳೇ ವಿನಃ ತಂದೆಯಾಗಲ್ಲಾ'

  ಅನುಭವಿಸಿ ಕನ್ನಡಕ್ಕೆ ಚಟ್ಟ ತಯಾರು

  ಅನುಭವಿಸಿ ಕನ್ನಡಕ್ಕೆ ಚಟ್ಟ ತಯಾರು

  ''ರಾಯರ ನಂಬಿ ಬದುಕುವ ನಾನು ಹೃದಯದಿಂದ ಮುಂದಿನ ಪೀಳಿಗೆ ಉದ್ಧಾರಕ್ಕೆ ಸತ್ಯ ನುಡಿದೆ. ಅರಿವಾಗದ ಬಹುತೇಕರು ನೆಗಿಟಿವ್ ತೆಗೆದುಕೊಂಡು ಉತ್ತಮ ಮಾಹಿತಿ ಅಣಕ ಚರ್ಚೆಗೆ ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಂಡರು. ಮುಂದೈತೆ ಕನ್ನಡಿಗರೆ ಊರಬ್ಬ. ಆಗ ಅಯ್ಯೋ ಜಗ್ಗೇಶ ಅಂದೆ ಹೇಳಿದ ನಾವು ಅಣಿಕಿಸಿದೆವೆ ಎಂದು ಪಶ್ಚಾತಾಪ ಪಡುತ್ತೀರ. ಅನುಭವಿಸಿ ಕನ್ನಡಕ್ಕೆ ಚಟ್ಟ ತಯಾರು'' ಎಂದು ನಟ ಎಚ್ಚರಿಕೆ ನೀಡಿದ್ದಾರೆ.

  ರಾಯರ ಮಕ್ಕಳ ನೋಯಿಸಿದವರು ಉದ್ಧಾರವಿಲ್ಲಾ

  ರಾಯರ ಮಕ್ಕಳ ನೋಯಿಸಿದವರು ಉದ್ಧಾರವಿಲ್ಲಾ

  ''ರಾಯರ ಮಕ್ಕಳ ನೋಯಿಸಿದವರು ಉದ್ಧಾರವಿಲ್ಲಾ. ನನ್ನ ದೇಹದ ಮೇಲೆ ಉಸಿರಿನ ಜೊತೆಗೆ ರಾಯರು ಬೆರತಿದ್ದಾರೆ. ನನ್ನ ಬಗ್ಗೆ ಎಲ್ಲ ಅಣಕದ ಮಾತು ರಾಯರ ಬೃಂದಾವನಕ್ಕೆ ಸಮರ್ಪಣೆ ನೋಡುತ್ತಿರಿ ನನ್ನ ಅಪಮಾನಿಸಿದವರು ಹೇಗೆ ಅಪಮಾನಿತರಾಗುತ್ತಾರೆ ಸಮಾಜದಲ್ಲಿ ಮುಂದೆ. ಕನ್ನಡದ ಅನ್ನ ತಿಂದು ಕನ್ನಡದ ಮಕ್ಕಳಿಗಾಗಿ ಆಡಿದ ಮಾತು ಸ್ವಾರ್ಥಕ್ಕೆ ಬಳಕೆಯಾಗಿ ದುಃಖವಾಯಿತು'' ಎಂದು ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

  'ವಾರಸುದಾರಿಕೆಗಾಗಿ ಸ್ವಪ್ರತಿಷ್ಠೆ ನಟರ ಕೆಟ್ಟಚಿಂತೆ': ಆಘಾತಕಾರಿ ವಿಷಯದ ಬಗ್ಗೆ ಜಗ್ಗೇಶ್ ಮಾತು

  ಒಂದೇ ವಾರದಲ್ಲಿ ದಾಖಲೆಯ ಕಲೆಕ್ಷನ್ ಮಾಡಿತ್ತು ಮಠ ಸಿನಿಮಾ | Elldelu Manjunatha | Filmibeat Kannada
  ಅನ್ಯರ ಹಣೆ ಬರಹಕ್ಕೆ ನಾನೇಕೆ ಹೊಣೆ

  ಅನ್ಯರ ಹಣೆ ಬರಹಕ್ಕೆ ನಾನೇಕೆ ಹೊಣೆ

  ''ಇಂದಿನ ಬಹುತೇಕ ಯುವ ಪೀಳಿಗೆಯ ತಂದೆಯ ವಯಸ್ಸು ನನ್ನದು. ಕನ್ನಡಿಗರದಯೆ ನನ್ನಂಥ ಸಾಮಾನ್ಯನ ಬೆಳಸಿದರು. ನನ್ನಂತೆ ಮುಂದಿನಪೀಳಿಗೆ ಕನ್ನಡದ ಮಕ್ಕಳು ಬೆಳೆಯಲಿ ಎಂದು ಆಶಿಸಿನುಡಿದೆ. ಆಮಾತು ಬಳಸಿದ ರೀತಿಕಂಡು ಜನ್ಮಕ್ಕು ಯಾರಿಗೆ ಬೇಟಿ ಅಭಿಪ್ರಾಯ ಸಾಮಾಜಿಕವಾಗಿ ನೀಡದಂತೆ ನಿರ್ಧರಿಸಿರುವೆ. ಅನ್ಯರ ಹಣೆ ಬರಹಕ್ಕೆ ನಾನೇಕೆ ಹೊಣೆ. ನನಗೆ ಪ್ರೀತಿಸುವರು ಸಾಕು'' ಎಂದು ಜಗ್ಗೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ಅವರ ತಯಾರಿ ಊಟ ಅವರೆ ಉಣ್ಣಬೇಕು

  ಅವರ ತಯಾರಿ ಊಟ ಅವರೆ ಉಣ್ಣಬೇಕು

  ''ಪರಿಸರದಂತೆ ಮಕ್ಕಳು!

  ಪೋಷಣೆಯಂತೆ ಪ್ರಾಣಿ!

  ಗುಣದಂತೆ ಜೀವನ!

  ಅಹಂಕಾರಕ್ಕೆ ದುರ್ಯೋಧನ ಅಂತ್ಯ!

  ನಗುಮುಖಕ್ಕೆ ಸ್ನೇಹದ ಬಂಧ!

  ಕೂಲಿಗೆ ತೆಗಳುವವ ಕೂಲಿಯಾಗೆ ಜೀವನ ಅಂತ್ಯ!

  ಒಂದುದಿನ ಬದುಕಿದರು ಮುಖವಾಡವಿಲ್ಲದೆ ರಾಜನಂತೆ ಬದುಕಬೇಕು!

  ಅವರ ತಯಾರಿ ಊಟ ಅವರೆ ಉಣ್ಣಬೇಕು!

  ಬದುಕು ಕನ್ನಡಿ ನಮ್ಮ ಮುಖ ನಮಗೆ ಕಾಣುತ್ತದೆ!

  ಜಗತ್ತು ಮಾಯಾಬಜಾರು!'' ಎಂದು ಜಗ್ಗೇಶ್ ಪರೋಕ್ಷವಾಗಿ ಪ್ಯಾನ್ ಇಂಡಿಯಾ ಚಿತ್ರಗಳ ಬಗ್ಗೆ ಹೇಳಿದ್ದಾರೆ.

  English summary
  Jaggesh Reaction on People Who Commented Against Him Regarding His Pan India Movie Statement.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X