For Quick Alerts
  ALLOW NOTIFICATIONS  
  For Daily Alerts

  ವಿವಾದದ ನಡುವೆಯೂ ತೋತಾಪುರಿ ಚಿತ್ರೀಕರಣ ಮಾಡಿದ ಜಗ್ಗೇಶ್

  |

  ದರ್ಶನ್ ಅಭಿಮಾನಿಗಳ ಜೊತೆಗಿನ ಕಿತ್ತಾಟದ ನಡುವೆಯೂ ನವರಸ ನಾಯಕ ಜಗ್ಗೇಶ್ ವೃತ್ತಿಪರತೆ ಮೆರೆದಿದ್ದಾರೆ. ಮೈಸೂರಿನಲ್ಲಿ ನಡೆಯುತ್ತಿರುವ ತೋತಾಪುರಿ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿ ಚಿತ್ರತಂಡಕ್ಕೆ ಸಹಕಾರಿಯಾಗಿದ್ದಾರೆ.

  ಜಗ್ಗಣ್ಣ ಇಷ್ಟ ಆಗೋದು ಇದೇ ಕಾರಣಕ್ಕೆ

  ವಿಜಯ್ ಪ್ರಸಾದ್ ನಿರ್ದೇಶನದ ತೋತಾಪುರಿ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದ್ದು, ಇಂದು ಮದುವೆ ದೃಶ್ಯದ ಶೂಟಿಂಗ್ ನಡೆಯಿತು. ಮದುಮಗನ ಗೆಟಪ್‌ನಲ್ಲಿ ನಟ ಜಗ್ಗೇಶ್ ಕಾಣಿಸಿಕೊಂಡಿದ್ದಾರೆ. ಜಗ್ಗೇಶ್ ಜೊತೆ ನಟಿ ಅದಿತಿ ಪ್ರಭುದೇವ, ಸುಮನ್ ರಂಗನಾಥ್, ಹಿರಿಯ ನಟ ದತ್ತಣ್ಣ ಸೇರಿದಂತೆ ಜೂನಿಯರ್ ಕಲಾವಿದರು ಭಾಗಿಯಾಗಿದ್ದರು.

  ಜಗ್ಗೇಶ್-ದರ್ಶನ್ ಅಭಿಮಾನಿಗಳ ವಿವಾದಕ್ಕೆ ಅವರೊಬ್ಬರಿಂದಲೇ ಪರಿಹಾರ ಸಾಧ್ಯ!

  ಜಗ್ಗೇಶ್ ಅವರು ಶೂಟಿಂಗ್ ಭಾಗಿಯಾಗಿದ್ದ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜಗ್ಗೇಶ್ ಅವರ ವೃತ್ತಿಪರತೆಗೆ ಮೆಚ್ಚುಗೆ ವ್ಯಕ್ತವಾಗಿದೆ. ದರ್ಶನ್ ಅಭಿಮಾನಿಗಳ ಜೊತೆಗಿನ ವಿವಾದದಿಂದ ಮಾನಸಿಕವಾಗಿ ನೊಂದಿದ್ದರು, ಚಿತ್ರತಂಡಕ್ಕೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಶೂಟಿಂಗ್ ಮುಂದುವರಿಸಿದ್ದಾರೆ.

  ಸೋಮವಾರ ದರ್ಶನ್ ಅಭಿಮಾನಿಗಳು ತೋತಾಪುರಿ ಸೆಟ್‌ಗೆ ಮುತ್ತಿಗೆ ಹಾಕಿ ನಟ ಜಗ್ಗೇಶ್ ಅವರ ವಿರುದ್ಧ ಧಿಕ್ಕಾರ ಕೂಗಿದ್ದರು. ದರ್ಶನ್ ಅಭಿಮಾನಿಗಳಿಗೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದರು. ಈ ಘಟನೆ ಬಹಳ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸಿತ್ತು.

  'ತೋತಾಪುರಿ' ಚಿತ್ರೀಕರಣ ಆರಂಭಿಸಿದ ಜಗ್ಗೇಶ್-ಅದಿತಿ ಪ್ರಭುದೇವ

  ಈ ವಿಚಾರಕ್ಕೆ ಸಂಬಂಧಿಸಿದಂತೆ ನಟ ಜಗ್ಗೇಶ್ ಟ್ವಿಟ್ಟರ್‌ನಲ್ಲಿ ವಿಡಿಯೋ ಮಾಡಿ ಆಕ್ರೋಶ ಹೊರಹಾಕಿದ್ದರು. ''40 ವರ್ಷದಿಂದ ಚಿತ್ರರಂಗದಲ್ಲಿ ಇದ್ದೇನೆ, ಚಿತ್ರರಂಗ ಹಾಳಾಗಿ ಹೋಗಿದೆ, ರೌಡಿಸಂ, ಸ್ಟಾರ್‌ಡಂ ಅಂತ ಇಂದಿನ ನಟರು ತೊಡಗಿಕೊಂಡಿದ್ದಾರೆ. ಇನ್ಮುಂದೆ ನಾನು ಯಾವುದೇ ಸಿನಿಮಾ ಕಾರ್ಯಕ್ರಮ, ಹುಟ್ಟುಹಬ್ಬ, ಸಮಾರಂಭಗಳಿಗೆ ಹೋಗಲ್ಲ'' ಎಂದು ಬೇಸರ ವ್ಯಕ್ತಪಡಿಸಿದ್ದರು.

  English summary
  Kannada actor Jaggesh, Aditi Prabhudeva and Suman Ranganath resume the shooting of Totapuri at mysuru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X